ವಿಶ್ವ ಹಿಂದೂ ಪರಿಷತ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಒಕ್ಕೂಟ ಧರಣಿ ಸ್ಥಳಕ್ಕೆ ಭೇಟಿ
Vishwa Hindu Parishad and Retired Government Employees Union visit protest site
ಲೋಕದರ್ಶನ ವರದಿ
ವಿಶ್ವ ಹಿಂದೂ ಪರಿಷತ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಒಕ್ಕೂಟ ಧರಣಿ ಸ್ಥಳಕ್ಕೆ ಭೇಟಿ
ವಿಜಾಪುರ 15: 31ನೇ ದಿನವಾದ ಶನಿವಾರದಂದು ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ ಬರೋಬ್ಬರಿ ಒಂದು ತಿಂಗಳು ತುಂಬಿತು. ಈ ಹೋರಾಟಕ್ಕೆ ಒಂದು ತಿಂಗಳ ಕಳೆದರೂ ಸರ್ಕಾರ ಕಣ್ಣು ಮುಚ್ಚಿ ಕೂತಂತಿದೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಕುರುಬರ ಸಂಘ, ವಿಶ್ವ ಹಿಂದೂ ಪರಿಷತ್ ಹಾಗೂ ನಿವೃತ್ತ ಸರ್ಕಾರಿ ನೌಕರರ ಒಕ್ಕೂಟ ಧರಣಿ ಸ್ಥಳಕ್ಕೆ ಭೇಟಿ ನೀಡಿ ಬೆಂಬಲವನ್ನು ಸೂಚಿಸಿದರು. ವಿಶ್ವ ಹಿಂದೂ ಪರಿಷತ್ ನ ಜಿಲ್ಲಾ ಕಾರ್ಯದರ್ಶಿಗಳಾದ ಸಿದ್ದಣ್ಣ ಹೂಗಾರ ರವರುಮಾತನಾಡುತ್ತಾ ರಾಜ್ಯದ ಕಾಂಗ್ರೆಸ್ ಸರಕಾರ ಕಣ್ಣು ಮುಚ್ಚಿಕುಳಿತಿದೆ. ವಿಜಯಪುರಕ್ಕೆ ಬಹಳ ದೊಡ್ಡ ಅನ್ಯಾಯ ಮಾಡಿದೆ. ರಾಜ್ಯ ಸರಕಾರ ಉತ್ತರ ಕರ್ನಾಟಕಕ್ಕೆ ಸದಾ ಅನ್ಯಾಯ ಮಾಡುತ್ತಾ ಬಂದಿದೆ. ಒಂದು ಕಣ್ಣಿಗೆ ಸುಣ್ಣ ಇನ್ನೊಂದು ಕಣ್ಣಿಗೆ ಬಣ್ಣ ಎಂಬ ನೀತಿ ಅನುಸರಿಸುತ್ತಿದೆ. ಜಿಲ್ಲೆಯ ಸಚಿವರು ಶಾಸಕರುಗಳು ಪಕ್ಷತೀತವಾಗಿ ಜಿಲ್ಲೆಯ ಈ ನ್ಯಾಯುತ ಬೇಡಿಕೆ ಇಡೇರಿಸಲು ಪ್ರಯತ್ನಿಸಬೇಕು ಎಂದರು. ಈ ಹೋರಾಟದಲ್ಲಿ ಯಾವುದೇ ಜಾತಿ ಧರ್ಮದ ವಿಷಯ ಅಡಗಿಲ್ಲ ಇದು ಜಿಲ್ಲೆಯ ಜನರ ವಿಷಯ ಅಡಗಿದೆ. ಈ ಹೋರಾಟ ಪಕ್ಷಾತೀತವಾಗಿ ನಡೆಯುತ್ತಿರುವುದು ಪ್ರಶಂಸನಾರ್ಹ ಹೋರಾಟವಾಗಿದೆ.ಜನತೆಯ ಇದು ನ್ಯಾಯುತ ಹಕ್ಕಾಗಿದ್ದು ಈ ಹೋರಾಟಕ್ಕೆ ವಿಶ್ವ ಹಿಂದೂ ಪರಿಷತ್ ಸಂಪೂರ್ಣ ಬೆಂಬಲ ನೀಡುತ್ತದೆ. ಈ ಹೋರಾಟ ಸರಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಯಾಗುವವರೆಗೂ ಮುಂದೆವರೆಸೋಣ ಎಂದರು. ಕರ್ನಾಟಕ ರಾಜ್ಯ ಕುರುಬರ ಸಂಘದ ರಾಜ್ಯಾಧ್ಯಕ್ಷರಾದಪ್ರಭುಲಿಂಗ ದೊಡ್ಡಿನ ಮಾತನಾಡಿ ವಿಜಯಪುರದಲ್ಲಿ ನಡೀತಾ ಇರೋ ಹೋರಾಟ ಸೂಕ್ತವಾಗಿದೆ, ನ್ಯಾಯಯುತವಾಗಿದೆ. ಕುರುಬ ಸಮಾಜ ಈ ಹೋರಾಟಕ್ಕೆ ಸಂಪೂರ್ಣ ಬೆಂಬಲವಿದೆ ಎಂದು ಅವರು ಹೇಳಿದರು.ಸಂಘದ ವಿಶ್ವನಾಥ ಅಂಬಳನೂರ, ವಕೀಲರು ಹಾಗೂ ಜಿಲ್ಲಾ ಉಪಾಧ್ಯಕ್ಷರು ಸಂತೋಷ ಕುರಿದೊಡ್ಡಿ ಅವರು ಉಪಸ್ಥಿತರಿದ್ದರು.ನಿವೃತ್ತ ಸರ್ಕಾರಿ ನೌಕರರ ಒಕ್ಕೂಟದ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಲೆಂಡಿ ಮಾತನಾಡಿ ಸರ್ಕಾರ ಹಾಗೂ ಶಾಸಕರು ಮನಸ್ಸು ಮಾಡಿದರೆ ಇಂದೇ ಕಾಲೇಜು ಸ್ಥಾಪಿಸಬಹುದು. ಅಷ್ಟು ಜಾಗ ನಮ್ಮ ಸರ್ಕಾರಿ ಆಸ್ಪತ್ರೆಯಲ್ಲಿ ಇದೆ. ಯಾವ ಕಾರಣಕ್ಕಾಗಿ ಇಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಮುಂದಾಗಿದೆ, ಯಾರಿಗೆ ಲಾಭ ಕೊಡಿಸಲು ಈ ಹುನ್ನಾರ ಮಾಡ್ತಾ ಇದಾರೆ ಎಂದರು. ಒಕ್ಕೂಟದ ಸಂಚಾಲಕರಾದ ಸುರೇಶ್ ಜೀಬಿ, ಸಹ ಸಂಚಾಲಕರಾದ ನಬಿಲಾಲ್ ಹರನಾಳ, ಪದಾಧಿಕಾರಿಗಳದ ಮೊಹಮ್ಮದ್ ಇಕ್ಬಾಳ ಅವಟಿ ಇದ್ದರು.ಈ ಸಂದರ್ಭದದಲ್ಲಿ ಹೋರಾಟ ಸಮಿತಿಯ ಸದಸ್ಯರಾದ ಭಗವಾನ್ ರೆಡ್ಡಿ, ಲಲಿತಾ ಬಿಜ್ಜರಗಿ, ಲಕ್ಷ್ಮಣ್ ಕಂಬಾಗಿ, ಗೀರೀಶ್ ಕಲಘಟಗಿ, ಭೋಗೇಶ್ ಸೋಲಾಪುರ್, ಜಗದೇವ್ ಸೂರ್ಯವಂಶಿ, ಸಿದ್ದರಾಮ್ ಹಲ್ಲೂರ್, ಅರವಿಂದ್ ಕುಲಕರ್ಣಿ, ಮಲ್ಲಿಕಾರ್ಜುನ್ ಎಚ್, ಬಾಬು ಬಿಜಾಪುರ, ಶಿವಬಾಲಮ್ಮ ಕೊಂಡಗುಲಿ, ಭಾರತ ಕುಮಾರ್, ಅಕ್ರಮ ಮಾಶಾಲ್ಕರ್, ಸುರೇಶ್ ಬಿಜಾಪುರ, ಮಹಾದೇವಿ ಧರ್ಮಶೆಟ್ಟಿ, ನೀಲಂಬಿಕಾ ಬಿರಾದಾರ, ಸಿದ್ದರಾಮಯ್ಯ ಹಿರೇಮಠ, ವರದಾ ಧರ್ಮಶೆಟ್ಟಿ ಮತ್ತಿರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 