ಗುರುಬಸವ ಮಂಟಪದಲ್ಲಿ ಆಯೋಜಿಸಿದ್ದ ವಚನಾಮೃತ ಕಾರ್ಯಕ್ರಮ

ಗುರುಬಸವ ಮಂಟಪದಲ್ಲಿ ಆಯೋಜಿಸಿದ್ದ ವಚನಾಮೃತ ಕಾರ್ಯಕ್ರಮ Vachanamruta program organized at Gurubasava Mantapa

ಹುಬ್ಬಳ್ಳಿ 10: ಶ್ರೀಗುರುಬಸವ ಮಂಟಪ ಟ್ರಸ್ಟ ಕಮೀಟಿ ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಬಸವೇಶ್ವರ ಪೀಠ, ಧಾರವಾಡ ಆಕಾಶವಾಣಿ, ಧಾರವಾಡ-ಹುಬ್ಬಳ್ಳಿ ಬಸವಕೇಂದ್ರಗಳ ಸಹಯೋಗದಲ್ಲಿ ಹುಬ್ಬಳ್ಳಿಯ ಶ್ರೀ ಗುರುಬಸವ ಮಂಟಪದಲ್ಲಿ ಆಯೋಜಿಸಿದ್ದ ವಚನಾಮೃತ-200 ಎಂಬ ವಿಶೇಷ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿದ್ದ ಗದಗ-ಡಂಬಳ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಪರಮ ಪೂಜ್ಯ ಶ್ರೀಮನ್ನಿರಂಜನ ಜಗದ್ಗುರು ಡಾ. ತೋಂಟದ ಸಿದ್ದರಾಮ ಮಹಾಸ್ವಾಮೀಗಳು ಅವರಿಗೆ ಗಣ್ಯರು ಶ್ರದ್ಧಾ, ಭಕ್ತಿಯಿಂದ ಗೌರವಾರ್ಪಣೆ ಮಾಡಿ, ದರ್ಶನ ಆಶೀರ್ವಾದ ಪಡೆದರು.

ಧಾರವಾಡ ಆಕಾಶವಾಣಿಯ ಮುಖ್ಯಸ್ಥರಾದ ಶರಣಬಸವ ಚೋಳಿನ, ಕವಿವಿ ಕುಲಪತಿಗಳಾಗಿದ್ದ ಪ್ರೊ ಆರ್‌.ಎಲ್‌.ಹೈದರಾಬಾದ,  ಪ್ರೊ ಕೆ.ಬಿ.ಗುಡಸಿ, ಡಾ.ಎಂ.ಎಂ.ಕಲಬುರ್ಗಿ ರಾಷ್ಟ್ರೀಯ ಪ್ರತಿಷ್ಠಾನದ ಅಧ್ಯಕ್ಷ ಡಾ. ವೀರಣ್ಣ ರಾಜೂರು, ಸಾಹಿತಿ ಡಾ. ಬಸು ಬೇವಿನಗಿಡದ, ಸಾಹಿತಿ ಶಾರದಾ ಮುಳ್ಳೂರು, ಹುಬ್ಬಳ್ಳಿ ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಧಾರವಾಡ ಬಸವ ಕೇಂದ್ರದ ಅಧ್ಯಕ್ಷ ಸಿದ್ದರಾಮಣ್ಣ ನಡಕಟ್ಟಿ, ಶ್ರೀ ಗುರುಬಸವ ಮಂಟಪ ಟ್ರಸ್ಟನ ಕಾರ್ಯಾಧ್ಯಕ್ಷ ಚಂದ್ರಶೇಖರ ಕರವೀರಶೆಟ್ಟರ, ಶ್ರೇಷ್ಠ ವಾಗ್ಮಿಗಳು, ಬಸವ ತತ್ವ ನಿಷ್ಠರು, ಪ್ರಸಾರಕರು, ಉತ್ತಮ ಪ್ರವಚನಕಾರರಾದ ಶ್ರೀ ಶಶಿಧರ ಕರವೀರಶೆಟ್ಟರ, ಶೋಭಾ ಕರವೀರಶೆಟ್ಟರ,  ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ‌್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್‌ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ,  ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಉದ್ದಮಿ  ಶಂಕರ ಕೋಳಿವಾಡ, ಸಿದ್ದಲಿಂಗೇಶ ವಾಲಿ, ಸುಲೋಚನಾ, ವಚನ ಸುನಾದ ಸಂಗೀತ ಬಳಗದವರು, ಶೈಲಜಾ ರಾಜಕುಮಾರ, ಡಾ. ಈರಣ್ಣ ಇಂಜಗನೇರಿ, ಮಾಯಾ ರಾಮನ್, ಎಸ್‌.ವಿ.ಕೊಟಗಿ, ಶಿವಯೋಗಿ ಮುರ್ಖಂಡೆ, ಪ್ರೊ ಎಸ್‌.ವಿ.ಪಟ್ಟಣಶೆಟ್ಟಿ, ಆರ್‌.ಸಿ.ಹಲಗತ್ತಿ, ವೀರಣ್ಣ ಗೊವೇಶ್ವರ,  ಪ್ರಭು ಅಂಗಡಿ, ಎಂ.ಬಿ.ಕಟ್ಟಿ, ಬಸವರಾಜ ಕರವೀರಶೆಟ್ಟರ ಸೇರಿದಂತೆ ಮುಂತಾದವರು ಅತ್ಯಂತ ಶ್ರದ್ದಾ-ಭಕ್ತಿಯಿಂದ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು. ಎಲ್ಲರೂ ಪ್ರಸಾದ ಸ್ವಿಕರಿಸಿದರು.  

ಎಂ.ಬಿ.ಕಟ್ಟಿ,