ಇಂದಿನಿಂದ ಐತಿಹಾಸಿಕ ಪ್ರಸಿದ್ಧ ಮಾರ್ದಾನೆ ಗೈಬ್ ದರ್ಗಾದ ಉರುಸ್ ಆಚರಣೆ : ಎಂ ,ಪಾಷಾ ಕಾಟನೊ
Urus celebration of the historic and famous Mardane Ghaib Dargah from today: M, Pasha Katano
ಇಂದಿನಿಂದ ಐತಿಹಾಸಿಕ ಪ್ರಸಿದ್ಧ ಮಾರ್ದಾನೆ ಗೈಬ್ ದರ್ಗಾದ ಉರುಸ್ ಆಚರಣೆ : ಎಂ ,ಪಾಷಾ ಕಾಟನೊ
ಕೊಪ್ಪಳ 05: ಗರದ ಗುಡ್ಡಗಾಡು ಪ್ರದೇಶದಲ್ಲಿರುವ ಪುರಾತನ ಕಾಲದ ಧಾರ್ಮಿಕ ಐತಿಹಾಸಿಕ ಪ್ರಸಿದ್ಧ ಹಿಂದೂ ಮುಸ್ಲಿಮರ ಭಾವೈಕ್ಯತೆಯ ಪ್ರತೀಕ ಹಜರತ್ ಸೈಯದ್ ಮರದಾನೆ ಗೈಬ್(ರಆ) ದರ್ಗಾದ ಉರುಸ್ ಆಚರಣೆ ದಿ, 06 ಶುಕ್ರವಾರ ದಂದು ಜರುಗಲಿದೆ ಎಂದು ದರ್ಗಾ ಆಡಳಿತ ಮಂಡಳಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಂ ಪಾಷಾ ಕಾಟನ್ ಹೇಳಿದರು, ಅವರು ಪತ್ರಿಕಾ ಭವನ ದಲ್ಲಿ ಗುರುವಾರ ಏರಿ್ಡಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಪ್ರತಿ ವರ್ಷದಂತೆ ಈ ವರ್ಷವೂ ಸಹ ಸಡಗರ ಸಂಭ್ರಮದಿಂದ ಮತ್ತು ಅರ್ಥಪೂರ್ಣವಾಗಿ ಉರುಸ ಆಚರಣೆ ನಡೆಯಲಿದೆ ,ಅದೇ ದಿನ ಸಂಜೆ ವೇಳೆಗೆ ಬಹಿರಂಗ ಸಭೆ ಧಾರ್ಮಿಕ ಪ್ರವಚನ ರಾಷ್ಟ್ರೀಯ ಭಾವೈಕ್ಯತೆಯ ಕಾರ್ಯಕ್ರಮಗಳು ಜರುಗಲಿವೆ. ಇದರಲ್ಲಿ ಕಲಬುರ್ಗಿಯ ಖಾಜಾ ಬಂದ ನವಾಜ್ ದರ್ಗಾದ ಪೀಠಾಧಿಪತಿ ಹಾಗೂ ಧರ್ಮ ಗುರು ಹಜರತ್ ಸೈಯದ್ ಶಾ ಅಲಿ ಅಲ್ ಹುಸೇನಿ ಸಾಹೇಬರು ಮತ್ತು ಕೊಪ್ಪಳದ ಮುಫ್ತಿ ಮೌಲಾನ ಮೊಹಮ್ಮದ್ ನಜೀರ್ ಅಹಮದ್ ಖಾದ್ರಿ ತಸ್ಕಿನಿ ರವರು ಸೇರಿದಂತೆ ಗವಿಮಠದ ಪರಮಪೂಜ್ಯ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಪಾಲ್ಗೊಂಡು ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಹಾಗೂ ಕಾರ್ಯ ಕ್ರಮ ದಲ್ಲಿ ಆಶೀರ್ವಚನ ಮಾಡಲಿದ್ದಾರೆ, ಸಮಾರಂಭದಲ್ಲಿ ಸಚಿವರುಗಳಾದ ಜಮೀರ್ ಅಹಮದ್ ಖಾನ್, ಶಿವರಾಜ್ ತಂಗಡಗಿ ,ಸಂಸದ ಕೆ ರಾಜಶೇಖರ ಹಿಟ್ನಾಳ, ಶಾಸಕ ಕೆ ರಾಘವೇಂದ್ರ ಹಿಟ್ನಾಳ ,ಸೇರಿದಂತೆ ಇತರ ಜನ ಪ್ರತಿನಿಧಿಗಳು ವಿವಿಧ ರಾಜಕೀಯ ಗಣ್ಯರು ಅಲ್ಲದೆ ಜಿಲ್ಲಾಧಿಕಾರಿಗಳು ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ದರ್ಗಾ ಕಮಿಟಿಯ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಎಂ ಪಾಷಾ ಕಾಟನ್ ವಿವರಿಸಿದರು, ಹಾಗೂ ಸದರಿ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ರೀತಿಯಲ್ಲಿ ಪಾಲ್ಗೊಂಡು ಉರುಸ್ ಆಚರಣೆ ಕಾರ್ಯಕ್ರಮ ಮತ್ತು ಧರ್ಮ ಗುರುಗಳ ಆಶೀರ್ವಚನ ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿಕೊಂಡರು, ಈ ಸಂದರ್ಭ ದಲ್ಲಿ ಸಂಘಟಕರಾದ ಅಯ್ಯೋಬ ಆಡ್ಡೆವಾಲೆ, ಮುನೀರ್ ಅಹ್ಮದ್, ಇಕ್ಬಾಲ್ ಅಹಮದ್ ಸಿದ್ದಿಕಿ ,ಎಂ ,ಮಾನ್ವಿ ಪಾಷಾ ಮತ್ತು ನಜೀರ್ ಅಹ್ಮದ್ ಅದೋನಿ ಮುದುಗಲ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು,
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 