ನ.15 ರಿಂದ ಡಿ.7 ರವರೆಗೆ ವಿಶ್ವ ಬಸವ ಧರ್ಮಪ್ರವಚನ

ನ.15 ರಿಂದ ಡಿ.7 ರವರೆಗೆ ವಿಶ್ವ ಬಸವ ಧರ್ಮಪ್ರವಚನ  Vishwa Basava Dharmapravachana from Nov. 15 to Dec. 7

            ಹುಬ್ಬಳ್ಳಿ 18: ಬಸವ ಜಯಂತಿ 2026 ರ ಹೊತ್ತಿಗೆ ನಿಜ ವಚನಗಳ ಹತ್ತು ಸಂಪುಟಗಳು ಲೋಕಾರೆ​‍್ಣಗೊಳ್ಳಲಿವೆ. ಕರ್ನಾಟಕ ವಿಶ್ವವಿದ್ಯಾಲಯದ ವಚನ ಬ್ಯಾಂಕ್ ನಲ್ಲಿರುವ ವಚನಗಳನ್ನು ಪರಿಶಿಲಿಸಿನಿಜ ವಚನಗಳನ್ನು ಹೊರ ತರುತ್ತಿದ್ದೇವೆ ಎಂದು ಬೆಂಗಳೂರಿನ ಬಸವ ಸಮಿತಿಯ ಅಧ್ಯಕ್ಷ ಅರವಿಂದ ಜತ್ತಿ ಅವರು ಹೇಳಿದರು. ಅವರು ಬಸವಕೇಂದ್ರದ ವತಿಯಿಂದ 2025 ನವೆಂಬರ್ 15 ರಿಂದಡಿಸೆಂಬರ್ 7 ರವರೆಗೆ ಗೋಕುಲ ರಸ್ತೆಯ ಬಸವೇಶ್ವರ ನಗರದ ಸರಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಸಂಜೆ 6 ರಿಂದ 8 ರ ವರೆಗೆತಿಂಗಳ ಪರ್ಯಂತರ ಆಯೋಜಿಸಿರುವ ವಿಶ್ವಬಸವ ಧರ್ಮ ಪ್ರವಚನ ಉಧ್ಘಾಟಿಸಿ ಮಾತನಾಡಿದರು.

            ಎಐಬಳಿಸಿವಿಶ್ವದ 239 ಭಾಷೆಗಳಿಗೆ ವಚನಗಳನ್ನು ಭಾಷಾಂತರ ಗೋಳಿಸುವ ಪ್ರಕ್ರೀಯೆ ಪ್ರಾರಂಭಿಸಲಾಗುವುದು. ಮಠಗಳಿಗೆ ಶರಣತ್ವ, ಬಸವ ತತ್ವದ ಸ್ವಾಮಿಜಿಗಳನ್ನು ತರಬೇತಿ ಗೋಳಿಸಲು ಶಿವಯೋಗ ಮಂದಿರದ ಹಾಗೆ ಬಸವ ನಿಜಯೋಗ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸುವ ಉದ್ದೇಶವನ್ನು ಬಸವ ಸಮಿತಿ ಹೊಂದಿದೆ. ಬಸವ ಪ್ರಜ್ಞೆ ಅಂತರಾಷ್ಟ್ರೀಯಮಟ್ಟದಲ್ಲಿ ಜಾಗೃತಗೊಂಡಿದೆ. ಬಸವ ಸಮಿತಿ ಆನ್ ಲೈನ್ ಅರಿವಿನ ಮೂಲಕ ವಿಭಿನ್ನ ಹಾಗೂ ವೈವಿದ್ಯಮಯ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿದೆ ಎಂದರು.  

             ಶರಣ ಸಾಹಿತಿ ದಂಪತಿಗಳಾದ ಪ್ರೊಸಿದ್ದಣ್ಣಲಂಗೋಟಿ, ಡಾ. ಕಲ್ಯಾಣ ಮ್ಮಲಂಗೋಟಿ ಅವರು ಅನುಭಾವ ನೀಡಿದರು.ವಿಶ್ವದಲ್ಲಿ 18 ಜಾಗತಿಕಧರ್ಮಗಳು 210 ದೇಶಗಳಲ್ಲಿವೆ. ಸೈದ್ಯಾಂತಿಕವಾಗಿ ಲಿಂಗಾಯತ ಧಮ9 ಪರಿಪೂರ್ಣವಾಗಿ ವಿಶ್ವಧರ್ಮ ಎನಿಸಿಕೊಳ್ಳುವಂತಹ ಧರ್ಮವಾಗಿದೆ. ರಾಜಸ್ಥಾನದ ಬನಸ್ಥಲಿ ವಿದ್ಯಾಪೀಠದ ಖಾಸಗಿ ಬನಸ್ಥಲಿ ವಿಶ್ವವಿದ್ಯಾಲಯದಲ್ಲಿ 2026ರ ಬಸವಜಯಂತಿ ಹೊತ್ತಿಗೆ ಬಸವ ಅಧ್ಯಯನ ಪೀಠ ಸ್ಥಾಪನೆಯಾಗುತ್ತಿದೆ.ವಿಶ್ವಗುರು ಬಸವಣ್ಣನವರನ್ನು ಜಗತ್ತಿನ ತತ್ವಜ್ಞಾನಿ, ದಾರ್ಶನಿಕ ಎಂದು ಗುರುತಿಸುವಂತೆ ಮಾಡಬೇಕು ಎಂದರು.  

              ಬೆಳಗಾವಿ ಜಿಲ್ಲೆಯ ಯಮಕನ ಮರಡಿಯ ಹುಣಸಿಕೊಳ್ಳಮಠ, ಶ್ರೀಜಗದ್ದುರು ಶೂನ್ಯಸಂಪಾದನ ಪೀಠದ ಪರಮ ಪೂಜ್ಯಸಿದ್ಧ ಬಸವದೇವರು ಅವರು ಮಾತನಾಡಿ ವಿಶ್ವಗುರು ಬಸವಣ್ಣನವರ ತತ್ವಗಳನ್ನು ಹಾಗೂ ವಚನಗಳಲ್ಲಿರುವ ಬದುಕಿಗೆ ಬೇಕಾಗಿರುವ ಸಾರವನ್ನು ತಿಳಿಸುವ ಕಾರ್ಯವನ್ನು ಪ್ರವಚನ ಮೂಲಕ ತಿಳಿಸಲಾಗುವುದು ಎಂದರು. ಬಸವಕೇಂದ್ರದ ಅಧ್ಯಕ್ಷ ಪ್ರೊಜಿ.ಬಿ.ಹಳ್ಳಾಳ ಅವರು ಅಧ್ಯಕ್ಷತೆ ವಹಿಸಿದ್ದರು ಎಂ.ವಿ.ಗೊಂಗಡಶೆಟ್ಟಿ, ನೀಲಕಂಠ ಅಸೂಟಿ, ಜಯಪ್ರಕಾಶ ಟೆಂಗಿನಕಾಯಿ, ಡಾ. ಪ್ರಕಾಶಮುನ್ನೋಳಿ, ಬಸವಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಬಸವಕೇಂದ್ರದ ಆಜೀವಸದಸ್ಯ, ಗ್ರಂಥಪಾಲಕ ಡಾ. ಸುರೇಶಡಿ. ಹೊರಕೇರಿ, ಕೆ.ಎಸ್‌. ಇನಾಮತಿ, ಎಸ್‌.ವಿ.ಕೊಟಗಿ, ಡಿ.ಡಿ.ಮಾಳಗಿ, ಶಿವಯೋಗಿ ಮುಖ0ಡೆ, ಸುನಿಲಾಬ್ಯಾಹಟ್ಟಿ, ಡಾ. ಪ್ರಸಾದರೂಡಗಿ, ಬಸವರಾಜ ಕಮಡೊಳ್ಳಿ, ರಾಜುಮಿಶ್ರಿಕೋಟಿ, ಎಂಬಿಕಟ್ಟಿ, ನಾಗೇಶ ಅಂಗಡಿ, ಮುಂತಾದವರು ಇದ್ದರು.