ಬಣ್ಣ ಎರಚಾಡುವ ಮೂಲಕ ಹೋಳಿ ಸಂಭ್ರಮಿಸಿದ ಗ್ರಾಮಸ್ಥರು
Villagers celebrated Holi by throwing colors
ಲೋಕದರ್ಶನ ವರದಿ
ಬಣ್ಣ ಎರಚಾಡುವ ಮೂಲಕ ಹೋಳಿ ಸಂಭ್ರಮಿಸಿದ ಗ್ರಾಮಸ್ಥರು
ಶಿಗ್ಗಾವಿ : ಪಟ್ಟಣದಲ್ಲಿರಂಗಿನ ಹಬ್ಬ ಹೋಳಿ ಹುಣ್ಣಿಮೆಯನ್ನು ಯುವಕರು,ಮಹಿಳೆಯರು, ಚಿಣ್ಣರು ಪರಸ್ಪರ ಬಣ್ಣಎರಚಿ ಸಂಭ್ರಮಿಸಿದರು.
ಶಿಗ್ಗಾವಿಯ ಐತಿಹಾಸಿಕ ಕಾಮಣ್ಣನಕಟ್ಟೆ, ಚೌಡಿಕಟ್ಟೆ, ಹಳೆ ಪೇಟೆಯಗಣೇಶನಕಟ್ಟೆ, ಜೋಳದ ಪೇಟೆ, ಜಯನಗರ ಬಳಿ ಪ್ರತಿಷ್ಟಾಪನೆ ಮಾಡಿದ್ದಕಾಮಣ್ಣನನ್ನು ಬೆಳಿಗ್ಗೆ 6 ಗಂಟೆಗೆ ಹಿರಿಯರ ಸಮ್ಮುಖದಲ್ಲಿ ವಿಶೇಷ ಪೂಜೆ, ವಾದ್ಯಮೇಳದೊಂದಿಗೆ ದಹಿಸಲಾಯಿತು.
ಐತಿಹಾಸಿಕ ಕಾಮಣ್ಣನಕಟ್ಟೆ ಬಳಿ ಪ್ರತಿಷ್ಟಾಪನೆ ಮಾಡಿದ್ದಕಾಮಣ್ಣನ ಮೂರ್ತಿಯನ್ನು ಮೊದಲು ದಹಿಸಿದ ನಂತರ, ಅಲ್ಲಿನ ಬೆಂಕಿಯಿಂದ ಪಟ್ಟಣದ ವಿವಿಧ ಬಡಾವಣೆಗಳಲ್ಲಿ ಪ್ರತಿಷ್ಠಾಪಿಸಿದ ಕಾಮಣ್ಣನ ಮೂರ್ತಿಗಳನ್ನು ದಹಿಸುವು ಮೂಲಕ ಪೂರ್ವಜರ ಹಬ್ಬದ ಸಂಪ್ರದಾಯ ಮುಂದುವರಿಸಿದರು.
ಹೋಳಿ ಹಬ್ಬದಲ್ಲಿಯುವಕರ ಮತ್ತುಚಿಣ್ಣರಅಬ್ಬರಜೋರಾಗಿತ್ತು. ಪರಸ್ಪರ ಬಣ್ಣಎರಚಿಡಿಜೆ ಹಾಡಿಗೆಕುಣಿದು ಸಂಭ್ರಮಿಸಿದರು.ಬೈಕ್‌ಗಳಲ್ಲಿ ಹಲಗೆ ಬಾರಿಸುತ್ತ ಗುಂಪುಗಳಾಗಿ ಸಂಚರಿಸಿ, ಕೆಲವು ಯುವಕರುತಲೆಗೆ ಮೊಟ್ಟೆ ಸಿಡಿಸಿ ಹಬ್ಬ ಆಚರಿಸಿದರು.
ಭಾಕ್ಸ ಸುದ್ದಿ : ಪಟ್ಟಣದ ಜೋಳದ ಪೇಟೆಯ ಮಹಿಳೆಯರು ಬಣ್ಣದ ಮಡಿಕೆ ಹೊಡೆಯುವಲ್ಲಿ ಸಂಜನಾರಾಯ್ಕರ, ರೂಪಾ ಬಗಾಡೆ, ವಿದ್ಯಾ ಮುಂಡಗೋಡ, ಕಾವ್ಯ ಬಗಾಡೆ, ರೂಪಾ, ಸುನಂದಾಗಂಟಿ, ಅನಿತಾ ಉಳ್ಳಟ್ಟಿ ಸೇರಿದಂತೆಇತರರು ಆಚರಿಸಿದರು.
ಬಣ್ಣದಲ್ಲಿ ಮಿಂದೆದ್ದಚಿಣ್ಣರು, ಯುವಕರು ವಿವಿಧ ವೇಷಗಳನ್ನು ಧರಿಸಿ ಅಣಕು ಶವಯಾತ್ರೆ ನಡೆಸಿದರು.ಬಾಯಿ ಬಡಿದುಕೊಳ್ಳುತ್ತ ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಹೋಳಿ ಸಂಭ್ರಮ ಪಟ್ಟಣದಲ್ಲಿ ಸುಡು ಬಿಸಿಲ ನಡುವೆಯೂ ಸಂಭ್ರಮದಿಂದ ಆಚರಿಸಿದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 