ಹಿರಿಯ ನಾಗರೀಕರಿಗೆ, ವಿಶೇಷಚೇತನರಿಗೆ ವಿವಿಧ ಸಾಧನ ಸಲಕರಣೆ ವಿತರಣೆ ಕಾರ್ಯಕ್ರಮ
Various equipment distribution program for senior citizens and the disabled
ವಿಜಯನಗರ (ಹೊಪೇಟೆ) 13: ಜಿಲ್ಲೆಯ ಹಿರಿಯ ನಾಗರೀಕರು, ವಿಶೇಷ ಚೇತನರು ಸರ್ಕಾರದ ಯೋಜನಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಹ ಸರ್ಕಾರದ ಯೋಜನೆಗಳು ಸಮರ್ಕವಾಗಿ ಸಿಗುವಂತಾಗಬೇಕು ಎಂದು ಸಂಸದ ಈ.ತುಕಾರಾಂ ಹೇಳಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಸೋಮವಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಅಲಿಂಕೋ ಸಂಸ್ಥೆ ವತಿಯಿಂದ ಆಯೋಜಿಸಲಾಗಿದ್ದ ವಿಜಯನಗರ ಜಿಲ್ಲೆಯಾದ್ಯಂತ ವಿಕಲಚೇನರಿಗೆ ಮತ್ತು ಹಿರಿಯ ನಾಗರೀಕರಿಗೆ ಸಾಧನಾ ಸಲಕರಣೆಗಳನ್ನು ನೀಡುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಮಾನವ ಜನ್ಮ ಸಹಜವಾದುದು ಆದರೆ ಜನಿಸುವಾಗ ಕೆಲವು ಪೌಷ್ಠಿಕಾಂಶ ಹಾಗೂ ಇತರೆ ಕಾರಣಗಳಿಂದ ಅಂಗವೈಕಲ್ಯರಾಗಿ ಹುಟ್ಟುತ್ತಾರೆ. ಅದನ್ನು ಶಾಪವಾಗಿ ಪರಿಗಣಿಸದೇ ಪ್ರತಿಯೊಬ್ಬರೂ ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಂಡು ಅಂಗವೈಕಲ್ಯತೆಯನ್ನೂ ಮೀರಿ ಯಶಸ್ವೀ ಜೀವನ ಸಾಗಿಸಬೇಕು. ಇಲಾಖೆಗಳು ಸಹ ಸರ್ಕಾರದ ಯೋಜನೆಗಳನ್ನು ಸಕಾಲಕ್ಕೆ ಅರ್ಹ ಫಲಾನುಭವಿಗಳಿಗೆ ತಲುಪಿಸಬೇಕು ಎಂದ ಅವರು, ಪೋಷಕರು ಸಹ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಮಕ್ಕಳು ಶಿಕ್ಷಣವಂತರಾದರೆ ದೇಶ, ಸಮಾಜ ಪ್ರಗತಿ ಕಾಣಲಿದೆ. ಈ ನಿಟ್ಟಿನಲ್ಲಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳನ್ನು ತಲುಪಿಸಿ ಜಿಲ್ಲೆಯ ಸರ್ವೋತೋಮುಖ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದರು.
ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ದೈಹಿಕವಾಗಿ ಸದೃಢರಾಗಿರುವವರಲ್ಲಿಯೇ ಮಾನಸಿಕ ಮತ್ತು ದೈಹಿಕವಾಗಿ ಕೆಲವು ನ್ಯೂನತೆಗಳು ಇರುತ್ತವೆ. ಅಂಗವೈಕಲ್ಯ, ವಿಶೇಷಚೇತನರಿಗೆ ಇನ್ನು ಕಷ್ಟವಾಗಲಿದೆ. ಅಂತಹ ಅರ್ಹ ಫಲಾನುಭವಿಗಳಿಗೆ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ನೀಡಲಾಗುವ ಸಾಧನ, ಸಲಕರಣೆಗಳು ಹಿರಿಯ ನಾಗರೀಕರಿಗೆ ಮತ್ತು ವಿಶೇಷಚೇತರಿಗೆ ತುಂಬಾ ಉಪಯುಕ್ತವಾಗಲಿವೆ ಎಂದರು.
77,55,898 ರೂ ವೆಚ್ಚದ ವಿವಿಧ ಸಾಧನ ಸಲಕರಣೆ ವಿತರಣೆ:
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಅರ್ಹ ಫಲಾನುಭವಿಗಳಿಗೆ ವ್ಹೀಲ್ಚೇರ್, ದೃಷ್ಠಿದೋಷವುಳ್ಳವರಿಗೆ ತ್ರಿಚಕ್ರ ವಾಹನ, ಬ್ಲೈಂಡ್ಸ್ಟಿಕ್, ಮುಂತಾದವುಗಳನ್ನು ನೀಡುವ ಸಲುವಾಗಿ ಜಿಲ್ಲೆಯ 6 ತಾಲ್ಲೂಕುಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಲಾಗಿತ್ತು. ಅದರಲ್ಲಿ ಭಾಗವಹಿಸಿದ ಫಲಾನುಭವಿಗಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಆಯ್ಕೆಯಾದ ಅರ್ಹ 356 ಪುರುಷ, 213 ಮಹಿಳೆ ಸೇರಿ ಒಟ್ಟು 569 ಅರ್ಹ ವಿಶೇಷಚೇತನರಿಗೆ ಹಾಗೂ 95 ಹಿರಿಯ ನಾಗರೀಕರಿಗೆ ರೂ.77,55,898 ವೆಚ್ಚದ ವ್ಹೀಲ್ಚೇರ್, ಎಲ್ಬೋಕ್ರಚಸ್, ವಾಕಿಂಗ್ ಸ್ಟಿಕ್, ಬ್ರೆಲ್ ಕಿಟ್, ಸಿ.ಪಿ ವೀಲ್ಚೇರ್, ಟಿ.ಎಲ್.ಎಂ.ಕಿಟ್, ್ಠ್ಲ್ಕ್ಣಳ್ಲರ್ಿ್ಯೆ್ಲೂ, 49 ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಸಾಧನ ಸಲಕರಣೆ ವಿತರಿಸಲಾಯಿತು.
ಈ ವೇಳೆ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ತಿಮ್ಮಪ್ಪ, ನಗರಸಭೆ ಅಧ್ಯಕ್ಷ ಎನ್.ರೂಪೇಶ್ ಕುಮಾರ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಇಮಾಮ್ ನಿಯಾಜಿ, ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವೆಂಕಟರಮಣ ಸೇರಿದಂತೆ ವಿವಿಧ ಇಲಾಖೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಚುನಾಯಿತ ಸದಸ್ಯರು ಇದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 