ವಿಜಯನಗರ ಜಿಲ್ಲಾ ಚಕೋರ ವೇದಿಕೆ ಸಂಚಾಲಕರಾಗಿ ವೆಂಕಟೇಶ್ ಬಡಿಗೇರ್ ಆಯ್ಕೆ
Venkatesh Badigere elected as the convener of Vijayanagar District Chakora Vedike
ವಿಜಯನಗರ ಜಿಲ್ಲಾ ಚಕೋರ ವೇದಿಕೆ ಸಂಚಾಲಕರಾಗಿ ವೆಂಕಟೇಶ್ ಬಡಿಗೇರ್ ಆಯ್ಕೆ
ವಿಜಯ ನಗರ 15: ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎಲ್.ಎನ್ . ಮುಕುಂದ ರಾಜ್ ರವರು ಕರ್ನಾಟಕ ಸಾಹಿತ್ಯ ಅಕಾಡೆಮಿ ವಿಜಯನಗರ ಜಿಲ್ಲಾ ಚಕೋರ ವೇದಿಕೆಯ ವೆಂಕಟೇಶ್ ಬಡಿಗೇರ್ ಕಮಲಾಪುರ ರವರನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಜಿಲ್ಲಾ ಚಕೋರ ವೇದಿಕೆ ಸಂಚಾಲಕರನ್ನಾಗಿ ನೇಮಿಸಲಾಗಿದೆ. ಈ ಕುರಿತು ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಚಕೋರ ವೇದಿಕೆಯ ಮೂಲಕ ಸಾಹಿತ್ಯ ಕಾರ್ಯಕ್ರಮಗಳನ್ನ ರೂಪಿಸುವ ಮಹತ್ವ ಯೋಜನೆ ರೂಪಿಸಿದೆ. ಈ ವೇದಿಕೆ ಆಯಾ ಜಿಲ್ಲೆಯಲ್ಲಿರುವ ಶಾಲಾ ಕಾಲೇಜು ಸಂಘ ಸಂಸ್ಥೆಗಳಲ್ಲಿ ಉಪನ್ಯಾಸ ಕವಿಗೋಷ್ಠಿ ಇತ್ಯಾದಿ ಕಾರ್ಯಕ್ರಮಗಳನ್ನು ಏರಿ್ಡಸುವುದು. ಸದಸ್ಯ ಸಂಚಾಲಕರಾದ ಡಾ. ಮಲ್ಲಿಕಾರ್ಜುನ ಬಿ.ಮಾನ್ಪಾಡಿ ಮಾರ್ಗದರ್ಶನದೊಂದಿಗೆ ಅಕಾಡೆಮಿ ಘನತೆ ಗೌರವ ತಕ್ಕಂತೆ ಸಾಹಿತ್ಯ ಚಕೋರ ವಿಚಾರ ವೇದಿಕೆ ನಿರ್ವಹಿಸಿಕೊಂಡು ಹೋಗಲು ತಿಳಿಸಲಾಗಿದೆ. ಚಕೋರ ವಿಚಾರ ಸಾಹಿತ್ಯ ವಾಟ್ಸಾಪ್ ಗ್ರೂಪ್ ರಚಿಸುವುದರ ಮೂಲಕ ಚಕೋರ ವೇದಿಕೆ ಪ್ರಾರಂಭಿಸಬಹುದು ಎಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಡಾ. ವೀರೇಶ್ ಬಡಿಗೇರ್ ಕನ್ನಡ ಪ್ರಾಧ್ಯಾಪಕರು.ಕ.ವಿ.ವಿ. ಹಂಪಿ,. ಡಾ.ಬಿ.ಜಿ ಕನಕೇಶ್ ಮೂರ್ತಿ,.ಡಾ. ದಯಾನಂದ ಕಿನ್ನಾಳ, ಮೌನೇಶ್ ಬಡಿಗೇರ್ ಕನ್ನಡ ಸಹಾಯಕ ಪ್ರಾಧ್ಯಾಪಕರು, ನಾಗರಾಜ್ ಪತ್ತಾರ್. ಇತಿಹಾಸ ಉಪನ್ಯಾಸಕರು ಹೊಸಪೇಟೆ, ಶ್ರೀಮತಿ ಶೋಭಾ ಶಂಕರಾನಂದ , ಶ್ರೀಮತಿ ರೇಖಾ ಕನ್ನಡತಿ ಡಾ. ಸುಲೋಚನ, ಎರಿಸ್ವಾಮಿ ಸಾಲುಮರದ ಸಿ.ಎನ.ಅಶೋಕ, ಡಾ. ಶಿವರಾಜ ಗೌಡ್ರ, ಹುಲಿಯೂರುದುರ್ಗ ಲಕ್ಷ್ಮೀನಾರಾಯಣ, ಡಾ. ಎಂ. ಧರ್ಮದ ಗೌಡ, ಎಂ. ವಿರುಪಾಕ್ಷಯ್ಯ ಸ್ವಾಮಿ, ಸಿದ್ದಲಿಂಗೇಶ, ಅರುಣ್ ಕುಮಾರ್ ಕಲ್ಕಂಬ, ಮನ್ಸೂರ್ ಭಾಷಾ ಶುಭ ಹಾರೈಸಿದ್ದಾರೆ.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 