ದೇಶಸೇವೆಗೆ ಹೊರಟ ಯುವಕನಿಗೆ ಗ್ರಾಮಸ್ಥರ ಗೌರವ

ದೇಶಸೇವೆಗೆ ಹೊರಟ ಯುವಕನಿಗೆ ಗ್ರಾಮಸ್ಥರ ಗೌರವ Villagers pay tribute to young man who left for national service

ಕುಂದಗೋಳ 28: ತಾಲೂಕಿನ ಯರೇಬೂದಿಹಾಳ ಗ್ರಾಮದ ಕಾರ್ತಿಕ ಈಶ್ವರ​‍್ಪ ನಾಯ್ಕರ ಅವರು ಅಗ್ನಿವೀರ ನೇಮಕಾತಿಯ ಎಲ್ಲ ಹಂತಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಭಾರತೀಯ ಸೇನೆಗೆ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಅವರಿಗೆ ಸನ್ಮಾನಿಸಿ ಅಭಿನಂದಿಸಿದರು.  

ಶನಿವಾರ ರಾತ್ರಿ ಗ್ರಾಮದ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ಮಾಜಿ ಸೈನಿಕ ಮೌಲಾಸಾಬ್ ಸುಂಕದ ಅವರ ನೇತೃತ್ವದಲ್ಲಿ ಕಾರ್ತಿಕ ಅವರಿಗೆ ಗೌರವ ಸಲ್ಲಿಸಲಾಯಿತು.  

ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಪಂಚಾಕ್ಷರಿ ಪೂಜಾರ ಮಾತನಾಡಿ, "ನಮ್ಮ ಗ್ರಾಮದ ಯುವಕ ಸೈನ್ಯಕ್ಕೆ ಆಯ್ಕೆಯಾಗಿರುವುದು ಹೆಮ್ಮೆಯ ಸಂಗತಿ. ಇನ್ನಷ್ಟು ಯುವಕರು ವಿವಿಧ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಿ ಗ್ರಾಮದ ಕೀರ್ತಿಯನ್ನು ಹೆಚ್ಚಿಸಲಿ" ಎಂದು ಶುಭ ಹಾರೈಸಿದರು.  

ಕಾರ್ಯಕ್ರಮದಲ್ಲಿ ಬಸವೇಶ್ವರ ಟ್ರಸ್ಟ್‌ ಸಮಿತಿಯ ಅಧ್ಯಕ್ಷ ಮಾದೇವಪ್ಪ ಪೂಜಾರ, ಮುಡಿಯಣ್ಣವರ ಸರ್, ಪರಮೇಶ್ವರ​‍್ಪ ಕಾರಡಗಿ, ಚನ್ನಪ್ಪ ಮಣಕಟ್ಟಿ, ಮುತ್ತಣ್ಣ ಬಳಿಗಾರ, ಮಾಜಿ ಸೈನಿಕ ಮೌಲಾಸಾಬ್ ಸುಂಕದ ಹಾಗೂ ಗ್ರಾಮದ ಹಿರಿಯರು ಮತ್ತು ಯುವಕರು ಉಪಸ್ಥಿತರಿದ್ದರು.