ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ: ಶ್ರೀ ಜಗನ್ನಾಥ ಮಹಾಸ್ವಾಮಿ

ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿಲ್ಲ: ಶ್ರೀ ಜಗನ್ನಾಥ ಮಹಾಸ್ವಾಮಿ Vishwakarma is not limited to just one community: Sri Jagannath Mahaswami

ಮುದ್ದೇಬಿಹಾಳ  18: : ವಿಶ್ವಕರ್ಮರು ಕೇವಲ ಒಂದು ಸಮುದಾಯಕ್ಕೆ ಸೀಮಿತವಾಗಿರದೇ ಭಾರತೀಯ ಕಲೆ, ಸಂಸ್ಕೃತಿ, ತಂತ್ರಜ್ಞಾನದ  ಪ್ರತೀಕವಾಗಿದ್ದಾರೆ ಮಾತ್ರವಲ್ಲದೇ ಜಗತ್ತಿನ ಸುಂದರ ಸಮಾಜ ನಿರ್ಮಾಣಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಬಾಗಲಕೋಟೆಯ ಮುರನಾಳಮಠ ಶ್ರೀ ಜಗನ್ನಾಥ ಮಹಾಸ್ವಾಮಿಗಳು ಹೇಳಿದರು. 

ಪಟ್ಟಣದ ಬಸವನ ನಗರದಲ್ಲಿ ಮೂಲ ವಿಶ್ವಕರ್ಮ ಸಮಾಜ ಬಾಂಧವರ ನೇತೃತ್ವದಲ್ಲಿ ಬುಧವಾರ ನಡೆದ ಶ್ರೀ ವಿಶ್ವಕರ್ಮ ಜಯಂತ್ಯೋತ್ಸವ ಕಾರ್ಯಕ್ರಮದಲ್ಲಿ ಸೃಷ್ಠಿಕರ್ತ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. 

ವಿಶ್ವಕರ್ಮರು ಅಪಾರ ಜ್ಞಾನದಿಂದ ಅರಮನೆಗಳನ್ನು, ಮಹಲುಗಳನ್ನು, ವಾಹನಗಳನ್ನು, ಆಯುಧಗಳನ್ನು ಸೇರಿದಂತೆ ಇನ್ನಿತರ ತಾಂತ್ರಿಕ ವಸ್ತುಗಳನ್ನು ನಿರ್ಮಿಸಿದ್ದಾರೆ. ಪ್ರತಿವರ್ಷ ವಿಶ್ವಕರ್ಮ ಜಯಂತಿಯಂದು ಉಪಕರಣಗಳನ್ನು, ಯಂತ್ರಗಳನ್ನು ಮತ್ತು ಕೈಗಾರಿಕಾ ಘಟಕಗಳನ್ನು ಪೂಜಿಸಲ್ಪಡುವುದು ನಮ್ಮ ಸಮುದಾಯಕ್ಕೆ ಹೆಮ್ಮೆಯ ಸಂಗತಿ ಎಂದರು. 

ಪ್ರಸ್ತುತ ಯುಗದಲ್ಲಿ ನಮ್ಮ ಸಮುದಾಯದವರು ಕೇವಲ ಜೀವನೋಪಾಯಕ್ಕೆ ಮಾತ್ರ ತಮ್ಮ ಜ್ಞಾನವನ್ನು ಬಳಕೆ ಮಾಡುತ್ತಿದ್ದಾರೆ. ಇದು ಬದಲಾಗಬೇಕು ನಮ್ಮ ಪೂರ್ವಿಕರು ಮಾಡಿದ ಸಾಧನೆಯನ್ನು ನೆನೆದು ಆಧುನಿಕ ಯುಗದಲ್ಲಿ ಕಲಾಕ್ಷೇತ್ರದಲ್ಲಿ ಸಾಧನೆಯತ್ತ ಸಾಗಬೇಕು. ಮೂಲಕಸಬುಗಳ ತರಬೇತಿಗಳನ್ನು ನೀಡಿ ಸಮಾಜಕ್ಕೆ ಇನ್ನು ಹೆಚ್ಚಿನ ರೀತಿಯಲ್ಲಿ ಕೊಡುಗೆಯನ್ನು ನೀಡಲು ನಮ್ಮ ಪೀಳಿಗೆಗಳನ್ನು ಸಿದ್ಧಪಡಿಸಬೇಕು ಎಂದರು. 

ಕರಕುಶಲತೆಯ ಬೆಳವಣಿಗೆಯ ಜೊತೆಗೆ ನಮ್ಮ ಜ್ಞಾನದ ಬೆಳವಣಿಗೆಯಾಗಬೇಕು. ವಿಶ್ವಕರ್ಮರ ಜಯಂತಿಯ ಮೂಲ ಉದ್ದೇಶ ಜ್ಞಾನವೃದ್ಧಿ ಹಾಗೂ ಶಿಕ್ಷಣಕ್ಕೆ ಮಹತ್ವ ನೀಡಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ, ರಾಜಕೀಯವಾಗಿ ಬೆಳವಣಿಗೆ ಹೊಂದಬೇಕು ಎಂದರು.  

ಈ ಮೊದಲು  ಹುಡ್ಕೋ ಬಡಾವಣೆಯಲ್ಲಿರುವ ಆಡಳಿತ ಸೌಧದ ಸಭಾಭವನದಲ್ಲಿ ಗಂಟೆಗೆ ತಾಲೂಕಾ ಆಡಳಿತದಿಂದ ಸೃಷ್ಠಿಕರ್ತ ಭಗವಾನ ಶ್ರೀ ವಿಶ್ವಕರ್ಮನ ಭಾವಚಿತ್ರಕ್ಕೆ ಪೂಜೆ ಹಾಗೂ ಮಂಗಳಾರತಿ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ಜರುಗಿತು. 

ಈ ವೇಳೆ ವಿಶ್ವಕರ್ಮ ಸಮಾಜದ ಹಿರಿಯ ಮುಖಂಡರಾದ ನಿವೃತ್ತ ಕಂಟ್ರೋಲರ್ ಈರಣ್ಣ ಬಡಿಗೇರ(ಕೆಎಸ್‌ಆರ್‌ಟಿಸಿ) ಪ್ರಭಾಕರ ಪತ್ತಾರ (ಬಾವೂರ) ಈರಣ್ಣ ಹಂದ್ರಾಳ, ಗುಂಡುರಾವ ಪತ್ತಾರ(ಕವಡಿಮಟ್ಟಿ)ಗುಂಡು ಬಡಿಗೇರ, ಕಾಳಪ್ಪ ಬಡಿಗೇರ, ವಿಠ್ಠಲ ಬಡಿಗೇರ, ಸಂಗಣ್ಣ ಕರಡಿ,ರಾಮಚಂದ್ರ ಬಡಿಗೇರ, ಗಣಿ ಆರ್ ಸಿ ಯ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಚಾರ‌್ಯ ಬಿ ಎಸ್ ಬಡಿಗೇರ ಸೇರಿದಂತೆ ಹಲವರು ಇದ್ದರು.