ವಾಗ್ಭೂಷಣ ಎಂದರೆ ಸಂಸ್ಕಾರಯುತವಾದ ಮಾತು ಎಂದರ್ಥ: ಡಾ. ರಾಜೇಶ್ವರಿ
ಧಾರವಾಡ 26: “ವಾಗ್ಭೂಷಣ” ಎಂದರೆ ಸವಿಮಾತು ಸಂಸ್ಕಾರಯುತವಾದ ಮಾತು ಎಂದರ್ಥ. ಕ.ವಿ.ವ ಸಂಘವು 1896ರಲ್ಲಿ ಪ್ರಕಟಣೆ ಪ್ರಾರಂಭಿಸಿದ ಮೊದಲ ಮಾಸಿಕ ಪತ್ರಿಕೆಗೆ ವಾಗ್ಭೂಷಣ ಎಂದು ಹೆಸರಿಸಿದ್ದು ಸಂಘದ ದೂರದೃಷ್ಠಿಯ ಫಲವಾಗಿದೆ ಎಂದು ಉತ್ತರ ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ರಾಜೇಶ್ವರಿ ಮಹೇಶ್ವರಯ್ಯ ಅಭಿಪ್ರಾಯಪಟ್ಟರು.
ಅವರು ನಗರದ ಕ.ವಿ.ವ ಸಂಘದಲ್ಲಿ ಆಯೋಜಿಸಲ್ಪಟ್ಟ 136ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ವಾಗ್ಭೂಷಣ ಪತ್ರಿಕೆಯ ಪ್ರಾಯೋಗಿಕ ವಿಶೇಷ ಸಂಚಿಕೆ-3ನ್ನು ಬಿಡುಗಡೆಗೋಳಿಸಿ ಮಾತನಾಡಿದರು.
ಪ್ರಾರಂಭದಲ್ಲಿ “ವಾಗ್ಭೂಷಣ” ಹಳಗನ್ನಡ ಹಾಗೂ ಹೊಸಗನ್ನಡ ಸಾಹಿತ್ಯವನ್ನು ಬೆಳೆಸಲು ಮತ್ತು ಅನುವಾದ ಕ್ಷೇತ್ರದಲ್ಲಿ ಸಾಧನೆ ಮಾಡಿತು. ಸಂಶೋಧನಾ ಕ್ಷೇತ್ರದಲ್ಲೂ ಸಾಕಷ್ಟು ಕೃಷಿ ಮಾಡಿತು. ಅಂತಾರಾಷ್ಟ್ರೀಯ ಗಣಿತ ತಜ್ಞ ಡಾ. ಡಿ. ಸಿ. ಪಾವಟೆಯವರಂತಹ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸಂಘ ಪುರಸ್ಕಾರ ಮಾಡಿ ವಾಗ್ಭೂಷಣದಲ್ಲಿ ಲೇಖನ ಬರೆದಿದೆ. 23 ವರ್ಷಗಳ ಕಾಲತನ್ನ ಸಾರ್ಥಕ ಪ್ರಕಟಣಾ ಸೇವೆ ಮಾಡಿ ಅನೇಕ ಅಡೆ-ತಡೆಗಳಿಂದ ಪತ್ರಿಕೆ ತನ್ನ ಪ್ರಕಟಣೆ ನಿಲ್ಲಿಸಿತು. ಆದರೆ ಕಳೆದ 2 ವರ್ಷಗಳ ಅವಧಿಯ ಹೊಸ ಆಡಳಿತ ಮಂಡಳಿಯ ಇಚ್ಚಾಶಕ್ತಿಯಿಂದ ವಾಗ್ಭೂಷಣ ಮತ್ತೆ ಮರುಜನ್ಮ ಪಡೆದದ್ದು ಸಂತಸದ ಸಂಗತಿ.
ಆಗಿನ ಕಾಲಘಟ್ಟದಲ್ಲಿ ಹರಿದು ಹಂಚಿ ಹೋದ ಕನ್ನಡ ಪ್ರದೇಶಗಳನ್ನು ಒಂದುಗೂಡಿಸಲು ಏಕೀಕರಣದ ಬಗ್ಗೆ ಅನೇಕ ಲೇಖನಗಳು ಪತ್ರಿಕೆಯಲ್ಲಿ ಸಾಲು ಸಾಲಾಗಿ ಪ್ರಕಟಗೊಂಡವು. ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಈಗಿನ ವಾಗ್ಭೂಷನದಲ್ಲಿ ಬರೆದ ನಿಜವಾದ ಸಮಸ್ಯೆ ಎಲ್ಲಿದೆ?, ಸಂಗಮೇಶ ಸವದತ್ತಿಮಠರ ‘ಕನ್ನಡದ ಅಸ್ಮಿತೆ’ ಲೇಖನಗಳು ಮನೋಜ್ಞವಾಗಿವೆ ಎಂದು ಹೇಳಿದರು.
ಮುಖ್ಯ ಅತಿಥಿ ಮೊರಬ ಸ.ಪ.ಪೂ. ಮಹಾವಿದ್ಯಾಲಯದ ಪ್ರಾಚಾರ್ಯ ಫಯಾಜ ಅಹ್ಮದ ಸೈಯ್ಯದ ಮಾತನಾಡಿ, ನಾವು ಯಾವ ತಾಯಿಯ ಮಕ್ಕಳಾದರೂ ಕನ್ನಡದ ಕಂದಮ್ಮಗಳೆ. ಕನ್ನಡ ಭಾಷೆ ಸಂಸ್ಕೃತಿಯ ಬಗ್ಗೆ ಬಾಲ್ಯದಿಂದಲೇ ಅಭಿಮಾನ ಮೂಡಿಸಬೇಕು ಶಿಕ್ಷಕರಿಂದ ಮಾತ್ರ ಅದು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಮನಮುಟ್ಟುವವಂತೆ ಪಾಠ ಮಾಡಿದರೆ ಮಕ್ಕಳಲ್ಲಿ ಭಾಷಾ ಪ್ರೇಮ ಮೂಡಿಸಲು ಸಾಧ್ಯ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಗುರು ಹಿರೇಮಠ ಮಾತನಾಡಿ, ಕ.ವಿ.ವ ಸಂಘದ ನಮ್ಮ ಹಿರಿಯರು ಕಂಡ ಕನಸನ್ನು ನಾವಿಂದು ನನಸು ಮಾಡುತ್ತಿದ್ದೇವೆ ಎಂದು ಹೇಳಿದರು.
ಕವಿವ ಸಂಘದ ಹಿರಿಯ ಸದಸ್ಯರಾದ ಪ್ರೊ. ಎಸ್. ಬಿ. ಹಿರೇಮಠ , ಪ್ರೊ. ವೀರುಪಾಕ್ಷಪ್ಪ ಸವಡಿ, ಅಣ್ಣಾಸಾಹೇಬ ಪಾರಶೆಟ್ಟಿ ಅವರನ್ನು ಸಂಘದ ಪರವಾಗಿ ಗೌರವಿಸಲಾಯಿತು.
ಪ್ರಾರಂಭದಲ್ಲಿ ಹುಬ್ಬಳ್ಳಿಯ ಶಿವು ಹಿರೇಮಠ ಹಾಗೂ ಸಂಗಡಿಗರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು.
ಶಂಕರ ಹಲಗತ್ತಿ ಸ್ವಾಗತಿಸಿ, ಪರಿಚಯಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಶಂಕರ ಕುಂಬಿ ನಿರೂಪಿಸಿ, ವಂದಿಸಿದರು. ಡಾ. ಸಂಜೀವ ಕುಲಕಣೀರ್ ಹಾಗೂ ಸತೀಶ ಗಂ. ತುರಮರಿ ವೆದಿಕೆ ಮೇಲೆ ಇದ್ದರೂ.
ಕಾರ್ಯಕ್ರಮದಲ್ಲಿ ಶಿವಾನಂದ ಭಾವಿಕಟ್ಟಿ, ಶ್ರೀ ವೀರಣ್ಣ ಒಡ್ಡೀನ, ಡಾ. ಮಹೇಶ ಧ. ಹೊರಕೇರಿ, ಡಾ. ಧನವಂತ ಹಾಜವಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 