ಹಿರಿಯ ಸಾಹಿತಿ ಕೆರೆಪ್ಪಗೋಳ ಅವರ 11ನೇ ಕೃತಿ ಬಿಡುಗಡೆ
Veteran writer Kereppagola's 11th work released
ದೇವರಹಿಪ್ಪರಗಿ 02: ಸಾಹಿತ್ಯ ಕೃಷಿ ಮಾಡಲು ಬಡ ಸಾಹಿತಿಯಾಗಿ ಸಾಹಿತ್ಯಿಕ ಪುಸ್ತಕಗಳ ಪ್ರಕಟಣೆಗಾಗಿ ಭಿಕ್ಷಾಪಾತ್ರೆಯನ್ನು ಹಿಡಿದಾಗ ತಾವೆಲ್ಲರೂ ನನಗೆ ಅಕ್ಷಯಪಾತ್ರೆಯಂತೆ ಆಸರೆಯಾಗಿದ್ದೀರಿ ಎಂದು ತಾಲ್ಲೂಕಿನ ಹಿರಿಯ ಸಾಹಿತಿ ಹಾಗೂ ತಾಲ್ಲೂಕಿನ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಂಗಮೇಶ ಕೆರೆಪ್ಪಗೋಳ ಹೇಳಿದರು. ತಾಲ್ಲೂಕಿನ ಭೈರವಾಡಗಿ ಗ್ರಾಮದಲ್ಲಿ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಲವಕುಶ ನಾಟಕದ ಉದ್ಘಾಟನಾ ಸಮಾರಂಭದಲ್ಲಿ ತಮ್ಮ 11 ನೇ ಕೃತಿಯಾದ ಶೀಲ ತಂದ ಸಾವು ಎಂಬ ನಾಟಕ ಕೃತಿಯ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತಾಲ್ಲೂಕಿನ ತಾ.ಪಂ ಪ್ರಭಾರಿ ಸಹಾಯಕ ನಿರ್ದೇಶಕ ಶಿವಾನಂದ.ವಿ.ಮೂಲಿಮನಿ ಹಾಗೂ ಮಾರ್ಕಬ್ಬಿನಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಡಾ.ಜಕ್ಕಪ್ಪ.ಪೂ. ಹಿರೇಕುರುಬರ ಅವರುಗಳು ಇವರ ಈ 11 ನೇ ಕೃತಿಯ ಬಿಡುಗಡೆಗೆ ಸಹಾಯ ಹಸ್ತವನ್ನು ಒದಗಿಸಿರುತ್ತಾರೆ. ಗ್ರಾಮಸ್ಥರ ಸಮ್ಮುಖದಲ್ಲಿ ಕೆರೆಪ್ಪಗೋಳರ ನೂತನ ಕೃತಿಯನ್ನು ಲೋಕಾರೆ್ಣ ಮಾಡಲಾಯಿತು. ಈ ಸಂದರ್ಭದಲ್ಲಿ ಸಂಗನಗೌಡ ಪಾಟೀಲ ಚಬನೂರ, ವೆಂಕನಗೌಡ ಮೂಲಿಮನಿ, ಡಾ.ಜಕ್ಕಪ್ಪ. ಹಿರೇಕುರುಬರ, ಸಿ.ಆರ್.ಪಾಟೀಲ, ಆಯ್.ಎಲ್.ಶಾಬಾದಿ, ಎಸ್.ಕೆ.ಪಟೇದ, ಸಿ.ಕೆ.ಕಿರಣಗಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು 