ವ್ಯಕ್ತಿತ್ವ ವಿಕಸನಕ್ಕೆ ಪ್ರತಿಭಾ ಕಾರಂಜಿ ವೇದಿಕೆ ಬಳಸಿ : ಬೇವಿನಮರದ
Use Talent Fountain Platform for Personality Development : Neem
ಶಿಗ್ಗಾವಿ 23 : ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವ ವಿಕಸನ ಹಾಗೂ ಸ್ಪರ್ಧಾತ್ಮಕ ಮನೋಭಾವವನ್ನು ರೂಪಿಸಿಕೊಳ್ಳಲು ಪ್ರತಿಭಾ ಕಾರಂಜಿ ವೇದಿಕೆಯನ್ನು ಬಳಸಿಕೊಳ್ಳಬೇಕು ಎಂದು ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸೋಮಣ್ಣ ಬೇವಿನಮರದ ಹೇಳಿದರು. ಪಟ್ಟಣದ ಶ್ರೀಮಂತ ಬ.ಬು.ಮಾಮ್ಲೆದೇಸಾಯಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳಲ್ಲಿನ ಪ್ರತಿಭೆ ಅನಾವರಗೊಳಿಸಲು ಅವಕಾಶ ಕಲ್ಪಿಸುವ ಮಹತ್ತರವಾದ ಜವಬ್ದಾರಿ ಶಿಕ್ಷಕರ ಮೇಲಿದೆ, ಗ್ರಾಮೀಣ ಪ್ರದೇಶಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದ್ದರೂ ಅನಾವರಣಕ್ಕೆ ಸೂಕ್ತ ಅವಕಾಶ ಸಿಗದೇ ಕೊರಗುವಂತಾಗಿದೆ, ಗ್ರಾಮೀಣ ಮಕ್ಕನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಬಿ.ಅಂಬಿಗೇರ ಮಾತನಾಡಿ, ಪ್ರತಿಯೊಬ್ಬ ಮಕ್ಕಳಲ್ಲಿ ಒಂದೊಂದು ರೀತಿ ಕಲೆ, ಕೌಶಲ್ಯದ ಚೈತನ್ಯ ಇರುತ್ತದೆ.ಇದನ್ನು ಬಳಿಸಿಕೊಳ್ಳಲು ಪ್ರೋತ್ಸಾಹ ನೀಡಿ ವೇದಿಕೆ ಕಲ್ಪಿಸುವತ್ತ ಶಿಕ್ಷಣ ಇಲಾಖೆ ಮುಂದಾಗಿದೆ. ಶಿಕ್ಷಕರು, ಪಾಲಕರು ಸಹಕಾರ ನೀಡಿ ರಾಜ್ಯ, ರಾಷ್ಟ್ರ ಮಟ್ಟದ ವೇದಿಕೆಗಳಲ್ಲಿ ತಾಲೂಕಿನ ಮಕ್ಕಳು ಪಾಲ್ಗೊಳ್ಳುವಂತೆ ಪ್ರೋತ್ಸಾಹಿಸಿಬೇಕು. ಸ್ಪರ್ದೆಯಲ್ಲಿ ವಿಜೇತರ ಆಯ್ಕೆ ನಿರ್ಣಯ ನೀಡುವಾಗ ನಿರ್ಣಯಕರ ನಿರ್ಣಯ ನ್ಯಾಯುತವಾಗಿರಬೇಕು ಎಂದರು. ತಾಲೂಕು ಶಿಕ್ಷಣ ಸಮಿತಿ ಉಪಾಧ್ಯಕ್ಷ ದತ್ತಣ್ಣ ವೇರ್ಣೇಕರ ಮಾತನಾಡಿದರು.ತಾಪಂ.ಇಒ ಮಂಜುನಾಥ ಸಾಳಂಕೆ, ಪ್ರಾಚಾರ್ಯ ರಮಾಕಾಂತ ಭಟ್, ಕೆ.ಬಿ.ಚನ್ಬಪ್ಪ, ಕ್ಷೇತ್ರ ಸಮನ್ವಯಾಧಿಕಾರಿ ಗೀತಾಂಜಲಿ ತೆಪ್ಪದ, ಜಿ.ಎನ್.ಯಲಿಗಾರ, ಜಯಣ್ಣ ಹೆಸರೂರು, ವೀರಪಣ್ಣ ಮೇಟಿ, ನೌಕರರ ಸಂಘದ ಅಧ್ಯಕ್ಷ ಅರುಣ ಹುಡೇದಗೌಡ್ರ, ಶಬ್ಬೀರ ಮನಿಯಾರ್, ಶಿವಪ್ಪ ಚಿನ್ನಪ್ಪನವರ, ಬಿ.ಸ್ರೀನಿವಾಸ್, ಡಿ.ಎ.ಹಿರೇಮಠ, ಎಫ್.ಸಿ.ಕಾಡಪ್ಪಗೌಡ್ರ, ಬಿ.ವೈ.ಉಪ್ಪಾರ, ರಾಜಶೇಖರ ಹೆಸರೂರು, ಎಚ್.ಡಿ.ಕುಂಕೂರು, ನಾಗಪ್ಪ ಬೆಂತೂರು, ಪ್ರತಾಪ ನಾಯಕ, ಡಿ.ಕೆ.ಹೊಸಪೇಟೆ, ಪ್ರವೀಣ ಸಾಗರ ಸೇರಿದಂತೆ ಇತರರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 