ವಚನ ಸಂದೇಶ ನೀಡುವ ವಚನ ಶ್ರಾವಣ ಕಾರ್ಯಕ್ರಮ
Vachana Shravan program giving a message of the vachana
ಹುಬ್ಬಳ್ಳಿ 09: ಬಸವಕೇಂದ್ರ ಶ್ರಾವಣ ಮಾಸದಲ್ಲಿ ವಚನ ಶ್ರಾವಣ ಎಂಬ ಮನೆ-ಮನಗಳಿಂದ ಮನೆ-ಮನಗಳಿಗೆ ವಚನ ಸಂದೇಶ ನೀಡುವ ವಚನ ಶ್ರಾವಣ ಕಾರ್ಯಕ್ರಮ ದಾನೇಶ್ವರಿ ನಗರದ ಕಿಮ್ಸ.ಆರ್.ಐ ಪ್ರಾಧ್ಯಾಪಕ ಡಾ. ಅಶೋಕ ಗುಡಗುಂಟಿ ಅವರ ಮನೆಯಲ್ಲಿ ಆಯೋಜಿಸಲಾಗಿತ್ತು.
ಬೆಳಗಾವಿ ಕೆ.ಎಲ್.ಇ ಸಂಸ್ಥೆಯ ಜವಾಹರಲಾಲ್ ನೆಹರು ವೈದ್ಯಕೀಯ ಮಹಾವಿದ್ಯಾಲಯದ ಪ್ರಾಧ್ಯಾಪಕರು, ಬಸವತತ್ವ ಚಿಂತಕರು, ಅನುಭಾವಿಗಳಾದ ಶರಣ ಡಾ. ಅವಿನಾಶ ಕವಿ ಅವರು ಚೆನ್ನಬಸವಣ್ಣನವರ ಆದಿ ಬಸವಣ್ಣ ಅನಾದಿ ಲಿಂಗವೆಂತೆಂಬರು. ಎಂಬ ವಚನ ಕುರಿತು ಮಾತನಾಡಿ ಅಲ್ಲಮಪ್ರಭು, ಸಿದ್ಧರಾಮೇಶ್ವರರು, ಮಡಿವಾಳ ಮಾಚಿದೇವರು, ಚೆನ್ನಬಸವಣ್ಣ, ತೋಂಟದ ಸಿದ್ಧಲಿಂಗೇಶ್ವರರು ಆದಿಯಾಗಿ ಎಲ್ಲರೂ ತಮ್ಮ ವಚನಗಳಲ್ಲಿ ಸ್ಪಷ್ಪವಾಗಿ ನುಡಿದಿರುವಂತೆ ಇಷ್ಟಲಿಂಗದ ಜನಕರು, ಬಸವಣ್ಣನವರು. ತನ್ಮೂಲಕವಾಗಿ ಇಷ್ಟಲಿಂಗ ಪ್ರಣೀತ ಲಿಂಗಾಯತ ಧರ್ಮದ ಸಂಸ್ಥಾಪಕರು ವಿಶ್ವಗುರು ಬಸವಣ್ಣನವರು. ಅಷ್ಟಾವರಣ, ಪಂಚಾಚಾರ, ಷಟಸ್ಥಲ ತತ್ವದ ಪ್ರತಿಪಾದಕರು ಗುರುಬಸವಣ್ಣನವರೆಂದು ಚೆನ್ನಬಸವಣ್ಣನವರ ವಚನಗಳ ಮೂಲಕವಿವರಿಸಿದರು.
ಬಸವಣ್ಣನವರೆಂದರೆ ಸಾಕಾರ ವ್ಯಕ್ತಿ ಮಾತ್ರವಾಗಿರದೆ , ಬಸವ ಎಂದರೆ ಶಕ್ತಿ, ಚೈತನ್ಯ, ಮಂತ್ರ ಸ್ವರೂಪ, ಪರಾತ್ಪರ ಮೂಲ ಚೈತನ್ಯ , ಮೂಲ ಚಿತ್ತು ಬಸವ. ಅದರ ಸಾಕಾರರೂಪವಾಗಿ 12ನೇ ಶತಮಾನದಲ್ಲಿ ಅವತರಿಸಿದ ಮಹಾನ್ ದಾರ್ಶನಿಕ ಬಸವಣ್ಣನವರು ಎಂದು ಮಾರ್ಮಿಕವಾಗಿ ತಿಳಿಸಿದರು.
ಬಸವ ಕೇಂದ್ರದ ಅಧ್ಯಕ್ಷ ಪ್ರೊ ಜಿ.ಬಿ.ಹಳ್ಳಾಳ, ಶಿವಣ್ಣಶರಣರು ಗುಡಗುಂಟಿ, ಡಾ. ಅಶೋಕ ಗುಡಗುಂಟಿ , ಶ್ವೇತಾ ಗುಡಗುಂಟಿ, ಸೋಹನ ಸುರೇಶ ಹೊರಕೇರಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ, ಎಸ್.ವಿ.ಕೊಟಗಿ, ಡಾ. ಪ್ರಕಾಶ ಮುನ್ನೋಳಿ, ಬಿ.ಎಲ್.ಲಿಂಗಶೆಟ್ಟರ, ಎಂ.ಬಿ.ಕಟ್ಟಿ, ಕೆ.ಎಸ್.ಇನಾಮತಿ, ವಿದ್ಯಾವತಿ ಲಿಂಗಶೆಟ್ಟರ, ಪ್ರಭು ಅಂಗಡಿ, ಬಸವರಾಜ ಬೆಲ್ಲದ, ಕೆ.ಎಲ್.ಅಂಬಲಿ, ನಾಗೇಶ ಅಂಗಡಿ, ಮುಂತಾದವರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 