ನಮ್ಮ ಹೊಲ, ನಮ್ಮ ಕೆರೆ ಭಾವನೆ ಬೆಳೆಸಿಕೊಂಡರೆ ಗ್ರಾಮ ಸ್ವರಾಜ್ಯ: ಬೊಮ್ಮಾಯಿ
Village Swarajya if we develop the feeling of our field, our lake: Bommai
ಲೋಕದರ್ಶನ ವರದಿ
ಶಿಗ್ಗಾವಿ 22: ರಾಜ್ಯ ಸರ್ಕಾರಕ್ಕೆ ರೈತರನ್ನು ಉಳಿಸಿಕೊಳ್ಳಬೇಕೆಂಬ ಮನಸಿದ್ದರೆ ಕೆರೆಗಳನ್ನು ಉಳಿಸಿ ನಿರ್ವಹಣೆ ಮಾಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ತಾಲೂಕಿನ ತಡಸ ಗ್ರಾಮದಲ್ಲಿರುವ ಕಂಚಿಟಗಾರ ಕೆರೆಯನ್ನು ಭಾರತ ಸೇವಾ ಸಂಸ್ಥೆವತಿಯಿಂದ ಉಚಿತವಾಗಿ ಕೆರೆ ಉಳೆತ್ತುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಶಿಗ್ಗಾವಿ ಸವಣೂರು ತಾಲೂಕುಗಳು ಕೆರೆಗಳಿಂದ ಕೂಡಿವೆ. ಸುಮಾರು ಐನೂರು ಕೆರೆಗಳಿವೆ. ಅವುಗಳಲ್ಲಿ ಕನಿಷ್ಟ 100 ದೊಡ್ಡ ಕೆರೆಗಳಿವೆ. 150 ಕ್ಕಿಂತ ಹೆಚ್ಚು ದೊಡ್ಡ ಮತ್ತು ಸಣ್ಣ ಕೆರೆಗಳಿಗೆ ನೀರು ತುಂಬಿಸುವ ಕೆಲಸ ಮಾಡಬೇಕು.
2015, 16, 17 ರಲ್ಲಿ ಬರಗಾಲ ಸಂದರ್ಭದಲ್ಲಿ ದೊಡ್ಡ ಪ್ರಮಾಣದಲ್ಲಿ ಕೆರೆ ಹೂಳು ತೆಗೆಯುವ ಕೆಲಸ ಆಯಿತು. ಇಂತಹ ಭಗೀರಥ ಕೆಲಸಕ್ಕೆ ಶ್ರೀಕಾಂತ ದುಂಡಿಗೌಡ್ರ ಭಾರತ ಸೇವಾ ಸಂಸ್ಥೆ ಕೆರೆಗಳ ಹೂಳು ತೆಗೆಯಲು ದೊಡ್ಡ ಸಹಾಯ ಮಾಡಿದೆ. ಪ್ರತಿಯೊಂದು ಜಿಲ್ಲಾ ಪಂಚಾಯತಿಯಲ್ಲಿ ಕನಿಷ್ಟ ಒಂದು ಕೆರೆ ಹೂಳೆತ್ತುವ ತೀರ್ಮಾನ ಮಾಡಿದ್ದಾರೆ. ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಅಲ್ಲದೇ ಇದದಿಂದ ಪ್ರೇರಣೆ ಪಡೆದು ಇನ್ನಷ್ಟು ಜನರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಹೂಳು ತೆಗೆಯುವ ಭಾವನೆ ಬೆಳೆಸಿಕೊಂಡರೆ ಹಳ್ಳಿಗಳು ಸ್ವರಾಜ್ಯ ಆಗುತ್ತವೆ. ಆ ನಿಟ್ಟಿನಲ್ಲಿ ಶ್ರೀಕಾಂತ ಅವರ ಪ್ರಯತ್ನಕ್ಕೆ ಧನ್ಯವಾದ ಸಲ್ಲಿಸುತ್ತೇನೆ ಎಂದರು.
ಚಲನಚಿತ್ರ ನಿರ್ದೇಶಕ ಅನಿರುದ್ದ ವಿಷ್ಣುವರ್ಧನ ಮಾತನಾಡಿ ಬೆಂಗಳೂರಿನ ಇನ್ನೂ ಕೆಲವು ಕೆರೆಗಳ ಜೀರ್ಣೋದ್ಧಾರ ಮಾಡಬೇಕು ಎಂಬ ಸಂಕಲ್ಪ ಇದೆ. ಕೆರೆ ಉಳೆತ್ತುವ ಕಾರ್ಯಕ್ರಮ ಒಬ್ಬರೇ ಮಾಡೋದಿದೆಯಲ್ಲ ಅದು ಕಷ್ಷದ ಕೆಲಸ ಸಾಕಷ್ಟು ಸವಾಲುಗಳನ್ನು ಎದುರಿಸಿ ಕೆರೆ ಉಳೆತ್ತುವ ಕೆಲಸ ಮಾಡುತ್ತಿರುವ ಶ್ರೀಕಾಂತ ದುಂಡಿಗೌಡ್ರ ಸೇವೆ ಶ್ಲಾಘನೀಯ ಹಾಗೂ ಶ್ರೀಕಾಂತವರ ಸೇವೆ ಈ ಭಾಗಕ್ಕೆ ಸೀಮಿತವಾಗದೇ ಇಡಿ ಕರ್ನಾಟಕಕ್ಕೆ ಭಗೀರಥ ಆಗಬೇಕು ಎಂದು ಹಾರೈಸಿದರು.
ಭಾರತ ಸೇವಾ ಸಂಸ್ಥೆ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ ಸಂಸ್ಥೆ ಅನೇಕ ವರ್ಷಗಳಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಅಲ್ಲದೇ ಕೆರೆಯ ಅತ್ಯಂತ ಫಲವತ್ತತೆ ಮಣ್ಣನ್ನು ತಮ್ಮ ಕೃಷಿ ಭೂಮಿಗೆ ಬಳಸಿ ಹೆಚ್ಚಿನ ಇಳುವರಿ ಪಡೆಯುವಂತೆ ಆಗಬೇಕು ಎನ್ನುವ ಉದ್ದೇಶದ ಜೊತೆಗೆ ಪರಿಸರ ಸಂರಕ್ಷಣೆ ಭಾಗವಾದ ನೀರಿನ ಶೇಖರಣೆ ಹೆಚ್ಚಿಸುವುದು, ಅಂತರ್ಜಲ ಭಲವರ್ದನೆ ಗೋಳಿಸುವುದು,
ಸುತ್ತ ಮುತ್ತಲಿನ ನೀರಿಲ್ಲದೆ ಬತ್ತಿ ಹೋದ ಕೊಳವೆ ಭಾವಿಗೆ ಮತ್ತೆ ಚಾಲನೆ ದೊರೆಯುವಂತೆ ಮಾಡುವುದೆ ನಮ್ಮ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು. ದಿವ್ಯಸಾನಿಧ್ಯವಹಿಸಿ ಗಂಜೀಗಟ್ಟಿ ಡಾ ವೈಜನಾಥ ಶಿವಾಚಾರ್ಯ ಮಹಾಸ್ವಾಮಿಗಳು ಆರ್ಶಿವದಿಸಿದರು. ಈ ಸಂದರ್ಭದಲ್ಲಿ ಮಹೇಂದ್ರ ಸಿಂಘೆ, ಜಯದೇವ ಅಗಡಿ, ಪ್ರಕಾಶ ದಾಸನೂರ, ವರುಣಗೌಡ್ರ ಪಾಟೀಲ, ಬಿ.ಟಿ.ಇನಾಮತಿ, ತಿಪ್ಪಣ್ಣ ಸಾತಣ್ಣವರ, ವಿಶ್ವನಾಥ ಹರವಿ, ಶಿವಾನಂದ ಮ್ಯಾಗೇರಿ,ಮಲ್ಲೇಶಪ್ಪ ಹರಿಜನ, ಅರ್ಜುನ ಹಂಚಿನಮನಿ, ಬಸಲಿಂಗಪ್ಪ ನರಗುಂದ, ಶಿವಾನಂದ ಸೊಬರದ, ಸೇರಿದಂತೆ ಅರುಣ ಹುಡೇದಗೌಡ್ರ, ಬಿ. ಶ್ರೀನಿವಾಸ, ರವಿ ಮಡಿವಾಳರ, ವಿಶ್ವನಾಥ ಗಾಣಿಗೇರ, ಸಚೀನ ಕಲಾಲ, ನಾಗರಾಜ, ಸಚಿನ, ತಡಸ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು. ನವೀನ ಸಾಸನೂರ ಕಾರ್ಯಕ್ರಮ ನಿರ್ವಹಿಸಿದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 