ಕರವೇ ತಾಲೂಕಾಧ್ಯಕ್ಷರಾಗಿ ವೆಂಕಟರಮಣ ನೇಮಕ
Venkataramana appointed as Karave Taluka President
ಕಂಪ್ಲಿ 30: ನಾಡಿನ ನೆಲ, ಜಲ, ಭಾಷೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಸಹಕಾರದೊಂದಿಗೆ ಕರವೇ ಕಾರ್ಯಕರ್ತರು ಮುಂದಾಗಬೇಕು. ಜವಾಬ್ದಾರಿಯುತವಾಗಿ ಕೆಲಸ ಮಾಡಿದಾಗ ಮಾತ್ರ ಸರ್ಕಾರದ ಸೌಲಭ್ಯಗಳನ್ನು ಜನತೆಗೆ ತಲುಪಿಸಲು ಸಾಧ್ಯ ಎಂದು ಕರವೇ ರಾಜ್ಯ ಸಂಚಾಲಕ ಅದ್ದಿಗೇರಿ ರಾಮಣ್ಣ ಹೇಳಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸಂಘಟನಾ ಸಭೆ ಹಾಗೂ ತಾಲೂಕು ಘಟಕದ ನೂತನ ಪದಾಧಿಕಾರಿಗಳ ಆಯ್ಕೆ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದಿನ ದಿನಮಾನದಲ್ಲಿ ಕನ್ನಡಕ್ಕೆದಕ್ಕೆ ಇದೆ. ಆದ್ದರಿಂದ ಕರವೇ ಕಾರ್ಯಕರ್ತರು ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ಕನ್ನಡತನವನ್ನು ಮೇರುಮಟ್ಟಕ್ಕೆ ಕೊಂಡೊಯ್ಯಬೇಕು. ಕನ್ನಡದ ಅರಿವು ಮತ್ತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗಬೇಕು. ಹೋರಾಟಗಾರರು ಸ್ಥಗಿತವಾಗದೇ ನಿರಂತರವಾಗಿ ಸಮಾಜ ಸೇವಾ ಕಾರ್ಯಗಳನ್ನು ಕೆಲಸ ಮಾಡಬೇಕು ಎಂದರು. ನಂತರ ಜಿಲ್ಲಾಧ್ಯಕ್ಷ ಹೆಚ್.ಹುಲುಗಪ್ಪ ಮಾತನಾಡಿ, ಕರವೇ ಕಾರ್ಯಕರ್ತರು ಪ್ರತಿಯೊಬ್ಬರಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು. ನಾಡಿನ ನೆಲ, ಜಲ, ಭಾಷೆ ಸಂರಕ್ಷಣೆಗೆ ಕಂಕಣ ಬದ್ಧರಾಗಿ ನಿಲ್ಲುವ ಜತೆಗೆ ತಾಲೂಕು ಮಟ್ಟದಲ್ಲಿರುವ ಜನರ ಸಮಸ್ಯೆಗಳನ್ನು ಆಲಿಸಿ, ಹೋರಾಟದ ಮೂಲಕ ಈಡೇರಿಸುವ ಕೆಲಸವಾಗಬೇಕು ಎಂದರು. ಕರ್ನಾಟಕ ರಕ್ಷಣಾ ವೇದಿಕೆ(ಪ್ರವೀಣ್ ಕುಮಾರ ಶೆಟ್ಟಿ ಬಣ)ಯ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಅಧ್ಯಕ್ಷರನ್ನಾಗಿ ವೆಂಕಟರಮಣ ಆಯ್ಕೆಗೊಂಡರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಕೆ.ಎಸ್.ಚಾಂದ್ ಬಾಷಾ, ಹೂಗಾರ ರಮೇಶ, ಜಿಲ್ಲಾ ಸಂಚಾಲಕರಾಗಿ ಬಿ.ರಮೇಶ, ಮುಖಂಡರಾದ ಬಿ.ಸಿದ್ದಪ್ಪ, ಕರೇಕಲ್ ಮನೋಹರ, ಜಿ.ರಾಮಣ್ಣ, ಕೆ.ಷಣ್ಮುಕಪ್ಪ, ಭಾಸ್ಕರ್‌ರೆಡ್ಡಿ, ಬಿ.ದೇವೇಂದ್ರ, ಶೇಕ್ಷಾವಲಿ, ಬಿ.ನಾಗೇಂದ್ರ, ಬಳ್ಳಾಪುರ ವಿ.ಮೌನೇಶ, ತಿಪ್ಪೇಸ್ವಾಮಿ, ಗೋಪಾಲ, ಬಿ.ಕೆ.ವಿರುಪಾಕ್ಷಿ, ನಾಗರಾಜ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 