ವಚನ ಸಾಹಿತ್ಯ ಹಾಗೂ ಫ.ಗು.ಹಳಕಟ್ಟಿ ಚಿಂತನ ಕಾರ್ಯಕ್ರಮ

ವಚನ ಸಾಹಿತ್ಯ ಹಾಗೂ ಫ.ಗು.ಹಳಕಟ್ಟಿ ಚಿಂತನ ಕಾರ್ಯಕ್ರಮ Vachana Literature and F.G.Halakatti Chinthan Program

ಹಾವೇರಿ 07: ವಿಶ್ವವೇಒಪ್ಪುವ ಮೌಲ್ಯಗಳನ್ನು ಬಿತ್ತಿ ಬೆಳೆದ ಶರಣ ಸಾಹಿತ್ಯದ ಚಿಂತನೆಗಳ ಫಲವಾಗಿ ಜಗಜ್ಯೋತಿ ಬಸವಣ್ಣನಾವರಾದಿಯಾಗಿ ಶರಣರು ಬೆಳಗುವ ಭವ್ಯ ಬೆಳಕಾದರು ಎಂದು ಹಾವೇರಿ ಜಿಲ್ಲಾ ಬಸವ ಬಳಗದ ಅಧ್ಯಕ್ಷ ವಿ.ಜಿ.ವಳಗೇರಿ ತಿಳಿಸಿದರು. 

ಶನಿವಾರ ಹಾವೇರಿಯ ಭಗತ್ ಪಿಯುಕಾಲೇಜಿನಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಹಾವೇರಿತಾಲೂಕುಘಟಕ ಆಯೋಜಿಸಿದ ವಚನ ಸಾಹಿತ್ಯ ಹಾಗೂ ಫ.ಗು.ಹಳಕಟ್ಟಿ ಒಂದುಚಿಂತನಕಾರ್ಯಕ್ರಮದಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸಾಮಾಜಿಕ ಮೌಲ್ಯವೇ ಶರಣ ಸಾಹಿತ್ಯ. ಅರಿವೆಗುರು ಎಂಬ ಸತ್ಯಇಲ್ಲಿದೆ.ವಚನ ಬದುಕಿನಜ್ಞಾನದಖಣಿ.ಆದರೆಎಲ್ಲ ಮನೆ ಮನಗಳಿಗೆ ವಚನ ಸಾಹಿತ್ಯತಲುಪುವಂತಾಗಬೇಕುಎಂದರು. 

ಶಸಾಪ ಯುವಘಟಕದಜಿಲ್ಲಾಧ್ಯಕ್ಷಜಗದೀಶ ಹತ್ತಿಕೋಟಿ ಮುಖ್ಯಅತಿಥಿಯಾಗಿ ಮಾತನಾಡಿ, ಭಕ್ತಿಯ ಶುಭಾಶಯ ನುಡಿದವರು ಶರಣರು.ನಾವು ಜ್ಞಾನಕ್ರೂಢೀಕರಿಸಬೇಕಾಗಿದೆಯೇ ಹೊರತು, ಭೌತಿಕ ಸಂಪತ್ತನ್ನಲ್ಲ. ಸಮಾಜ ಬದುಕಿ ನಾನೂ ಬದುಕಬೇಕು ಎಂಬ ಸತ್ಯ ಶರಣರದ್ದಾಗಿದೆ.ಅಹಂಕಾರ ಹೊರಗಿಟ್ಟು ಸಹಕಾರತತ್ವದಲ್ಲಿ ನಂಬಿಗೆ ಇಟ್ಟು ಬದುಕುವುದೇ ಶರಣಧರ್ಮಎಂದರು. 

ತಾಲೂಕು ಶರಣ ಸಾಹಿತ್ಯ ಪರಿಷತ್ತಿನಅಧ್ಯಕ್ಷಜಿ.ಎಂ.ಓಂಕಾರಣ್ಣನವರ ಮಾತನಾಡಿ, ಜನಾಂಗೀಯ ವೇಷ ದೋಷದ್ವೇಷದಿಂದದೂರವಾಗಿ, ವಿಘಟನೆಯ ಸಂಕೊಲೆ ಹರಿದು, ಸಾಂಘಿಕ ಜೀವನದ ಸತ್ಯಅರುಹಿದವರು ಶರಣರು. ಸ್ತ್ರೀ ಸ್ವಾತಂತ್ರ್ಯಕ್ಕೆ ಶಕ್ತಿ ತುಂಬಿ ಸಾತ್ವಿಕಜೀವನ ಸಿದ್ಧಾಂತವನ್ನು ಅರುಹಿದ ಶರಣರಚಿಂತನೆ ಸಾರ್ವಕಾಲಿಕವಾದುದುಎಂದರು. 

ಜಿಲ್ಲಾ ಶರಣ ಸಾಹಿತ್ಯ ಪರಿಷತ್‌ಅಧ್ಯಕ್ಷ ಪ್ರೊ.ಮಾರುತಿ ಶಿಡ್ಲಾಪೂರ, ತಾಲೂಕು ಕಾರ್ಯದರ್ಶಿ ಎಂ.ಬಿ.ಸತೀಶ, ಶಿವಾನಂದ ಹೊಸಮನಿ, ರತನ್‌ಕಾಶಪ್ಪನವರ, ಆಸ್ಮಾ ತಳಕಲ್ಲ, ರಶ್ಮಿ ಬಾಗರ, ಪ್ರಕಾಶದೆಮ್ಮಟ್ಟಿ, ಲಕ್ಷ್ಮೀಕರಾಟೆ, ಪುಷ್ಪಾಕಡೂರ, ಬಸವರಾಜಪ್ಪಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.