ಮಾಜಿ ಸಂಸದ,ರಮೇಶ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಸಮಾಜ ಆಗ್ರಹ
Valmiki society demands strict action against former MP, Ramesh Katthi
ಲೋಕದರ್ಶನ ವರದಿ
ಮಾಜಿ ಸಂಸದ,ರಮೇಶ ಕತ್ತಿ ವಿರುದ್ಧ ಕಠಿಣ ಕ್ರಮಕ್ಕೆ ವಾಲ್ಮೀಕಿ ಸಮಾಜ ಆಗ್ರಹ
ಕಂಪ್ಲಿ 23 :ವಾಲ್ಮೀಕಿ ಸಮುದಾಯಕ್ಕೆ ಅಶ್ಲೀಲ ಪದ ಬಳಸಿ ಅವಹೇಳನ ಮಾಡಿದ ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಮೇಶ ಕತ್ತಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕಂಪ್ಲಿ ತಾಲೂಕು ಘಟಕ ಹಾಗೂ ನಗರ ಘಟಕದಿಂದ ಪಟ್ಟಣದ ತಹಶೀಲ್ದಾರ್ ಕಛೇರಿ ಮುಂದೆ ಗುರುವಾರ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಅನುಪಸ್ಥಿತಿಯಲ್ಲಿ ಗ್ರೇಡ್-2 ತಹಶೀಲ್ದಾರ್ ಷಣ್ಮುಕಪ್ಪಗೆ ಮನವಿ ಪತ್ರ ಸಲ್ಲಿಸಿದರು. ವಾಲ್ಮೀಕಿ ಸಮುದಾಯದ ಕಂಪ್ಲಿ ತಾಲೂಕು ಘಟಕದ ಅಧ್ಯಕ್ಷ ನೀಗಂರ್ಟಿ ವಿರೇಶ ಮಾತನಾಡಿ, ‘ಜವಾಬ್ದಾರಿ ಸ್ಥಾನದಲ್ಲಿ ಇರುವ ರಮೇಶ ಕತ್ತಿ ಅವರು ವಾಲ್ಮೀಕಿ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದ್ದು ಸರಿಯಲ್ಲ. ಶೋಷಿತ ಸಮುದಾಯ ಹೀಯಾಳಿಸಿದ ಅವರಿಗೆ ಮುಂದೆ ಪ್ರತ್ಯುತ್ತರ ಕೊಡುತ್ತೇವೆ’ ಎಂದು ಎಚ್ಚರಿಕೆ ಕೊಡುವ ಜೊತೆಗೆ ಜಾತಿ ನಿಂದಿಸಿದ ರಮೇಶ ಕತ್ತಿಗೆ ಕಾನೂನುಕ್ರಮವಾಗಬೇಕು. ರಮೇಶ ವಿಶ್ವನಾಥ ಕತ್ತಿ ಇವರು ಸಾರ್ವಜನಿಕ ವೇದಿಕೆಯಲ್ಲಿ ವಾಲ್ಮೀಕಿ ಸಮಾಜದವರಿಗೆ ಅವಮಾನಕಾರಿ ಪದ ಬಳಕೆಯನ್ನು ಮಾಡಿದ್ದನ್ನು ಉಗ್ರವಾಗಿ ಖಂಡಿಸುತ್ತೇವೆ. ಸಂಪೂರ್ಣ ಅನುಸೂಚಿತ ಬುಡಕಟ್ಟು ಸಮುದಾಯವನ್ನು ಅವಹೇಳನ ಕಾರಿ ಈ ಪದ ಬಳಕೆ ಅತ್ಯಂತ ನಿಂದನೆ ಮತ್ತು ಮಾನ ಹಾನಿಕಾರಕ ಹಾಗೂ ಬುಡಕಟ್ಟು ಕುಗ್ಗಿಸುವ ಜೊತೆಗೆ ಅವಮಾನ ಮಾಡಿದ್ದಾನೆ ಇತನನ್ನು ಅನುಸೂಚಿತ ಜಾತಿ ಮತ್ತು ಬುಡಕಟ್ಟು ಕಾಯ್ದೆಡಿಯಲ್ಲಿ ದಾಖಲಿಸಿ ನಿಷ್ಪಕ್ಷಪಾತ ತನಿಕೆ ನಡೆಸಿ ಅಪರಾಧಿಗೆ ಕಾನೂನಿನ ಪ್ರಕಾರ ಶಿಕ್ಷೆ ವಿಧಿಸಿ ತಕ್ಷಣವೇ ಬಂದಿಸಬೇಕೆಂದು ಒತ್ತಾಯಿಸಿದರು ಪುರಸಭೆ ಸದಸ್ಯ ರಾಮಾಂಜಿನಿ ಮುಖಂಡರಾದ ಹೋನ್ನಳಿದೇವಣ್ಣ ಎಂ.ಲೋಕೇಶ ರಂಗಯ್ಯ ಶೇಖರ್ ಹಾಲುಮಾರ ಈರಣ್ನ ಬೆಳಗೊಡುನಾಗರಾಜ ಟಿ.ದೇವ ಟಿ.ರಾಮಯ್ಯ ಲಿಂಗಪ್ಪ ಗಿರಿಯಪ್ಪ ಮಾವಿನಹಳ್ಳಿ ಮುದಿಯಪ್ಪ ಸೇರಿ ಅನೇಕ ಸಮಾಜದ ಮುಖಂಡರಿದ್ದರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 