ವಾಲ್ಮೀಕಿ ಆಚಾರ ವಿಚಾರ ಈಗಿನ ಪೀಳಿಗೆಗೆ ತಿಳಿಸಬೇಕು: ರಮೇಶ್ ಸಿಂದಗಿ

ವಾಲ್ಮೀಕಿ ಆಚಾರ ವಿಚಾರ ಈಗಿನ ಪೀಳಿಗೆಗೆ ತಿಳಿಸಬೇಕು: ರಮೇಶ್ ಸಿಂದಗಿ Valmiki's teachings should be conveyed to the current generation: Ramesh Sindagi

ವಾಲ್ಮೀಕಿ ಆಚಾರ ವಿಚಾರ ಈಗಿನ ಪೀಳಿಗೆಗೆ ತಿಳಿಸಬೇಕು: ರಮೇಶ್ ಸಿಂದಗಿ 

ಸಂಬರಗಿ, 27 :ಗ್ರಾಮದಲ್ಲಿ ಯಾರಾದರೂ ಯಾವುದೇ ಕಾರ್ಯಕ್ರಮ ಮಾಡಲು ಒಕ್ಕೂಟದಿಂದ ಮಾಡಬೇಕು ಅದು ಸುಂದರವಾಗುತ್ತದೆ. ಇಡೀ ಗ್ರಾಮವು ಒಟ್ಟಾಗಿ ವಾಲ್ಮೀಕಿ ಜಯಂತಿಯನ್ನು ಉತ್ಸಾಹದಿಂದ ಆಚರಿಸುವುದು ಎಂದು ವಾಲ್ಮೀಕಿ ಸಮುದಾಯದ ಅಥಣಿ ತಾಲೂಕು ಮುಖಂಡ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು ಅವರ ಆಪ್ತರಾದ ರಮೇಶ್ ಸಿಂದಗಿ ಹೇಳಿದರು. 

ಕಿರಣಗಿ ಗ್ರಾಮದಲ್ಲಿ ವಾಲ್ಮೀಕ ಜಯಂತಿಯ ಸಂದರ್ಭದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಗ್ರಾಮೀಣ ಪ್ರದೇಶದ ಪ್ರತಿಯೊಂದು ಹಳ್ಳಿಯಲ್ಲಿ ವಾಲ್ಮೀಕ ಜಯಂತಿಯನ್ನು ಆಚರಿಸಲು ಸರ್ಕಾರ ಆದೇಶಿಸಿದಂತೆ, ವಾಲ್ಮೀಕಿ ಆಚಾರ ವಿಚಾರ ಈಗಿನ ಯುವ ಪೀಳಿಗೆಗೆ ತಿಳಿಸಿ ಹೇಳಬೇಕು ನಮ್ಮ ಹಳ್ಳಿಗಳಲ್ಲಿಯೂ ನಾವು ವಾಲ್ಮೀಕ ಜಯಂತಿಯನ್ನು ಬಹಳ ಉತ್ಸಾಹದಿಂದ ಆಚರಿಸಬೇಕು ಎಂದು ಅವರು ವಿನಂತಿಸಿದರು.  

 ಈ ಸಂದರ್ಭದಲ್ಲಿ, ಕಾಡಪ್ಪ ನಾಯಕ್, ಸಂಗಮೇಶ್ ನಾಯಕ್, ಚಂದ್ರಶೇಖರ ನಾಯಕ್, ಅಬಾ ಚವ್ಹಾಣ್ ಮತ್ತು ಇತರ ಅನೇಕ ಗಣ್ಯರು ಉಪಸ್ಥಿತರಿದ್ದರು.ಫೋಟೋಕೀರಣಗಿ ಗ್ರಾಮದಲ್ಲಿ ವಾಲ್ಮೀಕಿ ಜಯಂತಿಯ ಸಂದರ್ಭದಲ್ಲಿ, ತಾಲೂಕು ವಾಲ್ಮೀಕಿ ಸಮುದಾಯದ ಮುಖ್ಯಸ್ಥ ರಮೇಶ್ ಸಿಂದಗಿ ಅವರು ಪೂಜೆ ಸಲ್ಲಿಸಿ ಮಾತನಾಡಿದರು.  ಈ ಸಂದರ್ಭದಲ್ಲಿ, ಅಬಾ ಚವ್ಹಾಣ್ ಗಣ್ಯ ವ್ಯಕ್ತಿಯಾಗಿದ್ದರು.