ವಿದುಷಿ ಸುಜಾತಾಗುರವರಿಗೆ ಹುಕ್ಕೇರಿ ಬಾಳಪ್ಪ ಪ್ರಶಸ್ತಿ ಪ್ರದಾನ
Vidushi Sujatha Guru presented with the Hukkeri Balappa Award
ಬೆಳಗಾವಿ 30- ಇಂಪು ಸಂಗೀತ ವೇದಿಕೆಯ 24 ನೇ ವರ್ಷದ ಹುಕ್ಕೇರಿ ಬಾಳಪ್ಪ ಪ್ರಶಸ್ತಿಗೆ ಧಾರವಾಡದಖ್ಯಾತಗಾಯಕಿ ವಿದುಷಿ ಶ್ರೀಮತಿ ಸುಜಾತಾಗುರವಅವರುಆಯ್ಕೆಯಾಗಿದ್ದುಇದೇ ದಿ. 14 ರವಿವಾರ ಸಂಜೆ 5 ಗಂಟೆಗೆ ಟಿಳಕವಾಡಿಯ ಲಾಯಿನ್ಸ್ ಭವನದಲ್ಲಿ ಪ್ರಶಸ್ತಿ ಪ್ರದಾನ ಮತ್ತು ಸ್ವರಸುಧಾಕಾರ್ಯಕ್ರಮ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಂಗೀತ ವಿದ್ವಾಂಸರೂಗಾಯಕರೂ ಆದ ಪಂ. ನಂದನ ಹೆರ್ಲೆಕರ ಅವರು ಆಗಮಿಸಲಿದ್ದಾರೆ.
ಪ್ರಶಸ್ತಿ ಪ್ರದಾನದ ನಂತರ ವಿದುಷಿ ಸುಜಾತಾಗುರವಅವರಿಂದ ಹಾಡುಗಾರಿಕೆಯಿದ್ದುಅಲ್ಲಮಪ್ರಭು ಕಡಕೋಳ ಮತ್ತು ಯೋಗೇಶರಾಮದಾಸ ಅವರು ತಬಲಾ , ಹಾರ್ಮೋನಿಯಂ ಸಾಥ್ ನೀಡಲಿದ್ದಾರೆ. ಬೆಂಗಳೂರಿನ ಸಪ್ತಕ ಸಂಗೀತ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ನಡೆಯಲಿದೆ. ಸಂಗೀತ ಕಲಾರಸಿಕರಿಗೆ ಕಾರ್ಯಕ್ರಮದ ಸಂಚಾಲಕರಾದ ಎಲ್. ಎಸ್. ಶಾಸ್ತ್ರಿ ಮತ್ತು ಜಿ. ಎಸ್. ಹೆಗಡೆ ಸ್ವಾಗತಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 