ದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳು
Various programs on the occasion of the Digambareshwara Mutt Jatra Mahotsav
ಕೊಲ್ಹಾರ 31: ಪ್ರತಿ ವರ್ಷದಂತೆ ಈ ವರ್ಷವೂ ದಿಗಂಬರೇಶ್ವರ ಮಠದ ಜಾತ್ರಾ ಮಹೋತ್ಸವ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಪರಮ ಪೂಜ್ಯ ಕಲ್ಲಿನಾಥ ಸ್ವಾಮೀಜಿ ಹೇಳಿದರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪವಾಡ ಪುರುಷ ಕಲ್ಲಪ್ಪಯ್ಯ ಶ್ರೀಗಳು ಸಾವಿರಾರು ವರ್ಷಗಳ ಹಿಂದೆ ಶ್ರೀ ದಿಗಂಬರೇಶ್ವರ ಮಠದ ಜಾತ್ರೆಯನ್ನು ಆರಂಭಿಸಿದ್ದಾರೆ 5 ದಿಗಳ ಕಾಲ ನಡೆಯುತ್ತಿದ್ದ ಜಾತ್ರೆ ಭಕ್ತರ ಸಹಕಾರದಿಂದ ಮಠದಲ್ಲಿ ಪುರಾಣ ಪ್ರವಚನ ಸೇರಿದಂತೆ ಹಲವಾರು ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಇಂದು 21 ದಿನಗಳ ಕಾಲ ನಡೆಯುತ್ತಿದೆ ಎಂದರು.
ಜಾತ್ರಾ ಕಾರ್ಯಕ್ರಮಗಳ ವಿವರ ಎ 1 ಬುಧವಾರ ಸಂಜೆ 5.30ಕ್ಕೆ ಕೊಲ್ಹಾರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಸಾವಿರಾರು ಮಹಿಳೆಯರ ಸಮ್ಮುಖದಲ್ಲಿ ಐತಿಹಾಸಿಕ ರೊಟ್ಟಿ ಜಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಅದೆ ದಿನ ಸಂಜೆ 6 ಗಂಟೆಗೆ ಬಾಗಲಕೋಟ ಜಿಲ್ಲೆಯ ಶಿರೂರದಿಂದ ಸಿದ್ದಲಿಂಗ ಶಿವಯೋಗಿ ಹಾಗೂ ಕಲ್ಲಪ್ಪಯ್ಯ ಶಿವಯೋಗಿಗಳ ಭಾವಚಿತ್ರದದ ಮೆರವಣಿಗೆಯೊಂದಿಗೆ ಪಟ್ಟಣಕ್ಕೆ ಸಂಜೆ 7 ಗಂಟೆಗೆ ಆಗಮಿಸಿ ಜಾತ್ರೆಗೆ ಚಾಲನೆ ದೊರೆಯುವದು.ಎ 2 ಗುರುವಾರ ಬೆಳಿಗ್ಗೆ 6 ಗಂಟೆಗೆ ಕತೃ ಗದ್ದುಗೆಗೆ ರುದ್ರಾಭಿಷೇಕ, ಮದ್ಯಾಹ್ನ ಪಲ್ಲಕ್ಕಿ ಉತ್ಸವ ಹಾಗೂ ರಥೋತ್ಸವದ ಕಳಸದ ಮೆರವಣಿಗೆ ಜರಗುವದು.
ಅದೇ ದಿನ ಸಂಜೆ 5.30ಕ್ಕೆ ಲಕ್ಷಾಂತರ: ಭಕ್ತ ಸಮೂಹಗಳ ಮದ್ಯೆ ಮಹಾರಥೋತ್ಸವ ಜರಗುವದು ಅಂದು ಸಂಜೆ 7 ಗಂಟೆಗೆ ಗೀಗೀ ಪದಗಳು : ರಾತ್ರಿ 10 ಗಂಟೆಗೆ ದೀಪಾವಳಿ ಸುಂದರ ಸಾಮಾಜಿಕ ನಾಟಕ ಜರಗುವದು. ಎ 3 ರಂದು ಶುಕ್ರವಾರ ನೀಲವಾಣಿಯವರ ಮನೆಯಿಂದ ಭಿನ್ನಹ ಹಾಗೂ ಶ್ರೀಗಳ ಪಲ್ಲಕ್ಕಿ ಉತ್ಸವ, ಮದ್ಯಾಹ್ನ 12 ಗಂಟೆಗೆ ಮಹಾಪ್ರಸಾದ ಪಂಕ್ತ ಜರಗುವದು. ಅದೇ ದಿನ ಸಂಜೆ 5 ಗಂಟೆಗೆ ಇತಿಹಾಸ ಪ್ರಸಿದ್ಧ ಹಾಲೋಕಳಿ ಜರಗುವದು. ರಾತ್ರಿ 10 ಗಂಟೆಗೆ ಶ್ರೀ ರೇಣುಕಾ ಯಲ್ಲಮ್ಮ ಎಂಬ ಸುಂದರ ಭಕ್ತಿ ಪ್ರಧಾನ ನಾಟಕ ಜರಗುವದು.ಎ 4 ಶನಿವಾರ ಬೆಳಿಗ್ಗೆ 8 ಗಂಟೆಗೆ ಎತ್ತಿನ ಗಾಡಿ ಓಟದ ಸ್ಪರ್ಧೆ ಜರಗುವದು.
ಸಂಜೆ 7 ಗಂಟೆಗೆ ಚಿತ್ರ ವಿಚಿತ್ರ, ಮದ್ದು ಸುಡುವುದು ಜರಗುವದು. ಅದೇ ದಿನ ರಾತ್ರಿ ಸಂಗ್ಯಾ ಬಾಳ್ಯಾ ಸುಂದರ ಸಾಮಾಜಿಕ ನಾಟಕ ಜರಗುವದು. ಎ.5 ರಂದು ಭಾನುವಾರ ಬೆಳಿಗ್ಗೆ 8 ಗಂಟೆಗೆ ಪುರುಷರಿಗಾಗಿ ಸೈಕಲ್ ಸ್ಪರ್ಧೆ ಜರಗುವದು. ರಾತ್ರಿ 10 ಗಂಟೆಗೆ ಶ್ರೀ ಕೃಷ್ಣ ಮಹಾತ್ಮ ಭಕ್ತಿ ಪ್ರಧಾನ ನಾಟಕ ಜರಗುವದು.ಎ 6 ಸೋಮವಾರ ವಿಜಯಪುರ ಎ ಪಿ ಎಂ ಸಿ ಯಿಂದ ಉತ್ತಮ ಜಾನುವಾರಗಳಿಗೆ ಬಹುಮಾನಗಳನ್ನು ನೀಡಲಾಗುವದು. ಸಂಜೆ 5 ಗಂಟೆಗೆ ದಿಗಂಬರೇಶ್ವರ ರಥೋತ್ಸವದ ಕಳಸ ಇಳಿಸುವುದರೊಂದಿಗೆ ಜಾತ್ರೆ ಮಂಗಲ ಗೊಳ್ಳುವುದು
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 