ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ
ದೇವರಹಿಪ್ಪರಗಿ 16: ತಾಲೂಕಿನ ಕೋರವಾರ ವಿದ್ಯುತ್ ಉಪ ಕೇಂದ್ರದ 33/11ಕೆವ್ಹಿ ಸ್ಟೇಷನ್ ನಲ್ಲಿ ತುರ್ತು ಕಾರ್ಯನಿರ್ವಹಣೆ ಇರುವುದರಿಂದ ಉಪ ಕೇಂದ್ರದಿಂದ ಹೊರಡುವ ಎಲ್ಲಾ ವಿದ್ಯುತ್ ಫೀಡರ್ ಗಳಲ್ಲಿ ದಿ.18ರಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಪ್ರಭುಸಿಂಗ ಹಜೇರಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉಪ ಕೇಂದ್ರದ 11ಕೆವ್ಹಿ ಮಾರ್ಗಗಳಾದ ಕೋರವಾರ ಎನ್ ಜೆ ವಾಯ್, ಹಂದಿಗನೂರ ಪುರದಾಳ ಎನ್ ಜೆ ವಾಯ್,ಜಾಲವಾದ, ಕೊಕಟನೂರ ಎನ್ ಜೆ ವಾಯ್, ಕೊಕಟನೂರ ಐಪಿ, ಪುರದಾಳ ಐಪಿ, ಪುರದಾಳ ಕೆರಿ, ಜಾಲವಾದ ಐಪಿ, ಹಂದಿಗನೂರು ಐಪಿಗಳು ದಿ.18ರಂದು ಬೆಳಗ್ಗೆ 9ಗಂಟೆಯಿಂದ ಸಾಯಂಕಾಲ 6ರವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ಸದರಿ ಮಾರ್ಗಗಳ ಮೇಲೆ ಬರುವ ಎಲ್ಲಾ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕಾಗಿ ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.