ಸಂತೆ ಮೈದಾನದಲ್ಲಿ ತರಕಾರಿ ಸಂಸ್ಕರಣಾ ಘಟಕ ಶೀಘ್ರ ಸ್ಥಾಪನೆ: ವಿನಯಕುಮಾರ
Vegetable processing unit to be set up soon at Santhe Maidan: Vinayakumar
ಬ್ಯಾಡಗಿ 06: ಪಟ್ಟಣದ ಮಧ್ಯದಲ್ಲಿರುವ ಸಂತೆ ಮೈದಾನದಲ್ಲಿ ಅತಿ ಹೆಚ್ಚು ತರಕಾರಿ ಕಸ ಬೀಳುವುದರಿಂದ ವಿಲೇವಾರಿಗೆ ತೊಂದರೆ ಆಗುತ್ತಿದ್ದು ಇದನ್ನು ಸರಿಪಡಿಸಲು ಮೈದಾನದಲ್ಲಿಯೇ ತರಕಾರಿ ಸಂಸ್ಕರಿಸುವ ನೂತನ ಘಟಕವನ್ನು ಕೊಯಿಮತ್ತೂರು ಹಾಗೂ ಹೈದರಾಬಾದ್ ಮಾದರಿಯಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ಪುರಸಭೆ ಮುಖ್ಯ ಅಧಿಕಾರಿ ವಿನಯ್ ಕುಮಾರ್ ಹೊಳೆಯಪ್ಪ ಗೋಳ ಹೇಳಿದರು.
ಪುರಸಭೆಯ ಸಭಾಭವನದಲ್ಲಿ ಅಧ್ಯಕ್ಷರ ಸಮ್ಮುಖದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆಯ ಸದಸ್ಯರಿಗೆ ವಿಷಯ ಪ್ರಸ್ತಾಪಿಸಿ ಕಸ ಸಂಸ್ಕರಣಾ ಘಟಕವನ್ನು ಸ್ಥಾಪಿಸಲು ಸಭೆಯಲ್ಲಿ ಸಮ್ಮತಿಸಲಾಯಿತು.
ಕಳೆದ ಬಾರಿ ನಡೆದ ಸಾಮಾನ್ಯ ಸಭೆಯ ಠರಾವುಗಳನ್ನು ಓದಿ ದೃಢಿರಿಸಲಾಯಿತು. ಸೆಪ್ಟಂಬರ್ ತಿಂಗಳ ಜಮಾ ಖರ್ಚಿಗೆ ಮಂಜೂರಾತಿ ನೀಡಿ ಸಮ್ಮತಿಸಲಾಯಿತು. ನಗರ ಸ್ಥಳೀಯ ಸಂಸ್ಥೆಗಳಲ್ಲಿ 2026- 27ನೇ ಸಾಲಿನ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಯ ಕುರಿತು ಚರ್ಚಿಸಲಾಯಿತು. 2024 -25 ನೇ ಸಾಲಿನ ಹೆಚ್ ಎಫ್ ಸಿ ವಿಶೇಷ ಅನುದಾನದಲ್ಲಿ ಕೈಗೊಂಡ ಕಾಮಗಾರಿಗೆ ದರ ಮಂಜೂರಾತಿ ನೀಡುವ ಕುರಿತು ಚರ್ಚಿಸಲಾಯಿತು. ಪುರಸಭೆ ವ್ಯಾಪ್ತಿಗೆ ಬರುವ ವಿವಿಧ ಏಕ ನಿವೇಶನ ಮತ್ತು ಬಹುನಿವೇಶನ ಲೇಓಟ್ ಗಳಿಗೆ ಎಡಿಟಿಪಿ ಅವರಿಂದ ಅನುಮೋದಿತ ತಾತ್ಕಾಲಿಕ ವಿನ್ಯಾಸ ನಕ್ಷೆ ಹಾಗೂ ಅಂತಿಮ ವಿನ್ಯಾಸ ನಕ್ಷೆಗೆ ಅನುಮೋದನೆ ನೀಡುವ ಹಾಗೂ ಮೇಲ್ವಿಚಾರಣೆ ಶುಲ್ಕ ಭರಣಾ ಮಾಡಿಸಿಕೊಂಡು ಖಾತಾ ದಾಖಲು ಮಾಡುವ ಕುರಿತು ಚರ್ಚಿಸಿ ಅನುಮೋದಿಸಲಾಯಿತು. ವಿವಿಧ ವಾರ್ಡ್ಗಳ ಸದಸ್ಯರು ಕೊಟ್ಟ ಅರ್ಜಿಗಳ ಬಗ್ಗೆ ಚರ್ಚಿಸಿ ಅನುಮತಿ ಸೂಚಿಸಲಾಯಿತು ಮಾನ್ಯ ಅಧ್ಯಕ್ಷರ ಅಪ್ಪಣೆ ಮೇರೆಗೆ ಬರಬಹುದಾದ ಇತರೆ ವಿಷಯಗಳನ್ನು ಚರ್ಚಿಸಲಾಯಿತು.
ಪುರಸಭೆಯ ಉಪಾಧ್ಯಕ್ಷ ಸುಭಾಷ್ ಮಾಳಗಿ. ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ್. ಸದಸ್ಯರುಗಳಾದ ಬಸಣ್ಣ ಛತ್ರದ. ಶಿವರಾಜ್ ಅಂಗಡಿ. ಹನುಮಂತ ಮ್ಯಾಗೇರಿ. ಕಲಾವತಿ ಬಡಿಗೇರ. ಮೆಹಬೂಬ್ ಅಗಸನಹಳ್ಳಿ. ರಫಿಕ ಅಹ್ಮದ್ ಮುದ್ಗಲ್. ಸರೋಜಮ್ಮ ಉಳ್ಳಾಗಡ್ಡಿ. ಪಕ್ಕೀರಮ್ಮ ಚಲವಾದಿ. ಗಾಯತ್ರಿ ರಾಯ್ಕರ್. ಈರಣ್ಣ ಬಣಕಾರ. ವಿನಯ್ ಕುಮಾರ್ ಹಿರೇಮಠ. ಹಾಗೂ ನಾಮ ನಿರ್ದೇಶಕ ಸದಸ್ಯರು ಮತ್ತು ಪುರಸಭೆಯ ಎಲ್ಲ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 