ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನು ಉಪಯೋಗಿಸಿ
ಲೋಕದರ್ಶನ ವರದಿ
ಘಟಪ್ರಭಾ 05: ಯಾವಾಗಲೂ ಐ.ಎಸ್.ಐ ಅಂಗೀಕೃತ ಗುಣಮಟ್ಟದ ವಿದ್ಯುತ್ ಸಾಮಗ್ರಿಗಳನ್ನೇ ಉಪಯೋಗಿಸಿ ವಿದ್ಯುತ್ ಉಳಿಸಿ ನಾಡು ಬೆಳೆಸಿ ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಎಮ್.ಎಸ್ ನಾಗನ್ನವರ ತಿಳಿಸಿದರು.
ಅವರು ಬುಧವಾರದಂದು ಘಟಪ್ರಭಾ-1 ಶಾಖೆಯ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತಿ ಕಾರ್ಯಾಲಯದಲ್ಲಿ ಗ್ರಾಹಕರೊಂದಿಗೆ ವಿದ್ಯುತ ಬಳಕೆಯ ಕುರಿತು ಜಾಗೃತಿ ಸಭೆಯಲ್ಲಿ ಮಾತನಾಡಿದರು. ಅಪಾಯವಾಗುವಂತ ಸಂದರ್ಭದಲ್ಲಿ ಹೆಸ್ಕಾಂ ಕಛೇರಿಗೆ ತಕ್ಷಣ ತಿಳಿಸಿದರೆ ನಮ್ಮ ನಿಗಮದ ಲೈನಮನ್ ಆಗಮಿಸಿ ಅಪಾಯವಾಗದಂತೆ ತಡೆಯುತ್ತಾರೆ. ವಿದ್ಯುತ್ತಿನ ಅಪವ್ಯಯ, ವಿದ್ಯುತ್ನಿಂದ ಅಪಾಯವಾಗದಂತೆ ಹೇಗೆ ಬಳಸಬೇಕು, ಎಲ್.ಇ.ಡಿ ಹಾಗೂ ಸೌರಶಕ್ತಿಯಿಂದ ವಿದ್ಯುತ್ ಉಳಿತಾಯ, ವಿದ್ಯುತ್ನಿಂದ ಆಗುವ ಅನಾಹುತ ಹಾಗೂ ಸುಲಭವಾಗಿ ಬಳಸುವ ವಿಧಾನಗಳ ಮಾಹಿತಿಯನ್ನು ಮನ ಮುಟ್ಟುವಂತೆ ಸಾರ್ವಜನಿಕರಿಗೆ ವಿವರಿಸಿದರು.
ಹೆಸ್ಕಾಂ ಘಟಪ್ರಭಾ ಉಪ-ವಿಭಾಗ, ಗ್ರಾಹಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ವಿದ್ಯುತ್ ಬಳಕೆಯಲ್ಲಿ ಸುರಕ್ಷತೆಯ ಸಲಹೆಗಳು, ಉಳಿತಾಯದ ಕ್ರಮಗಳು, ಎಲ್.ಇ.ಡಿ ಬಳಕೆಯ ಪ್ರಯೋಜನಗಳು, ಸೌರಶಕ್ತಿ ಬಳಸುವುದು ಇತ್ಯಾದಿಗಳ ಬಗ್ಗೆ ಗ್ರಾಹಕರಲ್ಲಿ ಜಾಗೃತಿಯನ್ನು ಮೂಡಿಸಿದರು.
ಶಾಖಾ ಅಧಿಕಾರಿ ನಿಂಗಪ್ಪ ಕುರಬೇಟ ಮಾತನಾಡಿ ಪೋಸ್ಟ್ ಆಪೀಸನಲ್ಲಿ ಆಧಾರ ಕಾರ್ಡದ ಝರಾಕ್ಸ ಕೊಟ್ಟರೆ ಒಂದು ಎಲ್.ಇ.ಡಿ ಬಲ್ಬವನ್ನು 70ರೂ ಕೊಡಲಾಗುವದು. ಬ್ಯಾನರ್ ಇತರೆ ಪ್ರಚಾರದ ವಸ್ತುಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಬಾರದು. ವಿದ್ಯುತ್ ಮಾರ್ಗಗಳ ಹತ್ತಿರ ಇರುವ ಮರದ ರೆಂಬೆಗಳನ್ನು ಕತ್ತರಿಸದೇ ಮಾಹಿತಿಯನ್ನು 1912 ಕರೆ ಮಾಡಿ ತಿಳಿಸಿರಿ ಎಂದರು.
ವೇದಿಕೆಯ ಮೇಲೆ ಪ.ಪಂ ಮುಖ್ಯಾಧಿಕಾರಿಗಳಾದ ಕೆ.ಬಿ.ಪಾಟೀಲ, ಪ.ಪಂ ಸದಸ್ಯರಾದ ಮಲ್ಲು ಕೋಳಿ, ಸಲೀಮ ಕಬ್ಬೂರ, ಗ್ರಾಮಸ್ಥರಾದ ಯಾಶೀನ ಕಬ್ಬೂರ, ಶೇಖರ ಕುಲಗೋಡ, ಲಕ್ಷ್ಮಣ ಮೇತ್ರಿ, ಮಲ್ಲಪ್ಪ ಕಚರೆ, ಕೆಂಚಪ್ಪ ನಾಯಿಕ, ದೇವಮಾನೆ ಕಾರ್ಯಕ್ರಮದಲ್ಲಿ ನೂರಾರು ಗ್ರಾಹಕರು ಹಾಗೂ ರೈತರು ಸೇರಿದಂತೆ ಅನೇಕರು ಇದ್ದರು.
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ
ನೀಟ್: ವಿದ್ಯಾರ್ಥಿಗಳ ಹೋರಾಟಕ್ಕೆ ಬೆಂಬಲ, ಮೃತ ವಿದ್ಯಾರ್ಥಿಗಳ ಆತ್ಮಕ್ಕೆ ಶಾಂತಿ ಕೋರಿ ಕ್ಯಾಂಡಲ್ ಪ್ರತಿಭಟನೆ
1991ರ ಆರ್ಥಿಕ ಸುಧಾರಣೆಗಳನ್ನು ಶ್ಲಾಘಿಸಿದ ಖರ್ಗೆ; ಸಮಗ್ರ ಅಭಿವೃದ್ಧಿಗೆ ಎರಡನೇ ಹಂತದ ಉದಾರೀಕರಣಕ್ಕೆ ಕರೆ
ಬಡ ಅಂಗವಿಕಲ ಸರ್ಫರಾಜ್ ಬಿಸ್ತಿಗೆ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದಿಂದ ಹೊಸ ವೀಲ್ಚೇರ್ ಉಡುಗೊರೆ 