ವೀರುಪಾಕ್ಷಪ್ಪ ಬಳ್ಳಾರಿಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗೌರವ ಸನ್ಮಾನ

ವೀರುಪಾಕ್ಷಪ್ಪ ಬಳ್ಳಾರಿಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗೌರವ ಸನ್ಮಾನ Veerupakshappa Ballari felicitated at BJP party office

ವೀರುಪಾಕ್ಷಪ್ಪ ಬಳ್ಳಾರಿಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗೌರವ ಸನ್ಮಾನ 

ಹಾವೇರಿ 14: ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ, ಅಲ್ಪಸಂಖ್ಯಾತರ ಕಲ್ಯಾಣ ಸಮಿತಿಯ ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಅವರ ನೇತೃತ್ವದಲ್ಲಿ ಕಲ್ಯಾಣ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಭಾರತೀಯ ಜನತಾ ಪಕ್ಷದ ನೂತನ ಹಾವೇರಿ ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ ಅವರಿಗೆ ಬಿಜೆಪಿ ಪಕ್ಷದ ಕಚೇರಿಯಲ್ಲಿ ಗೌರವಿಸಿ ಸನ್ಮಾನಿಸಲಾಯಿತು. 

      ರಾಜ್ಯಾಧ್ಯಕ್ಷರಾದ ಉಡಚಪ್ಪ ಮಾಳಗಿ ಮಾತನಾಡಿ ತಾವುಗಳು ತಮ್ಮ ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಶಕ್ತಿ ಸಾಮಾರ್ಥ್ಯ ಹೊಂದಿರುವ ಕ್ರೀಯಾಶೀಲ ನಾಯಕರು ಆಗಿದ್ದೀರಿ. ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ ಅವರು ಸಂಘಟನಾ ಚತುರರು ಆಗಿದ್ದಾರೆ.ತಮ್ಮ ಪಕ್ಷದಲ್ಲಿ ನಮ್ಮ ಸಂಘಟನೆಯವರು ಇದ್ದು,ಅವರಿಗೆ ಪಕ್ಷದ ವಿವಿಧ ಪದಾಧಿಕಾರಿಗಳ ಹುದ್ದೆ-ಸ್ಥಾನಮಾನ ನೀಡುವಂತಾಗಬೇಕು. ಮುಂದಿನ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಟಿಕೆಟ್ ನೀಡಿ ಗೆಲ್ಲಿಸುವಂತಾಗಲಿ,ಇನ್ನೂ ಹೆಚ್ಚಿನ ಸ್ಥಾನಮಾನ ತಮಗೆ ದೊರಕಲಿ ಎಂದು ಜಿಲ್ಲಾಧ್ಯಕ್ಷರಾದ ವೀರುಪಾಕ್ಷಪ್ಪ ಬಳ್ಳಾರಿ ಅವರಿಗೆ ಉಡಚಪ್ಪ ಮಾಳಗಿ ಅವರು ಜಿಲ್ಲಾ ಘಟಕದ ವತಿಯಿಂದ ಶುಭ ಕೋರಿದರು. 

         ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಮಂಜಪ್ಪ ನಾಗಪ್ಪ ಮರೋಳ,ಜಿಲ್ಲಾ ಸಂಚಾಲಕರಾದ ಮಾಲತೇಶ ಯಲ್ಲಾಪುರ,ಹಾವೇರಿ ತಾಲೂಕ ಅಧ್ಯಕ್ಷ ಫಕ್ಕಿರ​‍್ಪ ಹನುಮಪ್ಪ ಮುದಕಮ್ಮನವರ ಮುಖಂಡರಾದ ಫಕೀರೇಶ ಕಾಳಿ,ಮಹೇಶಪ್ಪ ಹರಿಜನ,ಬಸವಣ್ಣೆಪ್ಪ ಹಳ್ಳಿಳ್ಳಿ,ಹನುಮಂತಪ್ಪ ಹರಿಜನ,ಮಂಜುನಾಥ ದೊಡ್ಮರಿಯಮ್ಮನವರ,ರವಿ ಹಲವಾಗಲು,ರೇಣುಕಾ ಬಡಕಣ್ಣನವರ,ಪರಸಪ್ಪ ಹೌಂಸಿ,ಅನ್ನಪೂರ್ಣ ಹರಿಕೇರಿ,ಮಾಲತೇಶ ಕಳ್ಳಿಹಾಳ,ಹನುಮಂತ ಬ್ಯಾಡಗಿ,ಫಕ್ಕಿರ​‍್ಪ ಹೌಂಸಿ,ನಿಣಗರಾಜ ಮುದಕಮ್ಮನವರ,ಚನ್ನಬಸಪ್ಪ ಹರಿಜನ,ಉಡಚಪ್ಪ ಮುದಕಮ್ಮನವರ,ಭೋದರಾಜ ಎಂ,ರಾಮಪ್ಪ ನಾಗಣ್ಣನವರ,ಕುಮಾರ ಹರಿಜನ,ಉಡಚಪ್ಪ ಕುರವತ್ತಿ, ಗುಡ್ಡಪ್ಪ ಕಳ್ಳಾಳ,ರಶೀದಶಾಬ್ ಇನ್ನು ಮುಂತಾದವರು ಪಾಲ್ಗೊಂಡಿದ್ದರು.