ಗಂಗಾವತಿ 11: ನಗರದ ಓಷಧೀಯ ಸಂಕೀರ್ಣದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದಿಂದ ಅಖಂಡ ಗಂಗಾವತಿ ತಾಲೂಕು ವೀರಶೈವ ಮಹಾ ಸಭಾ ಯುವ ಘಟಕವನ್ನು ಬುಧವಾರ ರಚಿಸಲಾಯಿತು.ಮಹಾ ಸಭಾ ತಾಲೂಕಾಧ್ಯಕ್ಷ ಎಚ್.ಗೀರೀಗೌಡ, ನಗರಸಭೆ ಸದಸ್ಯ ಹಾಗೂ ಸಭಾದ ಪ್ರಧಾನ ಕಾರ್ಯದರ್ಶಿ ಮನೋಹರಸ್ವಾಮಿ ಮುದೇನೂರು ಹಿರೇಮಠ, ನಿಕಟಪೂರ್ವ ಅಧ್ಯಕ್ಷ ಅಶೋಕ ಸ್ವಾಮಿ ಹೇರೂರ, ಉಪಾಧ್ಯಕ್ಷ ಶರಣಗೌಡ ಮಾಲೀ ಪಾಟೀಲ್ ಮತ್ತು ಕಾರ್ಯದರ್ಶಿ ಸಂಧ್ಯಾ ಪಾರ್ವತಿ ಹೇರೂರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಒಟ್ಟು 21 ಪದಾಧಿಕಾರಿಗಳನ್ನು ಒಳಗೊಂಡ ಯುವ ಘಟಕ ರಚಿಸಿ, ನೂತನ ಪದಾಧಿಕಾರಿಗಳಿಗೆ ಆದೇಶ ಪತ್ರ ನೀಡಲಾಯಿತು.
ಶರಣಬಸವ ಹುಲಿಹೈದರ (ಅಧ್ಯಕ್ಷ), ವಿಶ್ವನಾಥ ಪಂಪಾಪತೆಪ್ಪ ಸಿಂಗನಾಳ(ಉಪಾಧ್ಯಕ್ಷ), ಮುಕ್ಕಣ್ಣ ಕತ್ತಿ(ಉಪಾಧ್ಯಕ್ಷ), ಮಂಜುನಾಥ ಶಾಂತಪ್ಪ ಸಿದ್ದಾಪೂರ(ಉಪಾಧ್ಯಕ್ಷ), ಬಸವರಾಜ ಜಗದ್ದೀಶಸ್ವಾಮಿ ಮುದೇನೂರ(ಪ್ರಧಾನ ಕಾರ್ಯದರ್ಶಿ), ಪಂಪನಗೌಡ ಮಹಾಬಲೇಶಗೌಡ ಅಯೋಧ್ಯ(ಸಹ ಕಾರ್ಯದರ್ಶಿ), ವಿರೂಪಾಕ್ಷಯ್ಯ ಮಲ್ಲಿಕಾರ್ಜುನಯ್ಯ ದಾಸನಾಳ (ಸಹ ಕಾರ್ಯದರ್ಶಿ), ಬಸವರಾಜ ಅಮರೇಶಪ್ಪ ಬುನ್ನಟ್ಟಿ(ಸಹ ಕಾರ್ಯದರ್ಶಿ), ಚೇತನ ಜಿ.ಯುವರಾಜ ಹೊಸಕೇರ(ಕೋಶಾಧ್ಯಕ್ಷ),ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಜಗಧೀಶ್ ಶರಣಗೌಡ ಮಾಲೀ ಪಾಟೀಲ್, ಆಕಾಶ ಸಂಗಪ್ಪ ಪೂಲಬಾವಿ, ಅಭಿಷೇಕ ನಾಗರಾಜ ಸುಂಕದ ಕಾರಟಗಿ,ರಾಕೇಶ ನಾಗರಾಜ ಟೆಂಗಿನಕಾಯಿ, ಜಗದೀಶ ಕರೀವೀರಯ್ಯ ನವಲಿ, ಚಂದ್ರಶೇಖರ ಕುಂಬಾರ ಎಸ್.ಬಿ.ಕ್ಯಾಂಪ್, ಶಿವರಾಜ ಕೋರಿ ಆರ್ಹಾಳ, ನಟರಾಜ ಬಸವರಾಜ ಆನೆಗುಂದಿ, ಮಂಜುನಾಥ ಮಲ್ಲೇಶಪ್ಪ ಹೂಗಾರ, ಅನಿಲ ವಾರಿಕಲ್ಮಠ ಮಲ್ಲಾಪೂರ, ಬಸನಗೌಡ ಅಯ್ಯನಗೌಡ ಪೋ.ಪಾ. ಹೇರೂರ, ಶಿವಕುಮಾರ ಸಜ್ಜನ ಕನಕಗಿರಿ ಇವರುಗಳನ್ನು ನೇಮಕ ಮಾಡಲಾಯಿತು.
ನಂತರ ಮಾತನಾಡಿದ ತಾಲೂಕಾಧ್ಯಕ್ಷ ಎಚ್.ಗೀರೀಗೌಡ, ಸಮಗ್ರ ವೀರಶೈವ ಲಿಂಗಾಯತ ಸಮುದಾಯದ ಸಾಮಾಜಿಕ ಮತ್ತು ಶೈಕ್ಷಣಿಕ ಅಭಿವೃದ್ಧಿಯೇ ಸಂಘಟನೆಯ ಮುಖ್ಯ ಧ್ಯೇಯ. ಲಿಂಗಾಯತರಲ್ಲಿನ ಎಲ್ಲ ಒಳ ಪಂಗಡಗಳನ್ನು ಒಂದಾಗಿ ತೆಗೆದುಕೊಂಡು ಹೋಗ ಬೇಕಿದೆ.ಅಖಂಡ ಗಂಗಾವತಿ ತಾಲೂಕಿನಲ್ಲಿ ಸಂಘಟನೆಯನ್ನು ಹೆಚ್ಚು ಬಲಪಡಿಸುವ ಉದ್ದೇಶದಿಂದ ಮಹಿಳಾ ಘಟಕ ಮತ್ತು ಯುವ ಘಟಕ ರಚನೆ ಮಾಡಲಾಗಿದೆ. ಎರಡೂ ಘಟಕದ ಪದಾಧಿಕಾರಿಗಳು ಹೆಚ್ಚು ಜನರನ್ನು ಮಹಾ ಸಭಾದ ಸದಸ್ಯರನ್ನಾಗಿ ಮಾಡಿಸುವ ಮೂಲಕ ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ಸೂಚಿಸಿದರು. ಮುಖಂಡರಾದ ಶೇಖರ್ಪ ಗೋನಾಳ ಹೇರೂರು, ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್, ಪ್ರಧಾನ ಕಾರ್ಯದರ್ಶಿ ಶಿಲ್ಪಾ ಮಳಗಿ ಸೇರಿದಂತೆ ಇದ್ದರು.ಫೋಟೋ:ಗಂಗಾವತಿಯ ಓಷಧೀಯ ಭವನದಲ್ಲಿ ಅಖಿಲ ಭಾರತ ವೀರಶೈವ ಮಹಾ ಸಭಾದ ಅಖಂಡ ಗಂಗಾವತಿ ತಾಲೂಕು ಯುವ ಘಟಕವನ್ನು ಬುಧವಾರ ರಚಿಸಲಾಯಿತು.