ವಿವಿಧ ಸಂಘಗಳು ವಿವಿಧ ಸಂಘಗಳು, ಸಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭ

ವಿವಿಧ ಸಂಘಗಳು ವಿವಿಧ ಸಂಘಗಳು, ಸಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭ Various associations, cultural activities Inaugural ceremony

ಮಾಂಜರಿ, 19 ; ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದ  ಶ್ರೀ ಗೊಮಟೇಶ ಶಿಕ್ಷಣ ಸಂಸ್ಥೆಯ ಅಂಗ ಸಂಸ್ಥೆಯಾದ ಡಾಽಽ ಎನ್ ಎ ಮಗದುಮ್ ಸೆಂಟ್ರಲ್ ಪಬ್ಲಿಕ ಸ್ಕೂಲ  ಅಂಕಲಿ ಸಂಯುಕ್ತ ಆಶ್ರಯದಲ್ಲಿ ಶನಿವಾರ ರಂದು ವಿವಿಧ ಸಂಘಗಳು ಹಾಗೂ ಸಂಸ್ಕೃತಿಕ ಚಟುವಟಿಕೆ ಉದ್ಘಾಟನಾ ಸಮಾರಂಭ ಜರುಗಿತು. ಈ ಸಮಾರಂಭದಲ್ಲಿ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಡಾ.ಎನ್‌. ಎ. ಮಗದುಮ್ ಅವರು ಸರಸ್ವತಿ ದೇವಿಯ ಪೂಜೆ ಹಾಗೂ ವಿವಿಧ ಸಂಘಗಳ ಉದ್ಘಾಟನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. 

ಕಾರ್ಯಕ್ರಮದಲ್ಲಿ ಭಾಗಿಯಾದ ಸಹ ಶಿಕ್ಷಕರಾದ ಸೂರ್ಯಕಾಂತ್ ಮೋನೆಯವರು ಮಕ್ಕಳ ಸವಾಂರ್ಗೀಣ ಅಭಿವೃದ್ಧಿಗಾಗಿ ಪಠ್ಯಕ್ರಮದ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳು ಸಹ ಅಷ್ಟೇ ಮುಖ್ಯ ಜೊತೆಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ ಬೆಳೆಯಲು ವಿವಿಧ ಸಂಘಗಳು ಅತ್ಯವಶ್ಯಕ ಎಂದು ಪ್ರಾಸ್ತಾವಿಕ ನುಡಿಗಳನ್ನು ಹೇಳಿದರು. ತದನಂತರ ಸಾಂಸ್ಕೃತಿಕ ಚಟುವಟಿಕೆ ಕಾರ್ಯಕ್ರಮ ಕುರಿತು ಶಾಲಾ ವಿದ್ಯಾರ್ಥಿಗಳಿಂದ ಭಾಷಣವನ್ನು ಮಾಡಿಸಲಾಯಿತು.  

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿರುವ ಸಂಸ್ಥೆಯ ಅಧ್ಯಕ್ಷರಾದ ಡಾ. ಎನ್‌.ಎ. ಮಗದುಮ್ ಅವರು ಈಗಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ರಮಕ್ಕೆ ಸಂಬಂಧಿಸಿದಂತೆ ಮಾತ್ರ ಜ್ಞಾನವನ್ನು ಪಡೆಯದೆ ವಿವಿಧ ಕ್ಷೇತ್ರಗಳಲ್ಲಿ ಸಹ ವಿದ್ಯಾರ್ಥಿಗಳು ಆಸಕ್ತಿಯನ್ನು ತೋರಿಸಿ ವಿದ್ಯಾರ್ಥಿಗಳು ಪಠ್ಯಚಟುವಟಿಕೆಯ ಜೋತೆಯಲ್ಲಿ ಕ್ರೀಡೆ, ಸಾಂಸ್ಕೃತಿಕ ಪ್ರತಿಭಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಅಗತ್ಯವಿದೆ. ಪಠ್ಯ ಶಿಕ್ಷಣ, ಕ್ರೀಡೆ ಹಾಗೂ ಕಲೆ ಮತ್ತು ಸಂಸ್ಕೃತಿ ವಿಭಾಗಳು ಶಿಕ್ಷಣದ ಅವಿಭಾಜ್ಯ ಅಂಗವಾಗಿರುವುದನ್ನು ವಿದ್ಯಾರ್ಥಿಗಳು ಮತ್ತು ಪೋಷಕರು ಅರಿತುಕೊಳ್ಳಬೇಕು ಎಂದರು.  

ಈ ವೇಳೆ ಸುರೇಶ್ ಚೌಗುಲಾ ಮಾತನಾಡಿ  ಶಿಕ್ಷಣ ಕ್ಷೇತ್ರ ಅಭಿವೃದ್ಧಿ ಹೊಂದಿದಷ್ಟೆ, ಕ್ರೀಡಾ ಮತ್ತು ಕಲೆ-ಸಂಸ್ಕೃತಿ ಕ್ಷೇತ್ರ ಅಭಿವೃದ್ಧಿ ಸಾಧಿಸುತ್ತದೆ. ಈ ಎರಡು ಕ್ಷೇತ್ರಗಳು ಬೆಳವಣಿಗೆಯಾಗಬೇಕಾದರೆ ಶಾಲಾ-ಕಾಲೇಜುಗಳಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಕ್ರೀಡೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಮಾತನಾಡಿದರು ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. ಅದೇ ರೀತಿಯಾಗಿ ಈ ಕಾರ್ಯಕ್ರಮದಲ್ಲಿ ಶಾಲಾ ಚುನಾವಣೆಯಲ್ಲಿ ಆಯ್ಕೆಯಾದ ಶಾಲಾ ಪ್ರತಿನಿಧಿಯಾಗಿ ಆಯ್ಕೆಯಾದ ಟೀನಾ ಜೋಶಿ ಹಾಗೂ ಅದಿರಾಜ ಕೊಲೆ ಇವರನ್ನು ಗೌರವಿಸಿ ಅವರಿಗೆ ಅಧಿಕಾರವನ್ನು ನೀಡಿ ಅವರ ಜವಾಬ್ದಾರಿಯನ್ನು ತಿಳಿಸಲಾಯಿತು. ಬಳಿಕ ಶಾಲಾ ವಿದ್ಯಾರ್ಥಿಗಳಿಂದ ನೃತ್ಯ ಕಾರ್ಯಕ್ರಮ ಜರುಗಿತು. 

ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಸುರೇಶ  ಚೌಗಲೆ ಉಪಪ್ರಾಚಾರ್ಯರಾದ ವೈಶಾಲಿ ಇಂಗಳೆ ಶಿಕ್ಷಕರಾದ ಸೂರ್ಯಕಾಂತ ಮೊನೆ. ಸಂತೋಷ ಚವ್ಹಾಣ, ಶ್ರೀಶೈಲ ಮಾನೆ , ಫಕ್ಕಿರೇಶ ಗೊಂದಿ, ರಾಜು ಕುಂಬಾರ, ರೇಖಾ ಪಾಟೀಲ, ಸುನಂದಾ ಐನಾಪುರೆ ಮುಂತಾದವರು ಭಾಗವಹಿಸಿದ್ದರು.ಈ ಒಂದು  ಕಾರ್ಯಕ್ರಮದಲ್ಲಿ ಭಾಗಿಯಾಗಿರುವ  ಎಲ್ಲರನ್ನು  ಎಂಟನೇ ತರಗತಿಯ ವಿದ್ಯಾರ್ಥಿಯಾದ  ಖದೀಜಾ  ತಾಂಬಟ ಸ್ವಾಗತಿಸಿದಳು, ದರ್ಶಿನಿ ಪಾಟೀಲ ಒಂದಿಸಿದಳು  ಹಾಗೂ ಈ ಕಾರ್ಯಕ್ರಮವನ್ನು 9ನೇ ತರಗತಿ ವಿದ್ಯಾರ್ಥಿಯಾದ ನಮೃತಾ ಗುಣಕೆ ನಿರೂಪಿಸಿದಳು.