ಡಿಸೆಂಬರ್ 25 ರಂದು ಲಕ್ನೋದಲ್ಲಿ ಪ್ರಧಾನಿ ಮೋದಿಯಿಂದ ವಾಜಪೇಯಿ ಪ್ರತಿಮೆ ಅನಾವರಣ

ಲಕ್ನೋ, ಡಿ 20 ದಿವಂಗತ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 95 ಜನ್ಮ ದಿನೋತ್ಸವ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ  ಡಿಸೆಂಬರ್ 25 ರಂದು  ಇಲ್ಲಿನ  ಲೋಕ್ ಭವನ್  ಕಟ್ಟಡದ ಬಳಿ  25 ಅಡಿ ಎತ್ತರದ  ಕಂಚಿನ ಪ್ರತಿಮೆ  ಅನಾವರಣಗೊಳಿಸಲಿದ್ದಾರೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.ತಮ್ಮ ಭೇಟಿಯ ವೇಳೆ   ಪ್ರಧಾನಿ ಮೋದಿ ಹಲವು ಸರ್ಕಾರಿ  ಕಾರ್ಯಕ್ರಮಗಳನ್ನು ಉದ್ಘಾಟಿಸುವ  ನಿರೀಕ್ಷೆಯಿದೆ.ಲಕ್ನೋ ಲೋಕಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿದ್ದ  ವಾಜಪೇಯಿ ಅವರ  ಕಂಚಿನ ಪ್ರತಿಮೆಯನ್ನು ಜೈಪುರದ  ಸುಪ್ರಸಿದ್ದ ಶಿಲ್ಪಿ  ರಾಜ್ ಕುಮಾರ್ ಪಂಡಿತ್  ರೂಪಿಸಿದ್ದು,  ಈ ತಿಂಗಳ  ಆರಂಭದಲ್ಲಿ ವೇದಿಕೆಯ ಮೇಲೆ ಇರಿಸಲಾಗಿದೆ.