ನಿಟ್-2025 ರ ಪರೀಕ್ಷೆಯಲ್ಲಿ ಉತ್ಕರ್ಷಾ 193 ನೇ ರಾ್ಯಂಕ್
Utkarsha ranks 193rd in NEET-2025 exam
ಕಾಗವಾಡ 11 : ಮಹಾರಾಷ್ಟ್ರ ಸಾಂಗಲಿ ನಗರದ ಉತ್ಕರ್ಷಾ ಚಂದ್ರಶೇಖರ ಹಳಿಂಗಳೆ ಇವಳು ನಿಟ್-2025 ರ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ 633 ಅಂಕಗಳನ್ನು ಪಡೆದು, ದೇಶದಲ್ಲಿ 193 ನೇ ರಾ್ಯಂಕ್ ಗಳಿಸುವ ಮೂಲಕ ಅತ್ಯತ್ತಮ ಸಾಧನೆ ಮಾಡಿದ್ದಾರೆ.
ಉತ್ಕರ್ಷಾ ಇವಳು ಮಿರಜ್ ಪಟ್ಟಣದ ಪ್ರಸಿದ್ಧ ಮನೋವೈದ್ಯರಾದ ಡಾ. ಚಂದ್ರಶೇಖರ ಹಳಿಂಗಳೆ ಮತ್ತು ಡಾ. ನಿಶಾ ಹಳಿಂಗಳೆ ಇವರ ಸುಪುತ್ರಿಯಾಗಿದ್ದು, ಅವರು ತಮ್ಮ ಸಂಪೂರ್ಣ ಶಾಲಾ ಶಿಕ್ಷಣವನ್ನು ಕೊಲ್ಹಾಪೂರ-ಅತಿಗ್ರೆಯ ಸಂಜಯ ಘೋಡಾವತ ಒಲಿಂಪಿಯಾಡ ಶಾಲೆ, ಸಂಜಯ ಘೋಡಾವತ ವೈದ್ಯಕೀಯ ಅಕಾಡೆಮಿಯಲ್ಲಿ ಪಡೆದುಕೊಂಡಿದ್ದಾರೆ.
ಉತ್ಕರ್ಷಾಳ ತಂದೆ-ತಾಯಿ ಇಬ್ಬರೂ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದು, ಬಾಲ್ಯದಿಂದಲೂ ಈ ಕ್ಷೇತ್ರದ ಬಗ್ಗೆ ಒಲವು ಹೊಂದಿದ್ದು, ಪೋಷಕರ ಸ್ಫೂರ್ತಿ ಮತ್ತು ಮಾರ್ಗದರ್ಶನದ ಮೂಲಕ ಅವರು ವೈದ್ಯಕೀಯ ಕ್ಷೇತ್ರವನ್ನು ಪ್ರವೇಶಿಸಲು ನಿರ್ಧರಿಸಿದ್ದಾರೆ.
ಉತ್ಕರ್ಷಾಳ ಈ ಸಾಧನೆಗೆ ಸಂಜಯ ಘೋಡಾವತ ಅಕಾಡೆಮಿಯ ಸಂಜಯ ಘೋಡಾವತ, ವಿನಾಯಕ ಭೋಸಲೆ ಸೇರಿದಂತೆ ಎಲ್ಲ ಪ್ರಾದ್ಯಾಪಕರು, ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಮತ್ತು ನಿರ್ಮಲ ಆಸ್ಪತ್ರೆಯ ಸಿಬ್ಬಂದಿ ವರ್ಗದವರು ಅಭಿನಂದನೆ ತಿಳಿಸಿದ್ದಾರೆ.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ 