ಮನಸ್ಸಿನ ಶಾಂತಿಗೆ ಶರಣರ ವಚನಗಳು ಪೂರಕ: ಬ್ರಹ್ಮಕುಮಾರಿ ಯೋಗಿನಿ ಅಕ್ಕ
Vachanas of the Sharanas are conducive to peace of mind: Brahmakumari Yogini Akka
ಮನಸ್ಸಿನ ಶಾಂತಿಗೆ ಶರಣರ ವಚನಗಳು ಪೂರಕ: ಬ್ರಹ್ಮಕುಮಾರಿ ಯೋಗಿನಿ ಅಕ್ಕ
ಯಲಬುರ್ಗಾ, ಜು.16: ಪರೋಪಕಾರಿ ಕಾರ್ಯಗಳಲ್ಲಿ ತೊಡಗಿಕೊಂಡು ಉತ್ತಮ ಜೀವನವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು. ಮನಸ್ಸಿನ ಶಾಂತಿ ಮತ್ತು ನೆಮ್ಮದಿಗೆ ಶರಣರ ವಚನಗಳು ಮಾರ್ಗದರ್ಶಕವಾಗಿವೆ ಎಂದು ಕೊಪ್ಪಳದ ಈಶ್ವರಿ ವಿಶ್ವವಿದ್ಯಾಲಯದ ಮುಖ್ಯ ಸಂಚಾಲಕಿ ಬ್ರಹ್ಮಕುಮಾರಿ ಯೋಗಿನಿ ಅಕ್ಕ ಹೇಳಿದರು. ಪಟ್ಟಣದ ಸಾಯಿಪ್ಯಾಲೇಸ್‌ನಲ್ಲಿ ಬಸವ ಶಿವಯೋಗಿ ಸಮಿತಿಯಿಂದ ಆಯೋಜಿಸಿದ್ದ ಪೂಜ್ಯ ಪುಟ್ಟರಾಜ ಗವಾಯಿ ಹಾಗೂ ಶರಣ ಗುಂಡಯ್ಯ ಕುಂಬಾರ ಅವರ ಶರಣೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಜೀವನದಲ್ಲಿ ದುಃಖ ಮತ್ತು ಅಶಾಂತಿಯನ್ನು ದೂರ ಮಾಡಿಕೊಳ್ಳಲು ಆಧ್ಯಾತ್ಮಿಕ ಚಿಂತನೆ ಅಗತ್ಯವಾಗಿದೆ. ದೇಹಕ್ಕಿಂತ ಆತ್ಮವೇ ಶಾಶ್ವತ ಎಂಬ ಅರಿವು ಜೀವನಕ್ಕೆ ಅರ್ಥ ನೀಡುತ್ತದೆ. ಶರಣರ ವಚನಗಳು ಮಾನವನ ಬದುಕಿಗೆ ದಾರೀದೀಪವಾಗಿದ್ದು, ಅವುಗಳನ್ನು ಅಳವಡಿಸಿಕೊಂಡಾಗ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂದು ತಿಳಿಸಿದರು.
ಮಾನವ ಜನ್ಮ ಸಾರ್ಥಕವಾಗಬೇಕಾದರೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಸತ್ಸಂಗ, ಸೇವೆ ಮತ್ತು ಸತ್ಕಾರ್ಯಗಳ ಮೂಲಕ ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸಬಹುದು. ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಬೆಳೆಸುವುದು ಪೋಷಕರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು.
ಶರಣ ಗುಂಡಯ್ಯ ಕುಂಬಾರ ಅವರ ಕುರಿತು ತಾವರಗೇರಾ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸುವರ್ಣ ಕುಂಬಾರ ಉಪನ್ಯಾಸ ನೀಡಿದರು. ಪೂಜ್ಯ ಪುಟ್ಟರಾಜ ಗವಾಯಿ ಅವರ ಕುರಿತು ನ್ಯಾಯವಾದಿ ಹಾಗೂ ತಾಲೂಕು ಪಂಚಾಯಿತಿ ಮಾಜಿ ಸದಸ್ಯೆ ಸಾವಿತ್ರಿ ಗುರಿಕಾರ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಿಳಾ ಒಕ್ಕೂಟದ ಅಧ್ಯಕ್ಷೆ ಜ್ಯೋತಿ ಪಲ್ಲೇದ ವಹಿಸಿದ್ದರು. ಲಕ್ಷ್ಮೀ ಶ್ರೀಗಿರಿ, ನೀಲಮ್ಮ ಯರಸಿ ಪ್ರಾರ್ಥನೆ ಸಲ್ಲಿಸಿದರು. ಕಳಕೇಶ ಅರಕೇರಿ ಭಕ್ತಿಗೀತೆ ಹಾಡಿದರು. ಸಾಹಿತಿ ಸುನೀತಾ ಪತಂಗರಾಯ ಕಾರ್ಯಕ್ರಮ ನಿರೂಪಿಸಿದರು. ಆಶಾ ರಾಣಿ ಸ್ವಾಗತಿಸಿದರು.
ಅನಸೂಯ ತೆಂಗಿನಕಾಯಿ, ವೀಣಾ ಹೊಸಮನಿ, ಡಾ. ನಂದಿತಾ ದಾನರಡ್ಡಿ, ಬ್ರಹ್ಮಕುಮಾರಿ ಗೀತಕ್ಕ, ನಿರ್ಮಲ ಗಾಂಜಿ, ಶೋಭಾ ಕಂದಕೂರ್, ಅಂಬುಜ ಧಾರವಾಡ, ಗೌರಮ್ಮ ಕುಂಬಾರ, ಶಾರದಾ, ಕಳಕಮ್ಮ ಮೇಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಸಭೆಯ ಆರಂಭದಲ್ಲಿ ಇತ್ತೀಚೆಗೆ ನಿಧನರಾದ ಖ್ಯಾತ ಗಾಯಕಿ ಎಸ್. ಜಾನಕಿ ಅವರ ಆತ್ಮಕ್ಕೆ ಶಾಂತಿ ಕೋರಿ ಮೌನಾಚರಣೆ ನಡೆಸಲಾಯಿತು. ನಿವೃತ್ತ ಶಿಕ್ಷಕರಾದ ಎಚ್. ಗಾಳೆಪ್ಪ ಹಾಗೂ ನಿವೃತ್ತ ಎ.ಎಸ್.ಐ. ಮೆಹಬೂಬ್‌ಸಾಬ್ ಇಟಗಿ ಅವರನ್ನು ಸನ್ಮಾನಿಸಲಾಯಿತು. ಬಸವ ಶಿವಯೋಗಿ ಸಮಿತಿಯ ಅಧ್ಯಕ್ಷ ಸಂಗಣ್ಣ ತೆಂಗಿನಕಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 