ಮೌಲ್ಯಯುತ ಶಿಕ್ಷಣ ಇಂದಿನ ಅಗತ್ಯ: ರಾಜು ಕಾಗೆ
Valuable education is the need of the hour: Raju Kage
ಕಾಗವಾಡ, 21 : ಬರೀ ಉನ್ನತ ಶಿಕ್ಷಣದಿಂದ ಉನ್ನತ ಹುದ್ದೆಗೇರಬಹುದು. ಆದರೇ ಸಂಸ್ಕಾರ, ಮೌಲ್ಯಯುತ ಉನ್ನತ ಶಿಕ್ಷಣದಿಂದ ಉನ್ನತ ಹುದ್ದೆಯ ಜೊತೆಗೆ ಪರಿಪೂರ್ಣ ವ್ಯಕ್ತಿಗಳಾಗಿ ಹೊರಹೊಮ್ಮಬಹುದು. ವಿದ್ಯಾರ್ಥಿಗಳು ಉತ್ತಮ ಶಿಕ್ಷಣದ ಜೊತೆಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಗುರು-ಹಿರಿಯರನ್ನು ಮತ್ತು ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕೆಂದು ಶಾಸಕ ರಾಜು ಕಾಗೆ ಹೇಳಿದ್ದಾರೆ.
ಅವರು ಬುಧವಾರ ದಿ. 21 ರಂದು ಮತಕ್ಷೇತ್ರದ ಸಂಬರಗಿ ಗ್ರಾಮದ ಶ್ರೀ ವಿಠ್ಠಲ ಶಿಕ್ಷಣ ಸಂಸ್ಥೆಯ ಸಂಘಮಿತ್ರ ಸಂಯುಕ್ತ ಪಪೂ ಮಹಾವಿದ್ಯಾಲಯದಲ್ಲಿ 2025-26 ನೇ ಸಾಲಿನ ಎಸ್‌ಎಸ್‌ಎಲ್‌ಸಿ ಮತ್ತು ದ್ವೀತಿಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಮಾತನಾಡುತ್ತಿದ್ದರು. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಅಂಕಗಳನ್ನು ಪಡೆದುಕೊಂಡರೇ ಸಾಲದು. ಹೆಚ್ಚು ಶಿಕ್ಷಣ ಪಡೆದವರೇ ಇಂದು ತಂದೆ-ತಾಯಿಗಳನ್ನು ವೃದ್ಧಾಶ್ರಮಕ್ಕೆ ತಳುತ್ತಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳನ್ನು ಗೌರವದಿಂದ ಕಾಣುವ ಮೌಲ್ಯಗಳನ್ನು ಕಲಿಯಬೇಕಾಗಿದೆ ಎಂದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಾಗನೂರ ಪಿಎಯ ಬೀರಲಿಂಗೇಶ್ವರ ಸಿದ್ಧಾಶ್ರಮದ ಪಪೂ ಶ್ರೀ ಶಿವಸಿದ್ಧ ಬೀರಲಿಂಗೇಶ್ವರ ಮಹಾರಾಜರು ವಹಿಸಿ, ಆಶೀರ್ವಚನ ನೀಡಿದರು. ಇನ್ನೋರ್ವ ಅತಿಥಿಯಾಗಿ ಅಥಣಿ ಪುರಸಭೆ ಸದಸ್ಯರು, ಉದ್ಯಮಿಗಳಾದ ರಾವಸಾಹೇಬ ಐಹೊಳೆ ತಮ್ಮ ಅನಿಸಿಕೆ ಹಂಚಿಕೊಂಡರು.
ಗಣ್ಯರು ದೀಪ ಬೆಳಗಿಸುವ ಮೂಲಕ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಸಮಾರಂಭದಲ್ಲಿ ಕ್ರೀಡೆಗಳು ಮತ್ತು ವಿವಿಧ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ, ಆದರ್ಶ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಿ, ಸನ್ಮಾನಿಸಲಾಯಿತು. 8ನೇ ತರಗತಿಯ ವಿದ್ಯಾರ್ಥಿನಿಯರು ಶಾಲೆಯ ಕುರಿಸು ಸುಂದರ ಗೀತೆಯನ್ನು ಪ್ರಸ್ತುತ ಪಡಿಸಿದರು.
ಈ ವೇಳೆ ಶ್ರೀ ವಿಠ್ಠಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪಾಂಡುರಂಗ ಕಾಂಬಳೆ, ಜಮಖಂಡಿಯ ಕನ್ನಡ ಉಪನ್ಯಾಸಕ ವ್ಹಿ.ಬಿ. ಜೋಡಟ್ಟಿ, ಹಿರಿಯ ಆಂಗ್ಲ ಉಪನ್ಯಾಸಕ ಪಾಂಡುರಂಗ ಕೋಳಿ, ಪಿಕೆಪಿಎಸ್ ಅಧ್ಯಕ್ಷ ವಿಲಾಸ ಟೋಣಿ, ಗ್ರಾ.ಪಂ. ಅಧ್ಯಕ್ಷೆ ಮಿನಾಕ್ಷಿ ದಳವಾಯಿ, ದೀಪಕ ದೇಶಪಾಂಡೆ, ಮುರಳಿಧರ ದೇಶಪಾಂಡೆ, ಆರ್.ಎಂ. ಶಿಂಗೆ, ಮೋಹನ ದೇವಮಾನೆ, ಮಲ್ಲಿಕಾರ್ಜುನ ದಳವಾಯಿ, ಅನೀಲ ಪಾಟೀಲ, ಎಂ.ಬಿ. ಚೌಗುಲಾ, ತುಳಸಿರಾಮ ವಾಯಫಳೆ, ಅಮೋಲ ಕಾಂಬಳೆ, ಆನಂದ ಕುಂಬಾರ, ಸುನೀತಾ ಗಸ್ತಿ ಸೇರಿದಂತೆ ಶಿಕ್ಷಕರು, ಪಾಲಕರು, ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 