ಗುರುಪೂರ್ಣಿಮೆ ನಿಮಿತ್ತವಾಗಿ ವಿವಿಧ ಪೂಜಾ ಕಾರ್ಯಕ್ರಮಗಳು
Various puja programs on the occasion of Gurupurnima
ಹಾವೇರಿ : ಇಲ್ಲಿನ ಹಾನಗಲ್ ರೋಡಿನ ವೈಭವ ಲಕ್ಷ್ಮೀ ಪಾರ್ಕಿನ ಸಾಯಿಬಾಬಾ, ಅಂಬಾಭವಾನಿ, ಗಣೇಶ ದೇವಸ್ಥಾನದಲ್ಲಿ ಗುರುಪೂರ್ಣಿಮೆ ನಿಮಿತ್ತವಾಗಿ ವಿವಿಧ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಬಣ್ಣದ ಮಠದ ಶ್ರೀ ಅಭಿನವರುದ್ರ ಚೆನ್ನಮಲ್ಲಿಕಾರ್ಜುನ ಮಹಾಸ್ವಾಮಿಗಳು ದೇವಸ್ಥಾನದಲ್ಲಿ ಜರುಗಿದ ಗುರುಪೂರ್ಣಿಮೆಯ ಪೂಜಾ ಕಾರ್ಯಕ್ರಮಗಳಿಗೆ ಹಾಗೂ ಶ್ರೀ ಅಂಭಾಭವಾನಿ ದೇವಸ್ಥಾನ ಟ್ರಸ್ಟ್(ರಿ) ಹಾವೇರಿ, ಹಾವೇರಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಜಿಲ್ಲಾ ಆಸ್ಪತ್ರೆಯ ರಕ್ತನಿಧಿ ಕೇಂದ್ರದ ದಿನದ ಪ್ರಯುಕ್ತ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿದರು.ಗುರು ಬಲದಿಂದ ಎಲ್ಲವನ್ನು ಪಡೆಯಲು ಸಾಧ್ಯವಿದೆ. ದೈವಕೃಪೆ ಎಲ್ಲರ ಮೇಲೆ ಇರಲು ಭಕ್ತಿ ಬಹಳ ಮುಖ್ಯ. ಈ ಸುದಿನ ಗುರುಪೂರ್ಣಿಮೆ ದಿವಸ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳಿದ್ದು, ತಾವೆಲ್ಲರೂ ದೇವರ ಕೃಪೆಗೆ ಪಾತ್ರರಾಗಿರಿ ಎಂದು ಶ್ರೀಗಳು ಆರ್ಶಿವಾದ ಮಾಡಿದರು. ಶ್ರೀ ಅಂಭಾಭವಾನಿ ದೇವಸ್ಥಾನ ಟ್ರಸ್ಟ್(ರಿ) ಅಧ್ಯಕ್ಷರಾದ ಪ್ರಕಾಶ ಮುಂಜೋಜಿ ಮಾತನಾಡಿ ಗುರುಪೂರ್ಣಿಮೆ ದಿನ ದೇವಸ್ಥಾನದಲ್ಲಿ ಭಕ್ತರಿಗೆ ಸಾರ್ವಜನಿಕರಿಗೆ ಒಳ್ಳೆಯದು ಆಗಲಿ ಎಂದು ವಿಶೇಷ ಪೂಜೆ ಜರುಗಿದವು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆ ಪಾತ್ರರಾಗುತ್ತಿದ್ದಾರೆ ಎಂದರು.
ರಕ್ತ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ಬಸವರಾಜ ತಳವಾರ ಮಾತನಾಡಿ ನಿಯಮಿತವಾಗಿ ಆರೋಗ್ಯವಾಗಿ ಇರುವ ವ್ಯಕ್ತಿಗಳು ರಕ್ತದಾನ ಮಾಡುವ ಮೂಲಕ ಮತ್ತೊಬ್ಬ ವ್ಯಕ್ತಿಯ ಜೀವ ಉಳಿಸುವ ಕಾಯಕವನ್ನು ಮಾಡಲು ಸಾರ್ವಜನಿಕರು ಮುಂದಾಗಿರಿ ಎಂದರು.ರಕ್ತದಾನ ಮಾಡಿದ ದಾನಿಗಳಿಗೆ ತಿಪಟೂರಿನ ಸ್ನೇಹ ಸೇವಾಶ್ರಮ ಸಂಸ್ಥೆ ವತಿಯಿಂದ ಹಣ್ಣು ಹಂಪಲು ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳಾದ ಕುಮಾರ ಜಾಧವ್,ದೇವರಾಜ ಗುಂಡೆ,ಚಂದ್ರಶೇಖರ ಜಾಧವ್,ರಮೇಶ ಹುಲ್ಲೂರ,ಎನ್ ಆರ್ ಮಾಂಗ್ಲೇನವರ,ಮಾಲತೇಶ ದುಮ್ಮಾಳ,ಎಫ್ ಹೆಚ್ ವರದಿ,ಆರ್ ಸಿ ಪಾಟೀಲ,ಪ್ರಕಾಶ ಪೂಜಾರ,ದೇವಸ್ಥಾನದ ಅರ್ಚಕರಾದ ಶ್ರೀಪಾಧ ಬಟ್ಟರು, ನಾಗರಾಜ ಬಟ್ಟರು, ಸೇವಾಶ್ರಮದ ಶ್ರೀಧರ, ರಕ್ತ ಕೇಂದ್ರದ ಈರಣ್ಣ ಚೌಡಣ್ಣನವರ, ಸಿದ್ದು ಹಿರಿಗಣ್ಣನವರ,ಪುಷ್ಪಾವತಿ ಸಜ್ಜನರ ಪ್ಯಾರಮೆಡಿಕಲ್ ವಿದ್ಯಾರ್ಥಿಗಳು, ರಕ್ತ ನಿಧಿಕೇಂದ್ರದ ಸಿಬ್ಬಂದಿಗಳು ಸೇರಿದಂತೆ ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 