ಬಾಬು ಜಗಜೀವನ ರಾಮ್ ಮತ್ತು ಡಾ. ಬಿ. ಆರ್. ಅಂಬೇಡ್ಕರ ಅಂಥ ವ್ಯಕ್ತಿಗಳ ಆದರ್ಶಗಳ ಪಾಲನೆ
Upholding the ideals of figures like Babu Jagjivan Ram and Dr. B. R. Ambedkar
ಲೋಕದರ್ಶನ ವರದಿ
ಯರಗಟ್ಟಿ 16: ಮಾಜಿ ಉಪ ಪ್ರಧಾನಿ ಡಾ.ಬಾಬು ಜಗಜೀವನ ರಾಮ್ ಮತ್ತು ಡಾ. ಬಿ. ಆರ್. ಅಂಬೇಡ್ಕರ ಅವರುನ ದಲಿತರ ಕ್ಷೇಮಾಭಿವದ್ಧಿಗೆ ಹೋರಾಡಿದ್ದರು. ದಲಿತರಿಗೆ ಸಾಮಾಜಿಕ ನ್ಯಾಯ ಪ್ರತಿಪಾದಿಸುತ್ತಿದ್ದರು. ಅಂಥ ವ್ಯಕ್ತಿಗಳ ಆದರ್ಶಗಳ ಪಾಲನೆ ನಮ್ಮೆಲ್ಲರಿಂದ ಆಗಬೇಕೆಂದು ಶಾಸಕ ವಿಶ್ವಾಸ ವ್ಯದೈ ಹೇಳಿದರು.
ಜಿಲ್ಲಾ ಪಂಚಾಯತ ಬೆಳಗಾವಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ, ಕೆ.ಆರ್.ಐ.ಡಿ.ಎಲ್ ಸವದತ್ತಿ ಘಟಕದ ಮೂಲಕ ಯರಗಟ್ಟಿ ಪಟ್ಟಣದ ಅಂಬೇಡ್ಕರ ನಗರದಲ್ಲಿ 50 ಲಕ್ಷ ರೂ.ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡ ಡಾ.ಬಾಬು ಜಗಜೀವನ ರಾಮ ಭವನವನ್ನು ಶಾಸಕ ವಿಶ್ವಾಸ ಉದ್ಘಾಟಿಸಿ ಮಾತನಾಡಿದ ಅವರು ಇತಿಹಾಸದಲ್ಲಿ ಒಂದು ಸ್ಮರಣೀಯ ದಿನ. ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿದ ಮಹಾನ್ ಚೇತನದ ಸ್ಮರಣಾರ್ಥವಾಗಿ ನಿರ್ಮಾಣಗೊಂಡ ನೂತನ ಭವನವನ್ನು ಇಂದು ಸಾರ್ವಜನಿಕರ ಸೇವೆಗೆ ಸಮರ್ಿಸಲಾಗಿದೆ.
ಈ ಭವನವು ಕೇವಲ ಕಟ್ಟಡವಲ್ಲ, ಇದು ಸಮುದಾಯದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಸಮಾಗಮ ತಾಣವಾಗಲಿದೆ. ಸಮುದಾಯದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಸೌಲಭ್ಯಗಳು ತಲುಪಬೇಕು ಮತ್ತು ನಮ್ಮ ತಾಲೂಕಿನ ಮೂಲಭೂತ ಸೌಕರ್ಯಗಳು ವಿಶ್ವದರ್ಜೆಗೆ ಏರಬೇಕು ಎಂಬುದು ನಮ್ಮ ಆಶಯ ಎಂದು ಹೇಳಿದರು.
ಅಲ್ಲದೆ ಈ ಸಂದರ್ಭದಲ್ಲಿ ಸನ್ 2025-26ನೇ ಸಾಲಿನ ಎಸ್.ಎಫ್.ಸಿ ಮುಕ್ತನಿಧಿ - ಎಸ್.ಸಿ.ಎಸ್.ಪಿ ಯೋಜನೆಯಡಿಯಲ್ಲಿ ಪಟ್ಟಣದ ಡಾಽಽ ಬಿ. ಆರ್. ಅಂಬೇಡ್ಕರ್ ಭವನ ಹಾಗೂ ಡಾಽಽ ಬಾಬು ಜಗಜೀವನ ರಾಮ್ ಭವನಕ್ಕೆ ಸುಸಜ್ಜಿತ ಪೀಠೋಪಕರಣಗಳನ್ನು ವಿತರಿಸಲಾಯಿತು.
ಈ ವೇಳೆ ತಹಶೀಲ್ದಾರ ಎಂ. ವ್ಹಿ. ಗುಂಡಪ್ಪಗೋಳ, ಪ. ಪಂ. ಮುಖ್ಯಾಧಿಕಾರಿ ಮಹೇಶ ಭಜಂತ್ರಿ, ಸಮಾಜ ಕಲ್ಯಾನ ಇಲಾಖೆ ಅಧಿಕಾರಿ ಆರ್. ಆರ್. ಕುಲಕರ್ಣಿ, ಕೆ.ಆರ್.ಐ.ಡಿ.ಎಲ್ ಎಇಇ ಸಚೀನ ಕಾಂಬಳೆ, ಕೆ.ಆರ್.ಐ.ಡಿ.ಎಲ್ ಇಂಜನಿಯರ ಆನಂದ ಬೆನಕಟ್ಟಿ ಹಾಗೂ ದಲಿತ ಸಮುದಾಯ ಮುಖಂಡರಾದ ಬಾಸ್ಕರ ಹಿರೇಮೆತ್ರಿ, ಲಕ್ಕಪ್ಪ ಹುಣಶೀಕಟ್ಟಿ, ಸಂತೋಷ ಚನ್ನಮೇತ್ರಿ, ಸುರೇಶ ಭಜಂತ್ರಿ, ವಿಲನ್ಸ್ ಸೊಪ್ಪಡ್ಲ, ಯಲ್ಲಪ್ಪ ಪಟ್ಟೆಪ್ಪನ್ನವರ, ಸುರೇಶ ತಮ್ಮಣ್ಣವರ, ಹನಮಂತ ನರೇರ, ಶ್ಯಾಮ ಕಾರೆಪ್ಪನ್ನವರ, ನಾಗಪ್ಪ ಪಡೆಪ್ಪನ್ನವರ, ಚಿದಂಬರ ಕಟ್ಟಿಮನಿ, ಪ. ಪಂ. ಸದಸ್ಯರಾದ ನೀಖಲ ಪಾಟೀಲ, ಹನಮಂತ ಹಾರುಗೊಪ್ಪ, ಸಲೀಮಬೇಗ ಜಮಾದಾರ, ವಿಠ್ಠಲಗೌಡ ದೇವರಡ್ಡಿ, ಮಲಿಕಸಾಬ ಬಾಗವಾನ, ಜೆ. ರತ್ನಾಕರ ಶೆಟ್ಟಿ, ಫಾರುಕ ಅತ್ತಾರ ಸೇರಿದಂತ ಅನೇಕ ದಲಿತ ಮುಖಂಡರು ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 