ಮರ್ದಾನೆ ಗೈಬ್ ದರ್ಗಾದ ಉರುಸ್ ಆಚರಣೆ ಸೂಫಿ ಸಂತರು ತೋರಿಸಿದ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು : ಶಾಸಕ ಪ್ರಸಾದ ಅಬ್ಬಯ್ಯ

ಮರ್ದಾನೆ ಗೈಬ್ ದರ್ಗಾದ ಉರುಸ್ ಆಚರಣೆ  ಸೂಫಿ ಸಂತರು ತೋರಿಸಿದ ಮಾರ್ಗದಲ್ಲಿ ಬದುಕು ಕಟ್ಟಿಕೊಳ್ಳಬೇಕು :  ಶಾಸಕ ಪ್ರಸಾದ ಅಬ್ಬಯ್ಯ  Urus celebration at Mardane Ghaib Dargah: We should live our lives according to the path shown by Su

 

           ಕೊಪ್ಪಳ 07:  ನಮ್ಮ ಭಾರತ ದೇಶಕ್ಕೆ ನಮ್ಮ ನಾಡಿಗೆ ಸೂಫಿ ಸಂತರ ಕೊಡುಗೆ ಅಪಾರವಾಗಿದೆ ಅವರು ತೋರಿಸಿದ ಮಾರ್ಗದಲ್ಲಿ ನಾವುಗಳು ನಮ್ಮ ನಮ್ಮ ಬದುಕು ಕಟ್ಟಿ ಕೊಂಡು ಬದುಕು ಸಾಗಿಸಿದರೆ ಜೀವನ ಸಾರ್ಥಕವಾಗುತ್ತದೆ ಎಂದು ಕರ್ನಾಟಕ ರಾಜ್ಯ ಕೊಳಚೆ ನಿರ್ಮೂಲನ ಮಂಡಳಿ ಅಧ್ಯಕ್ಷ ಹಾಗೂ ಹುಬ್ಬಳ್ಳಿ ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ಪ್ರಸಾದ್ ಅಬ್ಬಯ್ಯ ಅಭಿಪ್ರಾಯ ಪಟ್ಟರು, ಅವರು ಶುಕ್ರವಾರ ಸಂಜೆ ವೇಳೆಯಲ್ಲಿ ನಗರದ  ವರ ವಲಯ ಗುಡ್ಡಗಾಡು ಪ್ರದೇಶದಲ್ಲಿರುವ ರಾಷ್ಟ್ರೀಯ ಭಾವೈಕ್ಯತೆಯ ಕೇಂದ್ರ ಐತಿಹಾಸಿಕ ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಹಜರತ್ ಮರ್ದಾನೆ ಗೈಬ (ರಆ) ದರ್ಗಾದ ಉರುಸ್ ಆಚರಣೆ ಸಂದರ್ಭದಲ್ಲಿ ಏರಿ​‍್ಡಸಿದ ರಾಷ್ಟ್ರೀಯ ಭಾವೈಕ್ಯತಾ ಸಮಾರಂಭ ದ ಉದ್ಘಾಟನೆ ನೆರವೇರಿಸಿ ಮಾತನಾಡಿದರು, ಮುಂದುವರೆದು ಮಾತನಾಡಿ ಸೂಫಿ ಸಂತರು ಹಾಕಿಕೊಟ್ಟ ಮಾರ್ಗದಲ್ಲಿ ಪ್ರತಿಯೊಬ್ಬರು ಪರಸ್ಪರ ರಾಷ್ಟ್ರೀಯ ಭಾವೈಕ್ಯತೆಗಳನ್ನು ಬೆಳೆಸಿಕೊಂಡು ಸಂವಿಧಾನದ ಅಡಿಯಲ್ಲಿ ಜೀವನ ಸಾಗಿಸಬೇಕು ಎಲ್ಲರೊಂದಿಗೆ ಬೆರೆತು ಉತ್ತಮ ಸಮಾಜ ನಿರ್ಮಾಣ ಮಾಡುವಲ್ಲಿ ಶ್ರಮಿಸಬೇಕು

           ಇಂತಹ ಕಾರ್ಯಕ್ರಮಗಳ ಮೂಲಕ ಒಳ್ಳೆಯ ಸಂದೇಶ ರವಾನೆ ಆಗಬೇಕು ಎಂದರು, ಸಂಸದ ಕೆ   ರಾಜಶೇಖರ ಹಿಟ್ನಾಳ ರವರು ಮಾತನಾಡಿ ನಮ್ಮ ನಾಡಿನಲ್ಲಿ ಸೂಫಿ ಸಂತರು ಎಲ್ಲರಿಗೆ ಉತ್ತಮ ಉಪದೇಶ ಮಾಡಿ ದಾರಿ ತೋರಿಸಿದ್ದಾರೆ ಕೊಪ್ಪಳದಲ್ಲಿ ಶ್ರೀ ಗವಿಮಠ ಮತ್ತು ಮರ್ದಾನೆ ಗೈಬ ದಂತಹ ಪವಿತ್ರ ಕ್ಷೇತ್ರ ಇದೆ ಇಲ್ಲಿ ಶಾಂತಿ ನೆಮ್ಮದಿ ಸುಖ ಸಮೃದ್ಧಿ ಇರುತ್ತದೆ ಯಾವುದೇ ಗೊಂದಲಮಯವಾದ ವಾತಾವರಣ ನಿರ್ಮಾಣ ಆಗುವುದಿಲ್ಲ, ಹಿಂದೂ ಮುಸ್ಲಿಮರು ಎಲ್ಲರೂ ಒಗ್ಗೂಡಿ ಇಂತಹ ಧಾರ್ಮಿಕ ಆಚರಣೆಗಳ ಮೂಲಕ ಸೂಫಿ ಸಂತರು ಗಳ ಆದರ್ಶಗಳನ್ನು ಪಾಲಿಸಬೇಕು ಎಂದರು,ಶಾಸಕ ಕೆ ರಾಘವೇಂದ್ರ ಹಿಟ್ನಾಳ ಮಾತನಾಡಿ ಹಜರತ್ ಮರ್ದಾನ ಗೈಬ್ ದರ್ಗಾದ  ಅಭಿವೃದ್ಧಿ ಕಾರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ,ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಬೇಕು ಅವರ ನ್ಯಾಯ ಸಮ್ಮತ ಬೇಕು ಬೇಡಿಕೆಗಳ ಈಡೇರಿಕೆಗಳಿಗಾಗಿ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ ಸಿದ್ಧವಾಗಿದೆ ಎಂದರು, ಸಮಾರಂಭದ ಅಧ್ಯಕ್ಷತೆಯನ್ನು ದರ್ಗಾದ ಆಡಳಿತ ಮಂಡಳಿ ಅಧ್ಯಕ್ಷರಾದ ಎಂ ಪಾಷಾ ಕಾಟನ್ ವಹಿಸಿ ಮಾತನಾಡಿ ಉರುಸ್ ಆಚರಣೆ ಯಶಸ್ವಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಅಭಿನಂದಿಸಿದರು,  

          ಸಮಾರಂಭದ ದಿವ್ಯ ಸಾನಿಧ್ಯವನ್ನು ವಹಿಸಿದ್ದ ಧರ್ಮ ಗುರುಗಳು ಮೌಲಾನ ಮುಫ್ತಿ ಮೊಹಮ್ಮದ್ ನಜೀರ್ ಅಹ್ಮದ್ ಖಾದ್ರಿ ತಸ್ಕಿನಿ ರವರು ಆಶೀರ್ವಚನ ನೀಡಿ ಧಾರ್ಮಿಕ ಪ್ರವಚನ ಮಾಡಿದರು, ಎಸ್ ಡಿ ಪಿ ಐ ರಾಜ್ಯ ಘಟಕದ ಕಾರ್ಯದರ್ಶಿ ರಿಯಾಜ್ ಕಡಂಬ ರವರು ಮಾತನಾಡಿ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯ ಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದಿಂದ ಸಿಗಬಹುದಾದ ನ್ಯಾಯ ಸಮ್ಮತ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿದರು, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರಸನ್ನ ಗಡಾದ್ ರವರು ಮಾತನಾಡಿ ತೀರ ಹಿಂದುಳಿದ ಅಲ್ಪಸಂಖ್ಯಾತ ಸಮುದಾಯ ಗಳ ಬೇಡಿಕೆಗಳನ್ನು ನಮ್ಮ ಶಾಸಕರು ನೇರ ಸ್ಪಂದನೆ ನೀಡಿ ಈಡೇರಿಸುತ್ತಾರೆ ನಮ್ಮ ಪ್ರಾಧಿಕಾರದಿಂದ ಈ ಭಾಗದ ಹುಲಿಕೆರೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದರು, ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಜೈನ್ ಸಮಾಜದ ಮುಖಂಡ ಮಹೇಂದ್ರ ಚೋಪ್ರಾ ಮಾತನಾಡಿ ಸೂಫಿ ಸಂತರು ಋಷಿಮುನಿಗಳು ಸಮಾಜದಲ್ಲಿ ಪರಸ್ಪರ ಶಾಂತಿ ನೆಮ್ಮದಿ ಸಮೃದ್ಧಿ ಗಳ ಬಗ್ಗೆ ಮಾರ್ಗದರ್ಶನ ಮಾಡಿದ್ದಾರೆ ಅವರ ಹೇಳಿದ ಹಾಗೆ ನಾವುಗಳು ಪರಸ್ಪರ ಎಲ್ಲರೂ ಉತ್ತಮ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಶ್ರಮಿಸಬೇಕಾಗಿದೆ ಎಂದರು ,

             ಯುವ ನಾಯಕ ಅಮರೇಶ್ ಕರಡಿ ಸಮಾಜದ ಮುಖಂಡ ಕೆಎಂ ಸೈಯದ್ ಮಾತನಾಡಿದರು,ಸಮಾರಂಭದಲ್ಲಿ  ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಸಮಾಜದ ಮುಖಂಡ ಅಮ್ಜದ್ ಪಟೇಲ್ ಸಮಾಜದ ಹಿರಿಯ ಮುಖಂಡ ಹಾಗೂ ಪ್ರಾಧಿಕಾರದ ಸದಸ್ಯ   ಭಾಷೂ ಸಾಬ್ ಖತೀಬ್ ,,ಶ್ರೀ ಗವಿಸಿದ್ದೇಶ್ವರ ಅರಬನ್ ಬ್ಯಾಂಕ್ ಅಧ್ಯಕ್ಷ ರಾಜಶೇಖರ್ ಅಡೂರ್, ಎಪಿಎಂಸಿ ಮಾಜಿ ಅಧ್ಯಕ್ಷ ಶರಣಪ್ಪ ಸಜ್ಜನ್, ಬಿಜೆಪಿ ನಾಯಕ ಡಿ ರಾಮಣ್ಣ, ಹಿರಿಯ ನ್ಯಾಯವಾದಿ ಪಿ ಆರ್ ಹೊಸಳ್ಳಿ, ರಾಜಾಬಾಗ ಸವಾರ್ ದರ್ಗಾ ಕಮಿಟಿ ಅಧ್ಯಕ್ಷ ಮೌಲಾ ಹುಸೇನ್ ಜಮೆದಾರ್, ಉಡಾನ್ ಡೆವಲಪರ್ಸ್‌ ಸಂಸ್ಥೆಯ ಅಧ್ಯಕ್ಷ ಹಾಜಿ ಸಾಧಿಕ್ ಮೋಸಿನ್ ಅತ್ತಾರ್, ಯುವ ನಾಯಕ ಆರ್ ಎಂ ರಫಿ, ಖಾಜಾ ವಲಿ ಬನ್ನಿಕೊಪ್ಪ, ಹುಸೇನ್ ಪೀರ ಮುಜಾವರ್ ಜಿಲಾನ್ ಮೈ ಲೈಕ್ ಮಾನ್ವಿ ಪಾಷಾ, ಫಕ್ರುದ್ದೀನ್ ಸಾಬ್ ನದಾಫ್ ಮುನೀರ್ ಅಹ್ಮದ್ ಗೊತ್ವಾಲ್ , ಸೈಯದ್ ನಾಸಿರುದ್ದೀನ್ ಹುಸೇನಿ, ಸೈಯದ್ ಮೆಹಮ್ಮದ್ ಹುಸೇನಿ ಬಲ್ಲೆ, ಸಲೀಂ ಅಳವಂಡಿ ಸಲೀಂ ಖಾದ್ರಿ ಸಲೀಂ ಮೆಹಬೂಬ್ ಅರಗಂಜಿ ,ಹಾಜಿ ಹುಸೇನಿ ಗೊಂಡಬಾಳ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ಗಾಯಕ ಕಲಾವಿದ ಭಾಷಾ ಹಿರೇಮನಿ ಕಿನ್ನಾಳ ರವರು ಕಾರ್ಯಕ್ರಮ ನಿರೂಪಿಸಿ ಆರಂಭದಲ್ಲಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು, ಉರುಸ್ ಪ್ರಯುಕ್ತ ಮೂರು ದಿನಗಳ ಕಾಲ ಅನ್ನಸಂತರೆ​‍್ಣ ಜರುಗಿತು ಸಹಸ್ರಾರು ಸಂಖ್ಯೆಯ ಹಿಂದೂ ಮುಸ್ಲಿಂ ಭಕ್ತ ಸಮೂಹ ಅನ್ನ ಸಂತರೆ​‍್ಣಯಲ್ಲಿ ಪಾಲ್ ಗೊಂಡಿರುವದಲ್ಲದೆ ಉರುಸಿನ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಇಲಾಖೆಯ ವತಿಯಿಂದ ಸರಕಾರದ ಯೋಜನೆಗಳ ಮಾಹಿತಿ ನೀಡುವ ಕೇಂದ್ರ ಸ್ಥಾಪಿಸಲಾಗಿತ್ತು ಅಲ್ಲದೆ ಕಾನೂನು ಅರಿವು ಮೂಡಿಸುವ ವ್ಯವಸ್ಥೆ ಮತ್ತು ರಕ್ತದಾನ ಸಹ ವ್ಯವಸ್ಥೆ ಮಾಡಲಾಗಿ ಯುವಕರು ರಕ್ತದಾನ ಮಾಡಿ ಜೀವ ಉಳಿಸುವಂತಹ ಪುಣ್ಯದ ಕೆಲಸಕ್ಕೆ ಸಹಕಾರ ನೀಡಿರುವುದಕ್ಕೆ ಸಮಿತಿಯ ಸರ್ವ ಪದಾಧಿಕಾರಿಗಳು ಎಲ್ಲರಿಗೂ ಅಭಿನಂದಿಸಿದರು, ನಂತರ ಕವ್ವಾಲಿ ಕಾರ್ಯಕ್ರಮ ಇತರ ಸಾಂಸ್ಕೃತಿಕ ಸಾಹಿತ್ಯ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿ ಜನ ಮನರಂಜಿಸಿತು.