ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಳಗೊಂಡು ನದಿ ತೀರದ ಗ್ರಾಮಸ್ಥರು ಆತಂಕ
Villagers on the banks of the river are worried as the water level of the Tungabhadra river increase
ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಳಗೊಂಡು ನದಿ ತೀರದ ಗ್ರಾಮಸ್ಥರು ಆತಂಕ
ರಾಣಿಬೆನ್ನೂರು:29 ಮಲೆನಾಡು ಭಾಗಗಳಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ತುಂಗಭದ್ರಾ ನದಿಯ ನೀರಿನ ಪ್ರಮಾಣ ಹೆಚ್ಚಳಗೊಂಡು ನದಿ ತೀರದ ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಈಗಾಗಲೇ ರೈತರೂ ಸಹ ಆಗಾಗ್ಗೆ ಉತ್ತಮ ಮಳೆಯಾಗಿರುವುದರಿಂದ ಮೆಕ್ಕೆಜೋಳ, ಹತ್ತಿ, ಭತ್ತ, ಕಬ್ಬು, ಸೇರಿದಂತೆ ವಿವಿಧ ತರಕಾರಿ ಬೆಳೆಗಳನ್ನು ಬೆಳೆದಿದ್ದಾರೆ. ಎಲ್ಲ ಬೆಳೆಗಳು ಉತ್ತಮವಾಗಿ ಬೆಳೆದಿವೆ ಆದರೆ ನದಿ ನೀರಿನ ಪ್ರಮಾಣ ಹೆಚ್ಚಾಗುವುದರಿಂದ ನದಿ ತೀರದಲ್ಲಿರುವ ಜಮೀನುಗಳು ಜಲಾವೃತಗೊಂಡು ಬೆಳೆಗಳು ನಾಶವಾಗುತ್ತವೆ ಎಂಬ ಭಯದಲ್ಲಿ ರೈತರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಈಗಾಗಲೆ ನದಿ ತೀರದಲ್ಲಿರುವ ರೈತರ ಪಂಪಸೆಟ್‌ಗಳು ನದಿಯಲ್ಲಿ ಸಂಪೂರ್ಣ ಮುಳುಗಡೆಯಾಗಿವೆ. ಇನ್ನೂ ಕೆಲ ರೈತರು ಪಂಪಸೆಟ್‌ಗಳನ್ನು ನದಿಯಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುತ್ತಿರುವ ದೃಶ್ಯ ಸಾಮಾನ್ಯವಾಗಿ ಕಂಡು ಬರುತ್ತಿದೆ. ಸೋಮವಾರ ದೀಢೀರನೆ ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಹೀಗೆ ಮುಂದುವರೆದರೆ ತಾಲೂಕಿನ ನದಿ ತೀರದ ಕೆಲ ಗ್ರಾಮಗಳ ರಸ್ತೆಗಳು ಕಡಿತಗೊಳ್ಳುವ ಸಾಧ್ಯತೆ ಇದೆ.
ತಾಲೂಕಿನ ಮಾಕನೂರ, ಹರನಗಿರಿ, ಮೇಡ್ಲೇರಿ, ಹಿರೇಬಿದರಿ, ಚೌಡಯ್ಯದಾನಪುರ, ಮುದೇನೂರು, ಚಿಕ್ಕಕುರುವತ್ತಿ, ಐರಣಿ, ಉದಗಟ್ಟಿ, ಚಂದಾಪುರ, ಹೀಲದಹಳ್ಳಿ, ಬೇಲೂರು, ಕೋಣನತಂಬಿಗೆ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಕಂಡು ಬರುವ ತುಂಗಭದ್ರ ನದಿ ಮೈದುಂಬಿ ಹರಿಯುತ್ತಿರುವ ಮನಮೋಹಕ ದೃಶ್ಯ ಕಂಡು ಬರುತ್ತಿದೆ ಇದರ ಜೊತೆಗೆ ಗ್ರಾಮಸ್ಥರಲ್ಲಿ ಭಯದ ವಾತಾವರಣವೂ ಸಹ ನಿರ್ಮಾಣವಾಗಿದೆ.
ನದಿಗೆ ನೀರು ಬಿಡುವ ವಿಚಾರವಾಗಿ ತಾಲೂಕು ಆಡಳಿತ ಹಾಗೂ ಗ್ರಾಪಂನವರು ನದಿ ತೀರದ ಜನರು ಎಚ್ಚರಿದಂದ ಇರುವಂತೆ ನದಿ ನೀರಿನ ಪ್ರಮಾಣ ಹೆಚ್ಚಳವಾಗಲಿದೆ ಎಂಬ ಜಾಗೃತಿಯ ಬಗ್ಗೆ ನದಿ ತೀರದ ಜನರಿಗೆ ತಿಳಿಸದೆ ಇರುವುದು ವಿಪರ್ಯಾಸವೆ ಸರಿ. ಒಟ್ಟಿನಲ್ಲಿ ಸೋಮವಾರ ನದಿ ನೀರಿನ ಪ್ರಮಾಣ ದೀಢೀರನೆ ಏರಿಕೆಯಾಗುತ್ತಿರುವುದರಿಂದ ನದಿ ತೀರದ ಗ್ರಾಮಸ್ಥರಲ್ಲಿ ಹಾಗೂ ರೈತರಲ್ಲಿ ಆತಂಕದ ಮನೆ ಮಾಡಿದೆ.
ಉತ್ತಮ ಮಳೆಯಾಗಿರುವುದರಿಂದ ಮೆಕ್ಕೆಜೋಳ ತುಂಬಾ ಚೆನ್ನಾಗಿ ಬೆಳೆದಿದೆ. ಆದರೆ ಇವತ್ತು ನದಿ ನೀರಿನ ಪ್ರಮಾಣ ಹೆಚ್ಚಾಗುತ್ತಿರುವುದು ನೋಡಿದರೆ ನಮ್ಮ ಬೆಳೆಗಳು ಸಂಪೂರ್ಣ ಜಲಾವೃತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ. ಹೀಗಾದರೆ ನದಿ ತೀರದ ರೈತರು ತುಂಬಾ ಸಂಕಷ್ಟದಲ್ಲಿ ಸಿಲುಕುತ್ತಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 