ನಿಯೋಜಿತ ಸ್ವಾಮಿ ವಿವೇಕಾನಂದ ಪುತ್ಥಳಿ ಅನಾವರಣ: ಸುನೀಲ ಪಾಂಗಮ

ನಿಯೋಜಿತ ಸ್ವಾಮಿ ವಿವೇಕಾನಂದ ಪುತ್ಥಳಿ ಅನಾವರಣ: ಸುನೀಲ ಪಾಂಗಮ Unveiling of the commissioned statue of Swami Vivekananda: Sunil Pangam

  

          ಮಾಂಜರಿ 11: ಚಿಕ್ಕೋಡಿ ತಾಲೂಕಿನ ಯಕ್ಸೆಂಬಾ  ಪಟ್ಟಣದಲಿ  ವಿವೇಕ ಸೇವಾ ಪರಿವಾರದ ಸ್ವಾಮಿ ವಿವೇಕಾನಂದ ಯುವ ಅಭಿವೃದ್ಧಿ ಆರ್ಥಿಕ ಸಂಸ್ಥೆಯು ಇಂದಿಗೆ 25 ವಸಂತಗಳನ್ನು ಪೊರೈಸಿ ‘ಬೆಳ್ಳಿ ಮಹೋತ್ಸವ’ ಸಂಭ್ರಮ ಆಚರಿಸುತ್ತಿದೆ. ಇದರ ವಿಶೇಷವಾಗಿ ಸುಮಾರು 16 ಲಕ್ಷ ವೆಚ್ಚದಲ್ಲಿ ಸ್ವಾಮಿ ವಿವೇಕಾನಂದ ಪುತ್ಥಳಿ ನಿರ್ಮಾಣ ಮಾಡಲು ನಿರ್ಧರಿಸಿದೆ. ಅದಕ್ಕಾಗಿ ಸಮಿತಿಗೆ, ಚಾಲನೆ ನೀಡಲಾಗುವುದು ಎಂದು ಅಧ್ಯಕ್ಷ  ಸುನೀಲ ಪಾಂಗಮ ಹೇಳಿದರು.  ಅವರು ಪಟ್ಟಣದ ವಿವೇಕ ಕಾರ್ಯಲಯದಲ್ಲಿ ಏರಿ​‍್ಡಸಿದ್ದ ಸನ್ 2026 ನೇ ಸಾಲಿನ ವಿವೇಕ ಸೇವಾ ಸನ್ಮಾನದ ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳೊಸಿ ಮಾತನಾಡಿದರು.  ಇಸ್ವಿ  2001 ರಲ್ಲಿ ಪಟ್ಟಣದ ಶಿವಯೋಗ ಮಠದ ಲಿಂ ಸಂಗಮದೇವ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಪ್ರಾರಂಭದ ಸಂಸ್ಥೆ ಇಂದು 25 ನೇ ವರ್ಷದ ಬೆಳ್ಳಿ ಮಹೋತ್ಸವದ ಸಂಭ್ರಮ ಆಚರಿಸುತ್ತಿದೆ. ಸಾಮಾಜಿಕ ಕಾರ್ಯಗಳ ಜೊತೆ ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ಯ ಮಾಡಿಕೊಂಡು ಪಟ್ಟಣದ ಸಾಧಕರಿಗೆ ವಿವೇಕಾ ಸೇವಾ ಸನ್ಮಾನದ ಮೂಲಕ ಗೌರವಿಸಿ ಗುರುತಿಸುತ್ತಾ ಬಂದಿದೆ.

         ವೇದಿಕೆಯನ್ನು ರಾಮದುರ್ಗದ ಪೂಜ್ಯ ನೀಲಕಂಠ ಗಣಾಚಾರಿ ಮಹಾಸ್ವಾಮಿಗಳು, ನಿಡಸೋಶಿಯ ಜಗದ್ಗರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು, ಕನ್ನೇರಿಯ ಜಗದ್ಗರು ಅದೃಶ ಕಾಡಸಿದ್ಧೇಶ್ವರ ಮಹಾಸ್ವಾಮಿಗಳು ಚಿಂತಕ ಸೊಲೆಬೆಲೆ ಚಕ್ರವರ್ತಿ, ಪ್ರಮೋದಜೀ ಮುತಾಲಿಕ, ಅರವಿಂದಜೀ ದೇಶಪಾಂಡೆ, ಚಿಂತಕರು ವ್ಹಿ ಎಸ್ ಮಾಳಿ ಸಾಹಿತಿ ಲಿಂ ಡಾ. ಅನಿಲ ಕಮತಿ, ಹೀಗೆ ನಾಡಿನ ಅನೇಕ ಪೂಜ್ಯರು, ಚಿಂತಕರು ಹಂಚಿಕೊಂಡಿದ್ದಾರೆ. ಇಂದು ಬೆಳ್ಳಿ ಮಹೋತ್ಸವದ ಹಾಗೂ ನೂತನ ಅಧ್ಯಕ್ಷರಾದ ಮಹೇಶ ಅಣ್ಣಾಸಾಹೇಬ ಬಾಕಳೆ ಅವರ 50 ನೇ ರಕ್ತದಾನದ ನಿಮಿತ್ಯ  ರಕ್ತದಾನ ಶಿಬಿರ ಹಾಗೂ ಸಂಸ್ಥೆಯ ಅಂತರ್ಜಾಲ (ವೆಬ್‌ಸೈಟ್) ಉದ್ಘಾಟನೆ ಶನಿವಾರ ದಿ; 17 ರಂದು ಬೆಳೆಗ್ಗೆ 9.30 ಗಂಟೆಗೆ ಚಿಂಚಣಿ ಸಿದ್ಧಸಂಸ್ಥಾನ ಮಠದ ನೂತನ ಉತ್ತರಾಧಿಕಾರಿ ಶಿವಪ್ರಸಾದ ದೇವರು ಸಾನಿಧ್ಯ ವಹಿಸಲಿದ್ದಾರೆ. ಪಟ್ಟಣ ಪಂಚಾಯತಿ ಅಧ್ಯಕ್ಷ ಸುನೀಲ ಸಪ್ತಸಾಗರೆ ಉದ್ಘಾಟಸಲಿದ್ದಾರೆ. ಪಟ್ಟಣ ಪಂಚಾಯತ ಸದಸ್ಯರಾದ ರವೀಂದ್ರ ಮಾನೆ ಮುಖ್ಯ ಅತಿಥಿಗಳಾಗಿದ್ದಾರೆ. ಚಿಕ್ಕೋಡಿ ಜಿಲ್ಲಾ ಸಾಮರಸ್ಯ ವಿಭಾಗದ ಸಂಯೋಜಕರು ಮಾಜಿ ಸೈನಿಕರು ಗುರುದತ್ತಜೀ ಕಾಮತ ಅಧ್ಯಕ್ಷರಾಗಲಿದ್ದಾರೆ. ಪಟ್ಟಣ ಪಂಚಾಯತ ಹಾಗೂ ವಿವೇಕ ಸೇವಾ ಪರಿವಾರದ ಸದಸ್ಯ ಉಮೇಶ ಸಾತ್ವರ ನೇತೃತ್ವ ವಹಿಸಿಕೊಳ್ಳಲಿದ್ದಾರೆ. 150 ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಲಿದ್ದಾರೆ. ರಕ್ತದಾನಕ್ಕೆ ಚಿಕ್ಕೋಡಿಯ ಆದರ್ಶ ಬ್ಲಡ್ ಬ್ಯಾಂಕ್ ಸಹಕಾರ ನೀಡಲಿದೆ. 

        ಸಂಜೆ 5 ಗಂಟೆಗೆ ಸ್ವಾಮಿ ವಿವೇಕಾನಂದರ 163 ನೇ ಜಯಂತಿ ಹಾಗೂ ಬೆಳ್ಳಿ ಮಹೋತ್ಸವ ಆಚರಣೆ ನಿಮಿತ್ಯ ಯಕ್ಸಂಬಿ ಸುತ್ತಲಿನ 25 ಗ್ರಾಮಗಳಲ್ಲಿ ವರ್ಷವಿಡಿ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಚಾಲನೆ. ನಿಯೋಜಿತ ಸ್ವಾಮಿ ವಿವೇಕಾನಂದರ ಪುತ್ಥಳಿ ಅನಾವರಣ ಸಮಿತಿಗೆ ಚಾಲನೆ ಹಾಗೂ ವಿವೇಕ ಸೇವಾ ಸನ್ಮಾನದ ಸಮಾರಂಭ ನಡಯಲಿದ್ದು ಪಾವನ ಸಾನಿಧ್ಯವನ್ನು ಜೋಡಕುರಳಿಯ ಸಿದ್ಧಾರೂಢ ಆಶ್ರಮದ ಚಿದ್ಘನಾನಂದ ಮಹಾಸ್ವಾಮಿಗಳು ವಹಿಸುವರು. ಚಿಂತನವನ್ನು ರಾಷ್ಟ್ರೀಯ ಸ್ವಯಂಸೇವಕ ಸಂಘದ ಉತ್ತರ ಕರ್ನಾಟಕದ ಪ್ರಾಂತ ಕಾರ್ಯವಹಕರಾದ ರಾಘವೇಂದ್ರಜೀ ಕಾಗವಾಡ ಮುಖ್ಯ ಅತಿಥಿಗಳಾಗಿ ಚಿಂತನ ನೀಡಲಿದ್ದಾರೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ವಿಭಾಗ ಕಾರ್ಯವಾಹರಾದ ಚಿಕ್ಕೋಡಿಯ ಸಂಜಯಜೀ ಅಡಕೆ ಅಧ್ಯಕ್ಷ ವಹಿಸಲಿದ್ದಾರೆ. ವಿವೇಕ ಸೇವಾ ಪರಿವಾರದ ಸದಸ್ಯ ವಿಧ್ಯಾನಂದ ಶಿಂಧೆ ನೇತೃತ್ವ ನೀಡಲಿದ್ದಾರೆ ವಿಶೇಷವಾಗಿ ಸನ್ 2026 ನೇ ಸಾಲಿನ ವಿವೇಕ ಸೇವಾ ಸನ್ಮಾನ ಸಾಮಾಜಿಕ ಕಾರ್ಯಕರ್ತ ರಕ್ತದಾನಿ ಮಹೇಶ ಅಣ್ಣಾಸಾಹೇಬ ಬಾಕಳೆ ಅವರಿಗೆ ನಡೆಯಲಿದೆ ಎಂದು ಹೇಳಿದರು. ಸುರೇಶ ಜಾಧವ,ಶಿವಗೌಡ ಬಾವಚೆ, ನೀತೀನ ಧನುಮಾಳಿ, ಜಗದೀಶ ಮಠದ, ರವೀಂದ್ರ ಖೋತ ಮಹೇಶ ಬಾಕಳೆ ಭೀಮಾ ಹಿಟಣೆ, ಬಾಲಚಂದ್ರ ಬಾಕಳೆ, ಶೇಖರ ಉಮರಾಣಿ ಶಿವರಾಜ ರುಕಡೆ, ಶಿವಾಜಿ ಗೋಟುರೆ, ಉತ್ತಮ ಕಾಟಕರ, ರಾಮಪ್ಪ ಕೆರಗುಟ್ಟೆ, ಮತ್ತಿರರು ಉಪಸ್ಥಿತರಿದ್ದರು.