17ರಂದು ವಿಶ್ವಕರ್ಮ ಜಯಂತಿ ಅರ್ಥಪೂರ್ಣವಾಗಿ ಆಚರಣೆ

17ರಂದು ವಿಶ್ವಕರ್ಮ ಜಯಂತಿ ಅರ್ಥಪೂರ್ಣವಾಗಿ ಆಚರಣೆ  Vishwakarma Jayanti to be celebrated meaningfully on the 17th.

ಲೋಕದರ್ಶನ ವರದಿ 

17ರಂದು ವಿಶ್ವಕರ್ಮ ಜಯಂತಿ ಅರ್ಥಪೂರ್ಣವಾಗಿ ಆಚರಣೆ  

ಕಂಪ್ಲಿ 11: ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿಯ ಪೂರ್ವಭಾವಿ ಸಭೆ ಶುಕ್ರವಾರ ನಡೆಯಿತು.   ನಂತರ ಪ್ರಭಾರಿ ಉಪ ತಹಶೀಲ್ದಾರ್ ರಮೇಶ್ ಮಾತನಾಡಿ, ಇದೇ ಸೆ.17ರಂದು ತಹಶೀಲ್ದಾರ್ ಕಛೇರಿಯಲ್ಲಿ ವಿಶ್ವಕರ್ಮ ಸಮಾಜದ ಸಹಯೋಗದಲ್ಲಿ ವಿಶ್ವಕರ್ಮ ಜಯಂತ್ಯೋತ್ಸವವನ್ನು ಅರ್ಥಪೂರ್ವವಾಗಿ ಆಚರಿಸುವ ಜೊತೆಗೆ  ಆನೆಗುಂದಿ ಮೂಲ ಸಂಸ್ಥಾಪನದ ಸರಸ್ವತಿ ಪೀಠದ ಶ್ರೀ ವಿಶ್ವಕರ್ಮ ಜಗದ್ಗುರು ಶಿವುಕುಮಾರ ಮಹಾಸ್ವಾಮಿ, ಸ್ಥಳೀಯ ಶಾಸಕರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಗೌರವಾನ್ವಿತರಿಗೆ ಗೌರವ ಸನ್ಮಾನ ಆಯೋಜಿಸಿದೆ ಎಂದರು. 

ಈ ಸಂದರ್ಭದಲ್ಲಿ ವಿಶ್ವಕರ್ಮ ಸಮಾಜದ ಅಧ್ಯಕ್ಷ ಡಿ.ರುದ್ರ​‍್ಪ ಆಚಾರ್, ಪ್ರಧಾನ ಕಾರ್ಯದರ್ಶಿಡಿ.ಮೌನೇಶ್, ಮುಖಂಡರಾದ ಎಂ.ಮಂಜುನಾಥ, ಗುರುಮೂರ್ತಿ ಆಚಾರ್, ಅಣ್ಣಿಗೇರಿ ವೀರಭದ್ರ ಆಚಾರ್, ನೀಲಕಂಠಾಚಾರ್, ಗಣೇಶ್ ಆಚಾರ್, ಚಂದ್ರಶೇಖರ ಆಚಾರ್, ನಾರಾಯಣ, ಮೆಟ್ರಿ ಷಣ್ಮುಕ, ರಾಘವೇಂದ್ರ ಸೇರಿದಂತೆ ಸಮಾಜದವರು ಹಾಗೂ ಸಿಬ್ಬಂದಿ ಇದ್ದರು.