ನೀರು ಬಳಕೆದಾರರ ಸಹಕಾರ ಸಂಘಗಳ, ರೈತರಿಗೆ ಗ್ರಾಮ ಮಟ್ಟದ ತರಬೇತಿ
Village level training for water user cooperatives and farmers
ಧಾರವಾಡ 19: ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ವತಿಯಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ದಾವಣಗೆರೆ ಜಿಲ್ಲೆಯ, ದಾವಣಗೆರೆ ತಾಲೂಕಿನ ಶ್ಯಾಗಲೆ ಗ್ರಾಮದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಹಾಗೂ ರೈತರಿಗೆ ಗ್ರಾಮ ಮಟ್ಟದ ತರಬೇತಿಯನ್ನು ಇತ್ತೀಚೆಗೆ ಹಮ್ಮಿಕೊಳ್ಳಲಾಗಿತ್ತು.
ಈ ತರಬೇತಿಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಧಾರವಾಡದ ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆಯ ಪ್ರಾಧ್ಯಾಪಕರಾದ ಶ್ರೀ ಜಿ. ಭೀಮಾನಾಯ್ಕ ರವರು ವಹಿಸಿದ್ದರು. ಇವರು ಜಲಾಶಯದಿಂದ ಕಾಲುವೆಗಳ ಮೂಲಕ ಬರುವ ನೀರಿನ ಸದ್ಬಳಕೆ ಮಾಡುವಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ಕಾರಣ ನೀರು ಬಳಕೆದಾರರ ಸಹಕಾರ ಸಂಘದ ಎಲ್ಲ ನಿರ್ದೇಶಕರು, ಪದಾಧಿಕಾರಿಗಳು ಕಾಲಕಾಲಕ್ಕೆ ಸಭೆಗಳನ್ನು ನಡೆಸಿ ನೀರಾವರಿ ನಿಗಮದಿಂದ ನಿಮ್ಮ ಸಂಘಕ್ಕೆ ಹಂಚಿಕೆಯಾಗುವ ನೀರಿನ ಪ್ರಮಾಣ ಕುರಿತು ಚರ್ಚಿಸಿ ಎಲ್ಲ ರೈತರಿಗೆ ಸಮರ್ಕ ರೀತಿಯಲ್ಲಿ ನೀರು ತಲುಪುವಂತೆ ಸಹಕಾರ ಮನೋಭಾವದಿಂದ ಕಾಲುವೆ ನೀರನ್ನು ಉಪಯೋಗಿಸಿಕೊಳ್ಳಬೇಕು. ಅದೇ ರೀತಿ ನೀರಿನ ಕರ ಸಂಗ್ರಹಣೆ ಬಗ್ಗೆ ಕೂಡಾ ಚರ್ಚಿಸಿ ಕಾಲಕಾಲಕ್ಕೆ ನೀರಿನ ಕರ ಸಂಗ್ರಹಣೆ ಮಾಡಿ ಸಂಘದ ಆರ್ಥಿಕ ಬಲವರ್ಧನೆ ಮಾಡಿಕೊಳ್ಳಬೇಕು. ಹಾಗೂ ನೀ.ಬ.ಸ.ಸಂಘದ ಎಲ್ಲ ದಾಖಲಾತಿಗಳನ್ನು ಸರಿಯಾಗಿ ನಿರ್ವಹಣೆ ಮಾಡಿ ಕಾಡಾ ಇಲಾಖೆಯ ಮೂಲಕ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಸಂಘಗಳನ್ನು ಬಲವರ್ಧನೆಗೊಳಿಸುವಂತೆ ಕರೆ ನೀಡಿದರು.
ಶ್ರೀ ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಉಪನ್ಯಾಸದಲ್ಲಿ ನೀರು ಬಳಕೆದಾರರ ಸಹಕಾರ ಸಂಘಗಳ ಆಡಳಿತ ನಿರ್ವಹಣೆ, ಪದಾಧಿಕಾರಿಗಳ ಹಾಗೂ ಸದಸ್ಯರ ಕರ್ತವ್ಯಗಳು ಮತ್ತು ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಇದಲ್ಲದೆ ನೀರು ಬಳಕೆದಾರರ ಸಹಕಾರ ಸಂಘಗಳ ಆರ್ಥಿಕ ಬಲವರ್ಧನೆಗೆ ಕಾಡಾ ಇಲಾಖೆಯಿಂದ ಇರುವ ಸರ್ಕಾರದ ಸೌಲತ್ತುಗಳ ಬಗ್ಗೆ ಹಾಗೂ ನೀರಿನ ಕರ ಆಕರಣೆ ಮತ್ತು ಸಂಗ್ರಹಣೆ ಬಗ್ಗೆ ಮಾಹಿತಿ ನೀಡಿದರು.
ಶ್ರೀ ಎಸ್. ಬಿ. ರಾಜಶೇಖರ, ನಿವೃತ್ತ ಸಹಾಯಕ ಕೃಷಿ ನಿರ್ದೇಶಕರು, ದಾವರಣಗೆರೆ ಇವರು ಮಾತನಾಡುತ್ತಾ ಭತ್ತದ ಬೆಳೆಯಲ್ಲಿ ನೀರು ನಿರ್ವಹಣೆ, ರೋಗ ಮತ್ತು ಕೀಟಗಳ ನಿರ್ವಹಣೆ ಹಾಗೂ ಗದ್ದೆಯಲ್ಲಿ ಹಸಿರೆಲೆ ಗೊಬ್ಬರದ ಬೆಳೆಗಳನ್ನು ಬೆಳೆದು ಮಣ್ಣಿನ ಫಲವತ್ತತೆ ಹೆಚ್ಚಿಸುವ ವಿಧಾನಗಳ ಬಗ್ಗೆ ಉಪನ್ಯಾಸ ನೀಡಿದರು. ಅಲ್ಲದೇ ಅಡಿಕೆ ಬೆಳೆಯಲ್ಲಿ ಕಾಂಪೋಸ್ಟ ಗೊಬ್ಬರ ತಯಾರಿಕೆ ವಿಧಾನ, ಅಂತರ ಬೆಳೆ ಪದ್ಧತಿ ಹಾಗೂ ರೋಗ, ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಶ್ರೀ ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಎಲ್ಲರಿಗೂ ಸ್ವಾಗತಿಸಿದರು ಹಾಗೂ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕಾರ್ಯಕ್ರಮದಲ್ಲಿ ಶ್ರೀ ನಾಗರಾಜ ತಹಶೀಲ್ದಾರ, ಸಹಾಯಕ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮದ ನಿರೂಪಣೆ ಮಾಡಿದರು ಮತ್ತು ಎಲ್ಲರಿಗೂ ವಂದನಾರೆ್ಣ ಮಾಡಿದರು.
ಕಾರ್ಯಕ್ರಮದಲ್ಲಿ ಶ್ಯಾಗಲೆ ಗ್ರಾಮದ ನೀ.ಬ.ಸ.ಸಂಘದ ಅಧ್ಯಕ್ಷರಾದ ಶ್ರೀ ಎಂ. ಪಿ. ಕುಬೇರ್ಪ, ದುಂಡಿ ಬಸವೇಶ್ವರ ನೀ.ಬ.ಸ.ಸಂಘದ ಅಧ್ಯಕ್ಷರಾದ ಶ್ರೀ ಕೆ. ಪಿ. ಬಸವರಾಜಪ್ಪ, ಕರಿಸಿದ್ದೇಶ್ವರ ನೀ.ಬ.ಸ.ಸಂಘದ ಅಧ್ಯಕ್ಷರಾದ ಶ್ರೀ ಚಂದ್ರ್ಪ, ಮಳಲಕರೆ ನೀ.ಬ.ಸ.ಸಂಘದ ಅಧ್ಯಕ್ಷರಾದ ಶ್ರೀ ಮುರುಗೇಂದ್ರ್ಪ, ಹೂವಿನಮಡು ನೀ.ಬ.ಸ.ಸಂಘದ ನಿರ್ದೇಶಕರು ಶ್ರೀ ಹೆಚ್. ಪ್ರಭು, ಕಂದಗಲ್ಲು ನೀ.ಬ.ಸ.ಸಂಘದ ಅಧ್ಯಕ್ಷರಾದ ಶ್ರೀ ರೇಣುಕಾ ಪ್ರಸಾದ, ಶ್ಯಾಗಲೆ ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 