ಬರದಿಂದ ಸಾಗಿರುವ ವಿಘೇಶ್ವರ, ಗಂಗಾ ಮಾತಾ ಮಾತಾ ಮೂತರ್ಿ ಪ್ರತಿಷ್ಠಾಪನಾ ಕಾರ್ಯ
ಶೋ ಸುಮಾರು 45 ನಿಮಿಷ ಶೋ ಇದ್ದು. ಕಡಿಮೆ ದರದಲ್ಲ್ಲಿ 10 ಹಾಗೂ 20 ರೂಗಳಲ್ಲಿ ವವ್ಯಸ್ಥೆ ಮಾಡಲಾಗಿದೆ, ಕುಳಿತುಕೊಳ್ಳಲು ಆ
ಲೋಕದರ್ಶನ ವರದಿ
ರಾಣೇಬೆನ್ನೂರು10: ಇಲ್ಲಿನ ಕಾಕಿ ಜನಸೇವಾ ಟ್ರಸ್ಟ್ ವತಿಯಿಂದ ಈ ಬಾರಿಯ ಗಣೇಶೋತ್ಸವದ ಅಂಗವಾಗಿ ಬಾಹುಬಲಿ ವಿಘೇಶ್ವರ ಮಹಾರಾಜ ಹಾಗೂ ಹರ ಹರ ಗಂಗಾ ಮಾತಾ ಮೂತರ್ಿ ಪ್ರತಿಷ್ಠಾಪನೆಯ ಸಲುವಾಗಿ ಬೃಹತ್ ಮಂಟಪದ ನಿಮರ್ಾಣ ಕಾರ್ಯ ಭರದಿಂದ ಸಾಗುತ್ತಿದೆ.
ಸುಮಾರು 30ಲಕ್ಷಕ್ಕೂ ಅಧಿಕ ವೆಚ್ಚದಲ್ಲಿ ಇದನ್ನು ನಿಮರ್ಿಸಲಾಗುತ್ತಿದ್ದು ರಾಜ್ಯದ ವಿವಿಧ ಭಾಗಗಳಿಂದ ಜನರು ಇದನ್ನು ವೀಕ್ಷಿಸಲು ಆಗಮಿಸುವ ಸಾಧ್ಯತೆಗಳಿವೆ. 15 ವರ್ಷಗಳ ಹಿಂದೆ ನಗರದಲ್ಲಿ ವಿವಿಧ ಸಂಘ ಸಂಸ್ಥೆಗಳು ವಿಶಿಷ್ಟ ಗಣೇಶ ಪ್ರತಿಷ್ಠಾಪನೆಯನ್ನು ಕೈಗೊಳ್ಳುತ್ತಿದ್ದವು. ಅವುಗಳಲ್ಲಿ ಹೆಸರಿಸಬಹುದಾದುವುಗಳೆಂದರೆ ಲಂಡನ್ ಬ್ರಿಡ್ಜ್, ಪ್ರೆಪ್ಸಿ ಗಣೇಶ ಪ್ರಮುಖವಾಗಿದ್ದವು. ಆ ಸಮಯದಲ್ಲಿ ಗಣೇಶನನ್ನು ನೋಡಲು ಜನರು ತಂಡೊಪತಂಡವಾಗಿ ಆಗಮಿಸುತ್ತಿದ್ದರು. ಹಳೆಯ ಇತಿಹಾಸವನ್ನು ಮರುಕಳಿಸುವ ಸದಿಚ್ಛೆಯಿಂದ ಕಾಕಿ ಜನಸೇವಾ ಟ್ರಸ್ಟ್ನಿಂದ ಬಾಹಬಲಿ ವಿಘ್ನೇಶ್ವರ ಹಾಗೂ ಹರಹರ ಗಂಗಾ ಮೂತರ್ಿ ಪ್ರತಿಷ್ಠಾಪನೆಗೆ ಮುಂದಾಗಿದ್ದು ಅದಕ್ಕೆ ಬೇಕಾದ ಸಕಲ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ.
ಈ ಹಿಂದೆ ಕಾಕಿಗಲ್ಲಿಯಲ್ಲಿ 35 ವರ್ಷಗಳ ಕಾಲ ಸತತವಾಗಿ ಗಣೇಶಮೂತಿಯನ್ನು ಪ್ರತಿಷ್ಠಾಪನೆ ಮಾಡುತ್ತಿದ್ದರು. ಆದರೆ ಈ ಬಾರಿ ಕಾಕಿ ಜನಸೇವಾ ಟ್ರಸ್ಟ್ ಮೂಲಕ ನವೀನ ರೀತಿಯಲ್ಲಿ ಗಣೇಶೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ಟ್ರಸ್ಟ್ ವತಿಯಿಂದ ಇದುವರೆಗೂ ಹಲವಾರು ಸಮಾಜಮುಖಿ ಕಾರ್ಯಗಳನ್ನು ಕೈಗೊಳುತ್ತಾ ಬರಲಾಗಿದೆ. ಅದರಂತೆ ಈ ಬಾರಿ ಸೆ.13ರಿಂದ 21ದಿನಗಳ ಕಾಲ ನಗರದ ಮಿನಿ ವಿಧಾನಸೌಧದ ಬಳಿಯಿರುವ ನೀಲಕಂಠೇಶ್ವರ ದೇವಸ್ಥಾನದ ಹಿಂಭಾಗದಲ್ಲಿ ಎರಡು ವಿಭಿನ್ನ ವಿಷಯಗಳನ್ನು ಒಳಗೊಂಡ ಗಣೇಶ ಮೂತರ್ಿ ಪ್ರತಿಷ್ಠಾಪಿಸಲಾಗುವುದು. ಇದಕ್ಕಾಗಿ ವಿಶೇಷ ಮಂಟಪ ನಿಮರ್ಿಸಲಾಗಿದೆ.
ಬೃಹತ್ ಮಂಟಪ:- 80 ಅಡಿ ಅಗಲ, 26 ಅಡಿ ಎತ್ತರ, 120 ಉದ್ದದ ಸಭಾಭವನದ ನಿಮರ್ಾಣ ಕಾರ್ಯ ಭರದಿಂದ ಸಾಗುತ್ತಿದೆ. ಸುತ್ತಲೂ ಕಂಪೊಂಡ ಕಟ್ಟಿ, ಒಂದು ಪ್ರವೇಶ ದ್ವಾರ ಮತ್ತು ನಿರ್ಗಮ ದ್ವಾರವನ್ನು ನಿಮರ್ಾಣ ಮಾಡಿದ್ದಾರೆ. ಮಂಟಪದ ಒಳಗೆ ಎಲ್ಲಾ ರೀತಿ ಚಿತ್ರ ಪ್ರದರ್ಶನ, ಸಂಗ್ರಹಾಲಯ ಹಾಗೂ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ.
ವಿಶೇಷವಾದ ಶೋ:- ಒಂದು ಕಡೆ 10 ಅಡಿಗೂ ಎತ್ತರದ ಶಿವನ ಮೂತರ್ಿಯನ್ನು ಪ್ರತಿಷ್ಠಾಪಿಸಿ ಅವನ ತಲೆಯಿಂದ ಗಂಗಾಮಾತೆ ಭೂಮಿಗೆ ಹರಿದು ಬರುವ ಹರ ಹರ ಗಂಗಾಮಾತಾ ಎಂಬ ರೋಚಕ ದೃಶ್ಯವಿದೆ. ಮತ್ತೊಂದು ಬದಿಯಲ್ಲಿ ಬಾಹುಬಲಿ ಚಲನಚಿತ್ರದಲ್ಲಿರುವ ರೀತಿಯಲ್ಲಿ 21 ಅಡಿ ರಥವನ್ನು ನಿಮರ್ಿಸಿ ಅದರ ಮೇಲೆ ಗಣೇಶ ಮೂತರ್ಿಯನ್ನಿರಿಸಲಾಗುತ್ತದೆ. ಈ ರಥವನ್ನು ಸುಲಭವಾಗಿ ಎಳೆಯಲು ಬರುವಂತೆ ವ್ಯವಸ್ಥೆ ಮಾಡಲಾಗಿದ್ದು ಗಣ್ಯರು, ಪ್ರಾಯೋಜಕರು ಹಾಗೂ ನಾಯಕ ನಟರಿಗೆ ಅದನ್ನು ಎಳೆಯಲು ಅವಕಾಶ ನೀಡಲಾಗುತ್ತಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 