ಗೆಲುವಿನ ಆಶಾಭಾವನೆಯಿಂದ ಆಟವಾಡಿದಲ್ಲಿ ಗೆಲುವು ಸಾಧ್ಯ: ಕಸಾಳೆ
Victory is possible if you play with the hope of winning: Kasale
ನೇಸರಗಿ 09: ಕ್ರೀಡಾ ಸ್ಪರ್ಧಿಗಳು ಗೆಲುವಿನ ಆಶಾಭಾವನೆಯಿಂದ ಆಟವಾಡಿದಲ್ಲಿ ಗೆಲುವು ಸಾಧ್ಯ ಎಂದು ಪ್ರಭಾರಿ ಸಮನ್ವಯ ಅಧಿಕಾರಿ ಬಿ.ಎನ್. ಕಸಾಳೆ ಹೇಳಿದರು.
ಸಮೀಪದ ವಣ್ಣೂರ ಶಾಂತಿನಿಕೇತನ ಶಾಲೆಯಲ್ಲಿ ಪ್ರಾಥಮಿಕ ಶಾಲೆಗಳ ಹಣಬರಹಟ್ಟಿ ಕ್ಲಸ್ಟರದ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವದರಿಂದ ದೈಹಿಕ, ಮಾನಸಿಕ, ಶಾರೀರಿಕವಾಗಿ ಬಲಾಡ್ಯಗೊಳ್ಳಲು ಅನುಕೂಲವಾಗುತ್ತದೆ ಎಂದರು.
ಯೋಗ ಗುರು ಸಂಗಮೇಶ ಸವದತ್ತಿಮಠ ಮಾತನಾಡಿ, ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಆರೋಗ್ಯ ಮುಖ್ಯವಾಗಿದೆ. ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವಿದ್ಯಾರ್ಥಿಗಳು ಗಟ್ಟಿಗೊಳ್ಳುವರು ಎಂದರು.
ಶಾಂತಿನಿಕೇತನ ಸಂಸ್ಥೆ ಅಧ್ಯಕ್ಷ ಸುರೇಶ ಗಂಗಣ್ಣವರ, ಸಿಆರ್‌ಪಿಗಳಾದ ಎಸ್.ಬಿ.ಸಂಗನಗೌಡರ, ರಾಜು ಹಕ್ಕಿ, ಮಹೇಶ ಯರಗಟ್ಟಿ, ಎಚ್.ಡಿ.ಕಿಲ್ಲೇದಾರ, ಹಣಮಂತ ದೊಡ್ಡನ್ನವರ, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಐ.ಮಿರ್ಜನ್ನವರ, ಮುಖ್ಯೋಪಾಧ್ಯಾಯ ವಿ.ಬಿ.ಕರಲಿಂಗನ್ನವರ, ಜ್ಯೂಲಿಯಟ್ ಪರ್ನಾಂಡಿಸ್, ಶಿಕ್ಷಕರು, ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 