ವಾಲ್ಮೀಕಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆ - ಪ್ರಕಾಶ್ ಕೋಳಿವಾಡ
Valmiki is a synthesis of the great qualities of Rama - Prakash Koliwad
ವಾಲ್ಮೀಕಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆ - ಪ್ರಕಾಶ್ ಕೋಳಿವಾಡ
ರಾಣಿಬೆನ್ನೂರ 07 : ವಾಲ್ಮೀಕಿ ಮಹರ್ಷಿಗಳ ಜಯಂತಿ ಎಂದರೆ ಅದು ರಾಮನ ಮಹಾಗುಣಗಳ ಸಂಕೀರ್ತನೆಯಾಗಿದೆ. ರಾಮಾಯಣದ ಪಾರಾಯಣವು ಕೂಡ, ಈ ಸೃಷ್ಟಿ ಇರುವ ತನಕವೂ ರಾಮಾಯಣ ಎಂಬ ಮಹಾಕಾವ್ಯವು ಲೋಕದಲ್ಲಿ ಪ್ರಸಿದ್ಧವಾಗಿರುತ್ತದೆ. ಪರಂಪರೆಯಲ್ಲಿ ಇದು ಏಕಕಾಲದಲ್ಲಿ ವಾಲ್ಮೀಕಿಯನ್ನೂ ರಾಮನನ್ನೂ ನಿತ್ಯ ಸತ್ಯವನ್ನಾಗಿಸಿದೆ. ಅಂತಹ ಅಪೂರ್ವ ಕಾವ್ಯವನ್ನು ಸೃಷ್ಟಿಸಿದ ಮಹರ್ಷಿ ಕವಿ ವಾಲ್ಮೀಕಿ ಅವರಾಗಿದ್ದಾರೆ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ಅವರು ಮಂಗಳವಾರ ತಾ.ಪಂ ಸಭಾಭವನದಲ್ಲಿ ನಡೆದ ತಾಪಂ, ಸಮಾಜ ಕಲ್ಯಾಣ ಇಲಾಖೆ, ನಗರಸಭೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕು ಘಟಕ ಇವರುಗಳ ಸಂಯುಕ್ತಾಶ್ರಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ರಾಮ-ಲಕ್ಷಣರ ಪ್ರೀತಿ, ವಾತ್ಸಲ್ಯ, ಸೀತೆ ತ್ಯಾಗ ಹಾಗೂ ದುರಹಂಕಾರದಿಂದ ಮೆರದಾಡಿದ ರಾವಣನ ಘೋರ ಅಂತ್ಯ ಇವೆಲ್ಲವನ್ನೂ ರಾಮಾಯಣದಲ್ಲಿ ವಿಸ್ತಾರವಾಗಿ ವಿವರಿಸಿದ್ದಾರೆ ಎಂದರು.
ವಾಲ್ಮೀಕಿಗಳ ವ್ಯಕ್ತಿತ್ವದಲ್ಲಿ ಮಹತ್ತರ ಬದಲಾವಣೆಯಾದದ್ದು ಅವರು ರಾಮನ ಬಗ್ಗೆ ನಾರದರು ಹೇಳಿದ ಮಾತುಗಳನ್ನು ಕೇಳಿದ ಮೇಲೆಯೇ, ಮೊದಲಿಗೆ ಅವರು ತಮ್ಮ ಮೋಕ್ಷವನ್ನು ಬಯಸಿ ಸಾಧನೆಯಲ್ಲಿ ನಿರತ ತಪಸ್ವಿಗಳಷ್ಟೇ ಆಗಿದ್ದರು. ಆದರೆ ರಾಮನ ಕಥೆಯನ್ನು ಕೇಳಿ ಅವರು ಜಗತ್ತಿನ ಸಂಕಟಕ್ಕೆ ಸ್ಪಂದಿಸಬಲ್ಲ ಋಷಿಕವಿಗಳೇ ಆದರು.
ಇದೇ ಸಂದರ್ಭದಲ್ಲಿ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್ಸಿಯಲ್ಲಿ ಅತಿಹೆಚ್ಚು ಅಂಕಗಳಿಸಿದ ಪರಿಶಿಷ್ಟ ಪಂಗಡಗಳ ವಿದ್ಯಾರ್ಥಿಗಳಾದ ನಿವೇದಿತಾ ಕಡಸಾಲಿ ಶೇ. (98.4), ಸ್ನೇಹಾ ಚಿತ್ತಣ್ಣನವರ ಶೇ. (98.08), ಅನು ಅಮರಾವತಿ ಶೇ.(97. 92), ಪಿಯುಸಿ ವಿಭಾಗ: ತೇಜಶ್ವಿನಿ ಪಿಜಿ ಶೇ.(91.33), ಪವಿತ್ರಾ ಹಿತ್ತಲಮನಿ ಶೇ.(87.66), ಸಂಜನಾ ಪಾಟೀಲ ಶೇ.(85) ವಿಜ್ಞಾನ ವಿಭಾಗ: ದಿವ್ಯಾ ಹಿರೂರು ಶೇ.(96.83),ಲೀಲಾ ಆಲೂರು ಶೇ.(92.33),ಪವಿತ್ರಾ ಕಟಗಿ ಶೇ.(90.66), ವಾಣಿಜ್ಯ ವಿಭಾಗ: ರಂಜಿತಾ ಬಾರಂಗಿ ಶೇ.(92),ಸೌಜನ್ಯ ಹಾದಿಮನಿ ಶೇ.(62), ಚಂದ್ರ್ಪ ಬೇವಿನಹಳ್ಳಿ ಶೇ. (62) ರವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರಸಭೆ ಅಧ್ಯಕ್ಷೆ ಚಂಪಕಾ ಬಿಸ್ಲಳ್ಳಿ, ನಗರಸಭೆ ಪೌರಾಯುಕ್ತ ಎಫ್. ಆಯ್.ಇಂಗಳಗಿ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪರಮೇಶ, ತಹಶೀಲ್ದಾರ ಆರ್.ಹೆಚ್.ಭಾಗವಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಅಡಿಗ, ಪೋಲಿಸ್ ಉಪ ಅಧೀಕ್ಷಕ ಲೋಕೇಶ ಜೆ, ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲೂಕ ಅಧ್ಯಕ್ಷ ಚಂದ್ರ್ಪ ಬೇಡರ, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ವಿರೇಶ ಮೋಟಗಿ, ಸಣ್ಣತಮ್ಮಪ್ಪ ಬಾರ್ಕಿ, ಜಿಪಂ ಮಾಜಿ ಅಧ್ಯಕ್ಷ ಮಂಜುನಾಥ ಓಲೇಕಾರ, ಎಪಿಎಂಸಿ ಮಾಜಿ ಅಧ್ಯಕ್ಷ ರಾಮಣ್ಣ ನಾಯ್ಕ, ನಾಗರಾಜಪ್ಪ ಹಳ್ಳೆಳ್ಳೆಪ್ಪನವರ, ನಗರಸಭಾ ಸದಸ್ಯರಾದ ಶಶಿಧರ ಬಸೇನಾಯ್ಕರ್, ಪುಟ್ಟಪ್ಪ ಮರಿಯಮ್ಮನವರ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಾಲತೇಶ ಸಿ.ಬಿ, ಶ್ರೀಕಾಂತ್ ಬಣಕಾರ, ಚಂದ್ರಶೇಖರ ಪುರದ, ನಾರಾಯಣ ಬಲ್ಲೂರು, ವೆಂಕಟೇಶ್ ಲಮಾಣಿ, ಕೊಟ್ರೇಶ ಹಿರೇಮಠ, ರೈತ ಮುಖಂಡರಾದ ರವೀಂದ್ರಗೌಡ ಪಾಟೀಲ, ಹನುಮಂತಪ್ಪ ಕಬ್ಬಾರ, ಭೀಮಪ್ಪ ಅರಳಿಕಟ್ಟಿ, ಕರಬಸಪ್ಪ ಕೋಲೇರ, ಹನುಮಂತಪ್ಪ ಮೀನಕಟ್ಟಿ, ಮಾರುತಿ ವಾಲಿಕಾರ, ನಿಂಗಪ್ಪ ಹಳ್ಳೆಳ್ಳೇಪ್ಪನವರ, ರಾಜೇಂದ್ರ ಬಸೆನಾಯ್ಕರ್, ರವಿ ಗೋಣೆಪ್ಪನವರ, ಕೃಷ್ಣ ಕಾಟಣ್ಣನವರ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 