ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ರುಬಿ ಜುಬಿಲಿ ವರ್ಷಾಚರಣೆ

ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ರುಬಿ ಜುಬಿಲಿ ವರ್ಷಾಚರಣೆ Vishwanath Katti Dental College Ruby Jubilee Year Celebration

ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ರುಬಿ ಜುಬಿಲಿ ವರ್ಷಾಚರಣೆ 



 ಬೆಳಗಾವಿ 03:  ಈ ನಲವತ್ತು ವರ್ಷಗಳಲ್ಲಿ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯ ಅನೇಕ ಸವಾಲುಗಳನ್ನೆದುರಿಸಿ ಸಂಶೋಧನೆಗಳಿಗೆ ಒತ್ತುಕೊಟ್ಟು ಸಾಕಷ್ಟು ನವೀನ ಮಾದರಿಯ ಚಿಕಿತ್ಸೆಗಳನ್ನು ಅಳವಡಿಸಿಕೊಂಡು ರೋಗಿಗಳ ಸೇವೆಯನ್ನು ಮಾಡಿದೆ ಮತ್ತು ಈ ಮುಖಾಂತರ ಉನ್ನತ ಮಟ್ಟದ ವೈದ್ಯರನ್ನು ನಿರಾ​‍್ಮಣ ಮಾಡಿದೆ. ಇಂದು ಮತ್ತು ಮಂದೆ ಯಾವತ್ತು ದಂತವಿದ್ಯಾಲಯ ಸಮುದಾಯದ ಜನರ ಆರೋಗ್ಯದ ಕಡೆ ಗಮನ ನೀಡಿ ಮಾಣಿಕ್ಯ ಮಹೋತ್ಸವವನ್ನು ಹೆಮ್ಮೆಯಿಂದ ಆಚರಿಸುತ್ತಿದ್ದೇವೆ ಎಂದು ಕೆಎಲ್‌ಇ ಅಕಾಡಮಿ ಆಫ್ ಹೈಯರ್ ಎಜುಕೇಷನ್ ಅಂಡ್ ರಿಸರ್ಚನ ಉಪಕುಲಪತಿ ಡಾ. ನಿತಿನ್ ಗಂಗಾನೆ ಹೇಳಿದರು. 


ಕೆ.ಎಲ್‌.ಇ ವಿಶ್ವನಾಥ ಕತ್ತಿ ದಂತ ಮಹಾವಿದ್ಯಾಲಯದಲ್ಲಿ ಡಾ. ಪ್ರೀತಿ ಕೋರೆಯವರ ಮಾರ್ಗದರ್ಶನದಲ್ಲಿ ಆಯೋಜಿಸಲಾಗಿದ್ದ ರುಬಿ ಜುಬಿಲಿ ವರ್ಷಾಚರಣೆ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಸಮಾರಂಭವನ್ನು ಜ್ಯೋತಿ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾರಂಭವಾಗಿ ನಾಲ್ಕು ದಶಕಗಳನ್ನ ಯಶಸ್ವಿಯಾಗಿ ಪೊರೈಸಿ ದಂತಕ್ಷೇತ್ರದಲ್ಲಿ ಅನೇಕ ಸಾಧನೆಗಳನ್ನು ಮಾಡಿ ಜನರಿಗೆ ಹತ್ತಿರವಾಗಿದೆ ಎಂದರು.  


ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲೆ ಡಾ.ಅಲ್ಕಾ ಕಾಳೆ ಮಾತನಾಡಿ 

ವಿದ್ಯಾಲಯ ಶಿಕ್ಷಣ ಮತ್ತು ರೋಗಿಗಳ ಆರೈಕೆಯನ್ನು ನೀಡುವುದರ ಜೊತೆಗೆ ನಗರ ಹಾಗೂ ಗ್ರಾಮೀಣ  ಸಮಾಜದ ಒಟ್ಟಾರೆ ಯೋಗಕ್ಷೇಮ ಮತ್ತು ಸಮುದಾಯದ ಆರೋಗ್ಯದ ಜಾಗ್ರತೆ ಮೂಡಿಸುವ ಕೆಲಸವನ್ನು ಮಾಡುತ್ತಿದೆ. ಸಂಸ್ಥೆಯ ಕಾರ್ಯಾಧ್ಯಕ್ಷ ಹಾಗೂ ಕುಲಪತಿ ಡಾ.ಪ್ರಭಾಕರ ಕೋರೆಯವರ 78ನೇ  ಜನ್ಮದಿನದ ನಿಮಿತ್ತ ಮತ್ತು ವಿದ್ಯಾಲಯದ ರುಬಿ ಜುಬಿಲಿ ಆಚರಣೆಯಲ್ಲಿ ಜನರಿಗಾಗಿ ದಂತ ಚಿಕಿತ್ಸೆಯ ಅನೇಕ ಯೋಜನೆಗಳನ್ನು ಅಳವಡಿಸಿಕೊಂಡು ಸಾರ್ವಜನಿಕರಿಗೆ ತಲುಪಿಸುತ್ತಿದ್ದೇವೆ ಎಂದು ತಿಳಿಸಿದರು.  


ವೇದಿಕೆಯಲ್ಲಿ ಡಾ. ತೇಜಶ್ರೀ ಪ್ರಧಾನ, ಡಾ.ಅಂಜನಾ ಬಾಗೇವಾಡಿ, ಡಾ.ವಿನಾಯಕ ಕುಂಬೋಜಕರ, ಡಾ.ಮೇನಕ ಕೆ.ಬಿ ಉಪಸ್ಥಿತರಿದ್ದರು. ವಿಶ್ವವಿದ್ಯಾಲಯದ, ದಂತ ವಿದ್ಯಾಲಯದ ಸಿಬ್ಬಂದಿಗಳು ಹಲವು ದಂತ ಚಿಕಿತ್ಸಾ ರೋಗಿಗಳು ಉಪಸ್ಥಿತರಿದ್ದರು.