ವಿಶ್ವ ಪರಿಸರ ದಿನ ಅಂಗವಾಗಿ ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ವನಮಹೋತವ

ವಿಶ್ವ ಪರಿಸರ ದಿನ ಅಂಗವಾಗಿ ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ  ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ವನಮಹೋತವ Vanamahotava at Basava Sanskriti School, V M Kotagi, Basava Kendra, Gokul Road, Murarjinagar 2nd Pha

ಹುಬ್ಬಳ್ಳಿ 05:    ವಿಶ್ವ ಪರಿಸರ ದಿನ ಅಂಗವಾಗಿ ಗೋಕುಲ ರಸ್ತೆ, ಮುರಾರ್ಜಿನಗರ 2ನೇ ಹಂತ, ಬಸವ ಕೇಂದ್ರದ  ವಿ ಎಂ ಕೊಟಗಿ ಬಸವ ಸಂಸ್ಕೃತಿ ಶಾಲೆಯಲ್ಲಿ ವನಮಹೋತ್ಸವ ಆಚರಿಸಲಾಯಿತು. ಶಾಲೆಯ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ   ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಅವರು ಸಸಿಗೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಪರಿಸರ ಸಂರಕ್ಷಣೆ ಮಾಡಿ, ನಮ್ಮ ನಮ್ಮ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ, ಈ ಭೂಮಿಯೇ ಸ್ವರ್ಗವಾಗುತ್ತದೆ. 

ಪರಿಸರ ಸಂರಕ್ಷಣೆಯ ಬಗ್ಗೆ ಜಾಗೃತಿ ಮೂಡಿಸುವುದು. ಪ್ರಕೃತಿಯನ್ನು ಸಂರಕ್ಷಿಸಲು ಪ್ರೋತ್ಸಾಹಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು. ಬಸವ ಕೇಂದ್ರದ  ವಿ ಎಂ ಕೊಟಗಿ  ಬಸವ ಸಂಸ್ಕೃತಿ ಶಾಲೆಯ ಸಮಿತಿಯ  ಕಾರ್ಯದರ್ಶಿಗಳು, ನಿವೃತ್ತ ಪ್ರಾಧ್ಯಾಪಕ ಡಾ. ಪ್ರಕಾಶ್ ಮುನ್ನೊಳ್ಳಿ, ಶಾಲೆಯ    ಪ್ರಾಚಾರ್ಯ    ಜೆ. ಪಿ. ಕಲವಕುರಿ,  ಶಿಕ್ಷಕಿಯರಾದ    ಶಶಿಕಲಾ ವಾಲಿ, ಮಾಲಾ ರಮೇಶ್, ಮಧು ಕಂಠಿ, ನೇಹಾ ಕಂಠಿ, ಶ್ರುತಿ ಇಬ್ರಾಹಿಂಪುರ , ಪ್ರೀತಿ ಪಾಡಾ, ಈಶ್ವರಿ ಬೆಸ್ತ, ಯಶೋಧ ಗಾಯಕ್ವಾಡ್, ಪ್ರಿಯಾ ಸಂಕನಗೌಡರ,     ಆರತಿ ಜಮ್ಯಾಳ,     ಶಾಲೆಯ ಮಕ್ಕಳು, ಪಾಲಕರು, ಮುಂತಾದವರು ಭಾಗವಹಿಸಿದ್ದರು. ಶಾಲೆಯ ಮಕ್ಕಳು ಮುರಾರ್ಜಿ ನಗರದ ಓಣಿಗಳಲ್ಲಿ ಪ್ರಭಾತ್ ಪೇರಿ ಮಾಡುವ ಮೂಲಕ ಪರಿಸರ ಉಳಿಸಿ, ಪರಿಸರ ಬೆಳೆಸಿ, ನಮ್ಮ ಭೂಮಿ ನಮ್ಮ ಜವಾಬ್ದಾರಿ, ಮುಂತಾದ ಘೋಷಣೆಗಳನ್ನು ಕೂಗಿತ್ತಾ ಶುದ್ಧ ಗಾಳಿ, ಶುಧ್ಧ ನೀರು, ಸ್ವಚ್ಛತೆ, ಪರಿಸರ ಸಂರಕ್ಷಣೆ, ಸುಂದರ ಪರಿಸರ ನಿರ್ಮಾಣ ಮಾಡುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಜನರಲ್ಲಿ ಜಾಗೃತಿ ಮೂಡಿಸಿದರು.   ಮಕ್ಕಳು , ಶಿಕ್ಷಕರು ಜನರ  ಮೆಚ್ಚುಗೆಗೆ ಪಾತ್ರರಾದರು.