ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಬಿಜಿ ರಾಮ್ ಜಿ : ರದ್ದುಗೊಳಿಸಲು ಭಾರಿ ಪ್ರತಿಭಟನೆ ರಾಷ್ಟ್ರ್ರತಿಗಳಿಗೆ ಮನವಿ
VBG Ram Ji implemented by the central government: Massive protest, appeal to the states to cancel it
ರಾಣೆಬೆನ್ನೂರು :28 ಬಡವರ ಕೂಲಿ ಕಾರ್ಮಿಕರ ತುತ್ತು ಅನ್ನಕ್ಕೂ ಸಹ ಕಲ್ಲು ಹಾಕುವ ಕೆಲಸದಲ್ಲಿ ಕೇಂದ್ರದ ಬಿಜೆಪಿ ಸರ್ಕಾರವು ಮುಂದಾಗಿರುವುದು ಈ ದೇಶದ ಬಹುದೊಡ್ಡ ದುರಂತದ ಸಂಗತಿ ಎಂದು ಶಾಸಕ ಪ್ರಕಾಶ ಕೋಳಿವಾಡ ವಿಷಾದಿಸಿದರು.
ಅವರು ಶನಿವಾರ ನಗರದ ಪಿ ಬಿ ರಸ್ತೆಯಲ್ಲಿ ಬಿಜೆಪಿ ನೇತೃತ್ವದ ಎನ್. ಡಿ. ಎ. ಸರ್ಕಾರ ಜಾರಿಗೆ ತಂದಿರುವ ಮನ್ ರೇಗಾ ಯೋಜನೆ ಹೆಸರು ಬದಲಾಯಿಸಿ ವ್ಹಿ.ಬಿ.ಜಿ. ರಾಮ್ ಜಿ ಜಾರಿಗೆ ತರಲು ಮುಂದಾಗಿರೋ ಕ್ರಮವನ್ನು ಖಂಡಿಸಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಪ್ರತಿಭಟನೆ ನಡೆಸಿ, ಮಾತನಾಡಿದರು.
ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರವು ಚಳಿಗಾಲದ ಅಧಿವೇಶನದಲ್ಲಿ ಹಿಂದಿನ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ನೇತೃತ್ವದಲ್ಲಿ ಜಾರಿಗೆ ತಂದ ಮಹಾತ್ಮ ಗಾಂಧಿ ಉದ್ಯೋಗ ಭರವಸೆ ಯೋಜನೆ ( ಮನರೇಗಾ) ರದ್ದುಗೊಳಿಸಿ, ಇದೀಗ ಸಾರ್ವಜನಿಕರ ವಿರೋಧದ ಮಧ್ಯೆ ವ್ಹಿ.ಬಿ.ಜಿ. ರಾಮ್ ಎನ್ನುವ ಹೊಸ ಯೋಜನೆ ಜಾರಿಗೆ ತಂದಿದೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಯೋಜನೆ ಜಾರಿಯಿಂದಾಗಿ ದೇಶದ ಕಾರ್ಮಿಕ ವರ್ಗಕ್ಕೆ ಭಾರಿ ಅನಾನುಕೂಲವಾಗಲಿದೆ ವಿಶ್ಲೇಷಿಸಿ ಮಾತನಾಡಿದ ಕೋಳಿವಾಡರು, ಹಿಂದಿನ ಯೋಜನೆಯಲ್ಲಿ ಪ್ರತಿಯೊಬ್ಬ ವ್ಯಕ್ತಿಗೆ ನೂರು ದಿವಸಗಳ ಕೆಲಸದ ಗ್ಯಾರಂಟಿ ಇತ್ತು. ಅಲ್ಲದೆ ಇಲ್ಲಿನ ಕ್ರೀಯಾ ಯೋಜನೆ ರೂಪಿಸುವ ಹಕ್ಕು ಪ್ರತಿ ಗ್ರಾಮ ಪಂಚಾಯತಿಗಳಿಗೆ. ಏನಾಗಬೇಕು ಏನಾಗಬಾರದು ಎನ್ನುವ ವಾಸ್ತವಿಕ ಸಂಗತಿ ಪಂಚಾಯಿತಿಗಳಿಗೆ ಮಾತ್ರ ಗೊತ್ತು. ನರೇಂದ್ರ ಮೋದಿ ಅಲ್ಲೇ ಕುಳಿತು ಇಲ್ಲಿನ ಪರಿಸ್ಥಿತಿ ಏನು ಅರ್ಥ ಮಾಡಿಕೊಳ್ಳುತ್ತಾರೆ ಎನ್ನುವುದೇ ಅತ್ಯಂತ ಸೂಜಿಗದ ಸಂಗತಿ ಎಂದರು.
ಯೋಜನೆ ಜಾರಿಯಿಂದ ಇಲ್ಲಿನ ವಾರ್ಷಿಕ ಕ್ರೀಯಾ ಯೋಜನೆಗಳು ಪಂಚಾಯಿತಿಗಳು ಗ್ರಾಮ ಸಭೆಯಲ್ಲಿ ರೂಪಿಸಲು ಬರುವುದಿಲ್ಲ. ಆ ಹಕ್ಕು ಕಳೆದುಕೊಳ್ಳುತ್ತದೆ. ಎಲ್ಲವೂ ಕೇಂದ್ರದಿಂದಲೇ ನಿರ್ಧಾರವಾಗಬೇಕಾಗುತ್ತದೆ ಇದರಿಂದ, ಕಾರ್ಮಿಕರಿಗೆ ಗ್ಯಾರಂಟಿ ಯೋಜನೆ ಕಾರ್ಮಿಕರಿಂದ ವಂಚಿತವಾಗುತ್ತದೆ ಎಂದು ವಿವರಿಸಿದರು.
ಕೂಡಲೆ ಪ ಪ್ರಜಾಪ್ರಭುತ್ವ ವಿರೋಧಿ ಕಾನೂನನ್ನು ತಕ್ಷಣದಿಂದಲೇ ರದ್ದುಗೊಳಿಸಿ, ದೇಶದ ರಾಷ್ಟ್ರಪತಿಗಳು ಮಧ್ಯಪ್ರವೇಶಿಸಿ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಲು ಮುಂದಾಗಬೇಕು ಇದೇ ರೀತಿ ಹಟಮಾರಿತನ ಧೋರಣೆ ಮುಂದುವರಿಸಿದರೆ. ಭವಿಷ್ಯದ ದಿನಗಳಲ್ಲಿ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರತಿಭಟನೆ, ಮತ್ತು ಉಪವಾಸ ಸತ್ಯಾಗ್ರಹ ಮಾಡುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ಮುಂಚೂಣಿಯಲ್ಲಿ ಪಾಲ್ಗೊಂಡಿದ್ದ, ಕಾಂಗ್ರೆಸ್ ಮುಖಂಡರಾದ ಬಿ.ಎಸ್. ಮರದ, ವೀರೇಶ್ ಮೋಟಗಿ, ಚಂದ್ರ್ಪ ಬೇಡರ, ರವೀಂದ್ರ ಗೌಡ ಪಾಟೀಲ, ಪುಟ್ಟಪ್ಪ ಮರಿಯಮ್ಮನವರ, ಶೇರು ಖಾನ್ ಕಾಬೂಲಿ, ನೀಲಕಂಠಪ್ಪ ಕುಸುಗೂರು, ಎಸ್. ಪಿ. ಮಲ್ಲಾಡದ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ತಿರುಪತಿ ಅಜ್ಜನವರ, ವೆಂಕಟೇಶ್ ಬಣಕಾರ, ಕೃಷ್ಣಪ್ಪ ಕಂಬಳಿ, ಹನುಮಂತ ಹರಿಜನ, ಬಸವರಾಜ ಹುಚ್ಚಗೊಂಡರ, ಇರ್ಫಾನ್ ದಿಡಗೂರು, ಮಂಜುನಾಥ ಡಿ.ಆರ್. ಫಕೀರ ಗೌಡ ಪಾಟೀಲ್, ಕಿರಣ್ ಮಾಂಡ್ರೆ, ಗಂಗಾಧರ ಬಣಕಾರ, ಬೀರ್ಪ ಲಮಾಣಿ, ಸೇರಿದಂತೆ 300ಕ್ಕೂ ಹೆಚ್ಚು ಕಾರ್ಯಕರ್ತರು ಗ್ರಾಮೀಣ ಮುಖಂಡರು, ಮಹಿಳೆಯರು, ಯುವ ಘಟಕದ ಅಧ್ಯಕ್ಷರು ಪದಾಧಿಕಾರಿಗಳು ಕಾರ್ಯಕರ್ತರು ಪಾಲ್ಗೊಂಡಿದ್ದರು. ಕೆ. ಇ. ಬಿ ವಿನಾಯಕ ದೇವಸ್ಥಾನದಿಂದ ಹೊರಟ ಭಾರಿ ಪ್ರತಿಭಟನಾ ಮೆರವಣಿಗೆಯು. ಪಿ.ಬಿ. ರಸ್ತೆಯಲ್ಲಿ ಪ್ರತಿಭಟಿಸಿ, ಸಭೆ ನಡೆಸಿ, ಸ್ಥಳಕ್ಕೆ ಧಾವಿಸಿದ , ತಾಲೂಕ ಆಡಳಿತದ ಎಂ. ಎಸ್. ಕಡೂರ ರವರಿಗೆ ತಮ್ಮ ಮನವಿ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 