ವೀರ್ಪ ಅರಕೇರಿ ಪ್ರಕೃತಿ ವಿಕೋಪ ಪರಿಹಾರ ನಿಧಿ
Veerpa Arakeri Natural Disaster Relief Fund
ಧಾರವಾಡ 17: ಇತ್ತೀಚೆಗೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸುವರ್ಣ ಮಹೋತ್ಸವದ ಅಂಗವಾಗಿ ಇಂದಿರ ಪ್ರಿಯದರ್ಶಿನಿ ಪರಿಸರ ಪ್ರಶಸ್ತಿಯನ್ನು ಪಡೆದ ಹುಬ್ಬಳ್ಳಿಯ ಅಕ್ಕ ಫೌಂಡೇಶನ್‌ನ ಪರಿಸರವಾದಿ ವೀರ್ಪ ಅರಕೇರಿ ಅವರು ತಮಗೆ ಸಿಕ್ಕ ಪ್ರಶಸ್ತಿ ಮೂಲದ ರೂಪಾಯಿ 5000/-(ಐದುಸಾವಿರ) ಹಣವನ್ನು ಚೆಕ್ ಮೂಲಕ ಧಾರವಾಡ ಜಿಲ್ಲಾಧಿಕಾರಿಗಳಾದ ದಿವ್ಯ ಪ್ರಭು ಅವರಿಗೆ ಭೇಟಿ ಮಾಡಿ ಪ್ರಕೃತಿ ವಿಕೋಪ ಪರಿಹಾರ ನಿಧಿಗೆ ನೀಡಿದರು.
ಚೆಕ್ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ಶ್ರೀಮತಿ ದಿವ್ಯ ಪ್ರಭು ಅವರು, ಅರಕೇರಿಯವರಿಗೆ ಅಭಿನಂದಿಸಿ, ಸಮಾಜದಲ್ಲಿ ಪ್ರತಿಯೊಬ್ಬರೂ ಪರಿಸರದ ಕುರಿತು ಕಾಳಜಿ ಮಾಡಬೇಕಿದೆ. ಆ ದಿಶೆಯಲ್ಲಿ ಎಲ್ಲರೂ ಪ್ರಯಾಣಿಸೋಣ ಎಂದರು. ಹುಬ್ಬಳ್ಳಿ ಧಾರವಾಡ ನಾಗರಿಕ ಪರಿಸರ ಸಮಿತಿ ಅಧ್ಯಕ್ಷ ಶಂಕರ ಕುಂಬಿ, ಸಾಹಿತಿ, ಪರಿಸರವಾದಿ ಕೆ. ಎಚ್.ನಾಯಕ, ಹುಬ್ಬಳ್ಳಿ ಇನ್ನರ ವ್ಹೀಲ್ ಅಧ್ಯಕ್ಷರಾದ ಶ್ರೀಮತಿ ಯಶೋಧಾ ಅಂಗಡಿ, ಕಾರ್ಯದರ್ಶಿ ಸುಮಂಗಲಾ ಹಿರೇಮಠ, ಸುನೀತಾ ಮುದಕಣ್ಣವರ, ಮಾಲಾ ಮನಗುಂಡಿ, ಗೀತಾ ಹಂಚಾಟೆ ಮುಂತಾದವರು ಉಪಸ್ಥಿತರಿದ್ದರು
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 