ವಿಚಕ್ಷಣಾ ದಳ ದಾಳಿ: ಓರ್ವನ ಮೇಲೆ ಪ್ರಕರಣ ದಾಖಲು
Vigilance team attack: Case registered against one person
ಅಥಣಿ, 16 ; ಸರಕಾರಿ ಎಮ್.ಎಸ್.ಐ.ಎಲ್ ಪಕ್ಕದಲ್ಲಿಯೇ ಅಕ್ರಮವಾಗಿ ಗೋವಾ ರಾಜ್ಯದ ಮಧ್ಯವನ್ನು ವಿಶೇಷ ವಿಚಕ್ಷಣಾ ದಳದ ಸಿಬ್ಬಂದಿ ದಾಳಿ ಮಾಡಿ ವಶಪಡಿಸಿಕೊಂಡು ಓರ್ವನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಕಟನೂರ ರಸ್ತೆಯಲ್ಲಿರುವ ಬುರ್ಲಟ್ಟಿ ರೇಣುಕಾ ಸಕ್ಕರೆ ಕಾರಖಾನೆಯ ಹತ್ತಿರ ಇರುವ ಬುರ್ಲಟ್ಟಿಯ ಎಮ್.ಎಸ್.ಐ.ಎಲ್ ಪಕ್ಕದಲ್ಲಿರುವ ಅಂಗಡಿ ಮಾಲಿಕ ವಿಠ್ಠಲ್ ಲಕ್ಷ್ಮಣ ಹುದ್ದಾರ ಕಿರಾಣಿ ಅಂಗಡಿಯಲ್ಲಿ ಗೋವಾ ರಾಜ್ಯದ ವಿವಿಧ ಕಂಪನಿಗಳ 180 ಎಮ್.ಎಲ್ ನ 12 ಬಾಟೆಲ್ ಗಳು, ಕರ್ನಾಟಕ ರಾಜ್ಯದ 90. ಎಮ್.ಎಲ್.ನ 30 ಟೆಟ್ರಾ ಪ್ಯಾಕಗಳು ಒಟ್ಟು 42 ಮಧ್ಯದ ಬಾಟೆಲ್ ಗಳನ್ನು ಅಂಗಡಿಯಿಂದ ವಶಪಡಿಸಿಕೊಳ್ಳಲಾಗಿದೆ ಎಂದು ಚಿಕ್ಕೋಡಿ ವಿಚಕ್ಷಣ ದಳದ ಅಧಿಕಾರಿ ರಾಜು ಗೊಂಡೆ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಅಬಕಾರಿ ಅಧಿಕಾರಿಗಳ ನಿರ್ಲಕ್ಷ-ಅನೇಕ ವರ್ಷಗಳಿಂದ ಸರಕಾರಿ ಎಮ್.ಎಸ್.ಐ.ಎಲ್ ಅಂಗಡಿಗೆ ಹೊಂದಿಕೊಂಡಿರುವ ಕಿರಾಣಿ ಅಂಗಡಿಯಲ್ಲಿ ಗೋವಾ ರಾಜ್ಯದ ಮಧ್ಯ ಮಾರಾಟ ಮಾಡುತ್ತಿದ್ದರೂ ಕೂಡ ಅಬಕಾರಿ ಇಲಾಖೆ ಅಧಿಕಾರಿಗಳು ಕಣ್ಣಿದ್ದು ಕುರುಡನಂತೆ ವರ್ತಿಸುತ್ತಿರುವುದು ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಅಧಿಕಾರಿಗಳ ಈ ನಿರ್ಲಕ್ಷದಿಂದ ಅಬಕಾರಿ ಆದಾಯಕ್ಕೆ ಹೊಡೆತ ಬಿದ್ದಂತಾಗಿದ್ದು, ಇಂತಹ ಅಧಿಕಾರಿಗಳ ಕ್ರಮ ಜರುಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ದಾಳಿಯಲ್ಲಿ ಚಿಕ್ಕೋಡಿ ವಿಚಕ್ಷಣಾ ದಳದ ಹುಸೇನಸಾಬ ನದಾಫ, ಶಾಂತಿನಾಥ ನಾಗುರಾಮ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 