ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ: ರೋಹನ್ ಜುವಳಿ

ಸೆ.6ರಂದು ಬೆಳಗಾವಿಯಲ್ಲಿ ವೈಶ್ಯ ಸಮ್ಮೇಳನ: ರೋಹನ್ ಜುವಳಿ Vaishya Conference in Belagavi on September 6: Rohan Juvali

ಲೋಕದರ್ಶನ ವರದಿ 

ಬೆಳಗಾವಿ 02: ವೈಶ್ಯ ಸಮಾಜದ ವಿವಿಧ ಉಪಜಾತಿಗಳು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಹರಡಿಕೊಂಡಿರುವ ಸಮುದಾಯದವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ವೈಶ್ಯ ಗರಿಮಾ ಮಂಚದ ವತಿಯಿಂದ ಸೆಪ್ಟೆಂಬರ್ 6ರಂದು ಬೆಳಗಾವಿಯಲ್ಲಿ ಸ್ಥಾಪನಾ ದಿನ ಹಾಗೂ ವೈಶ್ಯ ಸಮ್ಮೇಳನ ಹಿ2026 ಆಯೋಜಿಸಲಾಗಿದೆ ಎಂದು ಶ್ರೀ ವೈಶ್ಯ ಗರಿಮಾ ಮಂಚ್ ಕರ್ನಾಟಕ ಪ್ರದೇಶ ಅಧ್ಯಕ್ಷ ರೋಹನ್ ಜುವಳಿ ಹೇಳಿದರು. 

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು ನಗರದ ರೈಲ್ವೆ ಓವರ್ಬ್ರಿಡ್ಜ್‌ ಸಮೀಪದ ಮರಾಠಾ ಮಂದಿರ ಕಾರ್ಯಾಲಯದಲ್ಲಿ ಭಾನುವಾರ ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ಸಮ್ಮೇಳನ ನಡೆಯಲಿದೆ. ವೈಶ್ಯ ಸಮಾಜದ ಏಕತೆ, ಪ್ರಗತಿ ಹಾಗೂ ಗೌರವವನ್ನು ಬಲಪಡಿಸುವ ಉದ್ದೇಶದಿಂದ ಆಯೋಜಿಸಿರುವ ಈ ವಿಶೇಷ ಸಮಾವೇಶದಲ್ಲಿ ಸಮಾಜದ ವಿವಿಧ ಸಂಘಟನೆಗಳು, ಮುಖಂಡರು ಹಾಗೂ ಸಮುದಾಯದ ಪ್ರಮುಖರು ಭಾಗವಹಿಸಲಿದ್ದಾರೆ.

ವೈಶ್ಯ ಸಮಾಜದ ಎಲ್ಲ ಉಪಜಾತಿಗಳನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದು ಸಮ್ಮೇಳನದ ಪ್ರಮುಖ ಉದ್ದೇಶವಾಗಿದೆ. ವಿವಿಧ ಉಪಜಾತಿಗಳು ಮತ್ತು ಪ್ರದೇಶಗಳಲ್ಲಿ ಹರಡಿಕೊಂಡಿರುವ ಸಮುದಾಯದ ನಡುವಿನ ಅಂತರವನ್ನು ಕಡಿಮೆ ಮಾಡಿ, ಸಾಮೂಹಿಕವಾಗಿ ಸಮಾಜದ ಭವಿಷ್ಯ ರೂಪಿಸುವ ಕುರಿತು ಚರ್ಚೆ ನಡೆಸಲು ಸಮ್ಮೇಳನ ವೇದಿಕೆಯಾಗಲಿದೆ.  

ಇದರೊಂದಿಗೆ ಸಾಂಸ್ಕೃತಿಕ ಪುನರುತ್ಥಾನಕ್ಕೂ ಆದ್ಯತೆ ನೀಡಲಾಗಿದೆ. ವೈಶ್ಯ ಸಮಾಜದ ಸಾಮಾನ್ಯ ಪರಂಪರೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಸಂರಕ್ಷಿಸಿ, ಅದರ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.  

ಯುವ ಉದ್ಯಮಶೀಲತೆಗೆ ಆದ್ಯತೆ : ವೈಶ್ಯ ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯನ್ನು ಉತ್ತೇಜಿಸುವುದು ಸಮ್ಮೇಳನದ ಮತ್ತೊಂದು ಪ್ರಮುಖ ಆಶಯವಾಗಿದೆ. ಯುವಕರಿಗೆ ಉದ್ಯಮ ಕ್ಷೇತ್ರದಲ್ಲಿ ಅವಕಾಶಗಳನ್ನು ಸೃಷ್ಟಿಸುವುದು, ಪರಸ್ಪರ ಸಹಕಾರದ ಮೂಲಕ ಬಲಿಷ್ಠ ಬಿಸಿನೆಸ್ ನೆಟ್ವರ್ಕ್‌ ನಿರ್ಮಿಸುವುದು ಹಾಗೂ ಉದ್ಯಮ ಆರಂಭಿಸಲು ಮತ್ತು ವಿಸ್ತರಿಸಲು ಅಗತ್ಯವಿರುವ ಸಂಪರ್ಕ ಹಾಗೂ ಸಹಕಾರವನ್ನು ಬೆಳೆಸುವ ಕುರಿತು ಚಿಂತನೆ ನಡೆಯಲಿದೆ.  ಸಮುದಾಯದ ಆರ್ಥಿಕ ಪ್ರಗತಿಗೆ ಪೂರಕವಾಗಿ ಯುವ ಉದ್ಯಮಿಗಳಿಗೆ ಪರಸ್ಪರ ಮಾರ್ಗದರ್ಶನ, ಸಂಪರ್ಕ ಮತ್ತು ಸಹಭಾಗಿತ್ವದ ವೇದಿಕೆ ರೂಪಿಸುವ ಉದ್ದೇಶವೂ ಸಮ್ಮೇಳನದಲ್ಲಿದೆ.