ಸೋಮವಾರ ಅಮೆರಿಕದಿಂದ ಭಾರತಕ್ಕೆ ವೆಂಟಿಲೇಟರ್ ಪೂರೈಕೆ

ನವದೆಹಲಿ, ಜೂನ್ 14,ಕೊರೊನಾ ಸೋಂಕಿನಿಂದ  ತತ್ತರಿಸುತ್ತಿರುವ ಭಾರತಕ್ಕೆ ಅಮೆರಿಕ  ಮೊದಲ ಸುತ್ತಿನಲ್ಲಿ 100 ವೆಂಟಿಲೇಟರ್ ಗಳನ್ನು ನೀಡಿದ್ದು,  ನಾಳೆ  ಏರ್ ಇಂಡಿಯಾ ವಿಮಾನದ ಮೂಲಕ  ಬರಲಿವೆ.ಭಾರತಕ್ಕೆ ವೆಂಟಿಲೇಟರ್ ಗಳನ್ನು  ದೇಣಿಗೆಯಾಗಿ ಕೊಡುವ ಬಗ್ಗೆ ಕಳೆದ  ಮೇ. 16 ರಂದೇ ಅಧ್ಯಕ್ಷ ಡೊನಾಲಲ್ಡ್  ಟ್ರಂಪ್ ಭರವಸೆ ಕೊಟ್ಟಿದ್ದರು. ಸ್ನೇಹಿತ ರಾಷ್ಟ್ರಕ್ಕೆ ನಾವು ವೆಂಟಿಲೇಟರ್ ಕೊಡಲು,  ಘೋಷಿಸಲು ಹೆಮ್ಮೆಯಾಗಿದೆ  ಎಂದೂ  ಹೇಳಿದ್ದರು.ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಯೊಬ್ಬರು   ಸೋಮವಾರ 100 ವೆಂಟಿಲೇಟರ್ ಗಳು ಬರಲಿದ್ದು . ಐಆರ್ ಸಿಎಸ್ ನಲ್ಲಿ  ಸಾಂಕೇತಿಕವಾಗಿ  ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು ನಂತರ  ಈ ವೆಂಟಿಲೇಟರ್ ಗಳನ್ನು ರೋಗಿಗಳ ಆರೈಕೆಗಾಗಿ ವಿವಿಧ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುವುದು ಎಂದು ಅವರು ಹೇಳಿದರು.