ಮೇ. 5ರಿಂದ ವೀರಭದ್ರೇಶ್ವರ ಜಾತ್ರೆ ಪ್ರಾರಂಭ
Veerabhadreshwara fair begins from May 5th
ನೇಸರಗಿ, 27: ಇಲ್ಲಿನ ಶ್ರೀ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವು ಮೇ. ದಿ. 5 ರಿಂದ ದಿ. 9 ವರೆಗೆ ಜರುಗಲಿದೆ.
ಮೇ. 5 ರಂದು ಸಂಜೆ 4 ಘಂಟೆಗೆ ಕಳಸಾರೋಹಣ ನೆರವೇರುವದು. ಮೇ. 6 ರಂದು ಗ್ರಾಮದೇವಿಯರಿಗೆ ಉಡಿ ತುಂಬುವದು. ಮೇ. 7 ರಂದು ಬೆಳಿಗ್ಗೆ 7 ಘಂಟೆಗೆ ನೇಸರಗಿ ಮಲ್ಲಾಪೂರದ ಶ್ರೀ ಚಿದಾನಂದ ಮಹಾಸ್ವಾಮಿಗಳು ಹಾಗೂ ಹಣಬರಹಟ್ಟಿಯ ಶ್ರೀ ಬಸವಲಿಂಗ ಶಿವಾಚಾರ್ಯರ ಸಾನಿಧ್ಯದಲ್ಲಿ ಉಚಿತ ಸಾಮೂಹಿಕ ರವಿ ಗುಗ್ಗಳೋತ್ಸವ ಏರಿ್ಡಸಲಾಗಿದೆ.
ಗುಗ್ಗಳೋತ್ಸವ ಕಾರ್ಯಕ್ರಮದಲ್ಲಿ ಪುರವಂತರಿಂದ ಒಡಪು, ಒಡಪು, ವೀರಗಾಸೆ, ಗೊಂಬೆ ಕುಣಿತ ನಡೆಯಲಿದೆ. ಸಂಜೆ 3 ಘಂಟೆಗೆ ಮಹಾ ರಥೋತ್ಸವ ನೆರವೇರುವದು. ದಿ. 8 ರಂದು ಮದ್ಯಾಹ್ನ 3 ಘಂಟೆಗೆ ದೇವಸ್ಥಾನದ ಓಣಿಯಲ್ಲಿ 50 ಕೆ.ಜಿ ಉಸುಕು ಹಾಕಿದ ಬಂಡಿಯನ್ನು ಜಗ್ಗುವ ಸ್ಪರ್ಧೆ ಏರಿ್ಡಸಲಾಗಿದೆ. ರಾತ್ರಿ 8 ಘಂಟೆಗೆ ಕರ್ನಾಟಕ ಚೌಕದಲ್ಲಿ ಜಿದ್ದಾಜಿದ್ದಿ ಗಾಯನ ನಡೆಯಲಿದೆ. ದಿ. 9 ರಂದು ಸಂಜೆ 6 ಘಂಟೆಗೆ ಕಳಸ ಇಳಿಸುವದು.
ಸಂಜೆ 7 ಘಂಟೆಗೆ ಲಕ್ಷದೀಪೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶ್ರೀ ವೀರಭದ್ರೇಶ್ವರ ಜಾತ್ರಾ ಕಮಿಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 