ಲೋಕದರ್ಶನ ವರದಿ
ಬೆಳಗಾವಿ, 9: ಬೆಳಗಾವಿ ಜಿಲ್ಲೆಯ ಆಡಳಿತಾತ್ಮಕ ನ್ಯಾಯಮೂತರ್ಿಗಳು ಹಾಗೂ ಕನರ್ಾಟಕ ಕಾನೂನು ಸೇವೆಗಳ ಸೇವೆಗಳ ಪ್ರಾಧಿಕಾರ ಬೆಂಗಳೂರು ಇದರ ಕಾರ್ಯನಿವರ್ಾಹಕ ಅಧ್ಯಕ್ಷರು ಆಗಿರುವ ಗೌರವಾನ್ವಿತ ನ್ಯಾಯಮೂತರ್ಿ ಎಲ್. ನಾರಾಯಣ ಸ್ವಾಮಿ ಇವರು ಕನರ್ಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕನರ್ಾಟಕ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯ ಅಧ್ಯಕ್ಷರು ಆಗಿರುವ ನ್ಯಾಯಮೂತರ್ಿ ಅರವಿಂದ ಕುಮಾರ ಇವರು ಹಾಗೂ ದಿ 09 ರಂದು ಸಾಯಂಕಾಲ 5.00 ಘಂಟೆಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಗೌರವಾನ್ವಿತ ಅಧ್ಯಕ್ಷರು ಹಾಗೂ ಗೌರವಾನ್ವಿತ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ಸದಸ್ಯ ಕಾರ್ಯದಶರ್ಿಗಳು, ಜಿಲ್ಲಾಧಿಕಾರಿಗಳು, ಪೋಲಿಸ್ ಆಯುಕ್ತರು, ಪೋಲಿಸ್ ವರಿಷ್ಠಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿದರ್ೇಶಕರು, ಶಿಕ್ಷಣ ಇಲಾಖೆಯ ಉಪ ನಿದರ್ೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪ ನಿದರ್ೇಶಕರು, ದೇವದಾಸಿ ಪುನರ್ವಸತಿ ಯೋಜನೆಯ ನಿದರ್ೇಶಕರು,. ಶಿಕ್ಷಕರು ಮತ್ತು ಮಾಜಿ ದೇವದಾಸಿಯರೊಂದಿಗೆ ದೇವದಾಸಿ ಪದ್ದತಿಯ ನಿಮರ್ೂಲನೆ ಮತ್ತು ಪುನರ್ವಸತಿಯ ಕುರಿತು ವಿಡಿಯೊ ಕಾನ್ಪರೆನ್ಸ ಮೂಲಕ ಸಂವಾದ ನಡೆಸಿದರು.
ಸಂವಾದದಲ್ಲಿ ಜಿಲ್ಲೆಯಲ್ಲಿ ಗುರುತಿಸಲಾದ ದೇವದಾಸಿಯರು, ಅವರಿಗೆ ಪಿಂಚಣಿ ನೀಡುವ ಕುರಿತು, ವಸತಿ ಯೋಜನೆ ಕುರಿತು, ಅವರ ರಕ್ಷಣೆ, ಪುನರ್ವಸತಿ ಕುರಿತು ಮನೆಯನ್ನು ಹಂಚಿಕೆ ಮಾಡಿರುವ ಕುರಿತು, ಅವರ ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸುವ ಕುರಿತು, ಅವರನ್ನು ದೇವದಾಸಿ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಂಡ ಕುರಿತು, ಅವರ ಮಕ್ಕಳಿಗೆ ಹಾಸ್ಟೆಲ್ ಸೌಲಭ್ಯ ನೀಡಿರುವ ಕುರಿತು ಮಾಹಿತಿಯನ್ನು ಪಡೆದು ನಿದರ್ೇಶನಗಳನ್ನು ನೀಡಿದರು. ಮಾಜಿ ದೇವದಾಸಿಯರ ಪಿಂಚಣಿಯನ್ನು ಹೆಚ್ಚಿಸುವ ಕುರಿತು ಜಿಲ್ಲಾಡಳಿತ ಸಕರ್ಾರದೊಂದಿಗೆ ವ್ಯವಹರಿಸುವಂತೆ ನಿದರ್ೇಶನ ನೀಡಿದರು.
ಜಿಲ್ಲೆಯ ಎಲ್ಲಾ ಶಿಕ್ಷಕರು, ಆಶಾ ಕಾರ್ಯಕತರ್ೆಯರು, ಅಂಗನವಾಡಿ ಕಾರ್ಯಕತರ್ೆಯರು, ಗ್ರಾಮ ಪಂಚಾಯತ ಸದಸ್ಯರು, ಗ್ರಾಮ ಸೇವಕರು, ಪಂಚಾಯತ ಅಭಿವೃದ್ದಿ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ನಡೆಯುವ ದೇವದಾಸಿ ಸಮರ್ಪಣೆಯ ವಿಧಿ ವಿಧಾನಗಳನ್ನು ತಡೆದು ಮಹಿಳೆ ಮತ್ತು ಮಕ್ಕಳನ್ನು ದೇವದಾಸಿ ಸಮರ್ಪಣೆಯಿಂದ ರಕ್ಷಿಸುವಂತೆ ನಿದರ್ೇಶನ ನೀಡಿದರು. ಅದಲ್ಲದೆ ವಸತಿ ರಹಿತ ಮಾಜಿ ದೇವದಾಸಿಯರಿಗೆ ವಸತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ನಿದರ್ೇಶನ ನೀಡಿದರು. ದೇವದಾಸಿಯರಿಗೆ ಸಕರ್ಾರದಿಂದ ನೀಡಲಾದ ಎಲ್ಲಾ ಮನೆಗಳ ಸ್ಥಿತಿ ಗತಿಗಳನ್ನು ಪರಿಶೀಲಿಸಿ ಕನರ್ಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ವರದಿ ಸಲ್ಲಿಸುವಂತೆ ನಿದರ್ೇಶನ ನೀಡಿದರು. ಅಲ್ಲದೆ ದೇವದಾಸಿಯರು ತಮ್ಮ ಸಮಸ್ಯೆಗಳನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಲ್ಲಿ ಸಲ್ಲಿಸುವಂತೆ ಕರೆ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಕನರ್ಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದಶರ್ಿಗಳಾದ ಗೌರವಾನ್ವಿತ ಹಂಚಾಟೆ ಸಂಜೀವಕುಮಾರ ಹಾಗೂ ಉಪ ಕಾರ್ಯದಶರ್ಿಗಳಾದ ಇ. ರಾಜೀವಗೌಡ ಹಾಜರಿದ್ದರು.