ಶಿಕ್ಷಕರ ಸಂಘ ತಾಲೂಕ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ

ಶಿಕ್ಷಕರ ಸಂಘ ತಾಲೂಕ ಘಟಕದ ಪದಾಧಿಕಾರಿಗಳ ಅವಿರೋಧ ಆಯ್ಕೆ  Unopposed election of office bearers of Teachers' Association Taluk unit

ಲೋಕದರ್ಶನ ವರದಿ 

ತಾಳಿಕೋಟಿ 22: ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ)ಬೆಂಗಳೂರು ತಾಲೂಕ ಘಟಕ ತಾಳಿಕೋಟಿ ಇದರ ಪದಾಧಿಕಾರಿಗಳು (2026 ರಿಂದ 2031ರ ಅವಧಿಯ) ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಎಸ್‌.ಜಿ. ಜಾಲವಾದಿ ತಿಳಿಸಿದರು. ಶುಕ್ರವಾರ ಪಟ್ಟಣದ ಎಸ್ ಕೆ ನಗರದಲ್ಲಿರುವ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಸಂಘದ ವತಿಯಿಂದ ಹಮ್ಮಿಕೊಂಡ ನೂತನ ಪದಾಧಿಕಾರಿಗಳ ಸನ್ಮಾನ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದರು.

2026 ರಿಂದ 2031ರವರೆಗಿನ 5 ವರ್ಷದ ಅವಧಿಗೆ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಳಿಕೋಟಿ ತಾಲೂಕ ಘಟಕದ ಅಧ್ಯಕ್ಷರಾಗಿ ಶಿಕ್ಷಕರಾದ ಭೀಮನಗೌಡ ವಜ್ಜಲ್,ಉಪಾಧ್ಯಕ್ಷರಾಗಿ ತಾರಾ ಲಮಾಣಿ, ಮಹಿಳಾ ಉಪಾಧ್ಯಕ್ಷರಾಗಿ ರೇಣುಕಾ ಬಸಪ್ಪ ಆಲೂರ, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ ಬಾಲಪ್ಪ ಬೀರಗೊಂಡ, ಕೋಶಾಧ್ಯಕ್ಷರಾಗಿ ರಮೇಶಕುಮಾರ ಹಿಪ್ಪರಗಿ, ಮಹಿಳಾ ಸಹ ಕಾರ್ಯದರ್ಶಿಯಾಗಿ ಸರಸ್ವತಿ ಬನ್ನೆಟ್ಟಿ, ಸಹ ಕಾರ್ಯದರ್ಶಿಗಳಾಗಿ ಅಲ್ತಾಫ್ ನಗಾರ್ಚಿ, ಎನ್ಕೆ ಸಿಪಾಯಿ, ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ನೀಲಮ್ಮ ಮೈಲೇಶ್ವರ, ಸಂಘಟನಾ ಕಾರ್ಯದರ್ಶಿಯಾಗಿ ಶ್ರೀಶೈಲ ನಾಯ್ಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸನ್ಮಾನ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಳಿಕೋಟಿ ತಾಲೂಕ ಘಟಕಕ್ಕೆ ಅವಿರೋಧವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಸಂಘದ ಅಧ್ಯಕ್ಷರಾದ ಬಿ.ಟಿ.ವಜ್ಜಲ್,ಉಪಾಧ್ಯಕ್ಷ ತಾರಾ ಲಮಾಣಿ ಹಾಗೂ ಪ್ರಧಾನ ಕಾರ್ಯದರ್ಶಿ ಸುರೇಶ ಬೀರಗೊಂಡ ಅವರು ಮಾತನಾಡಿ ಎಲ್ಲ ಶಿಕ್ಷಕ ಸದಸ್ಯರು ನಮ್ಮೆಲ್ಲರ ಮೇಲೆ ವಿಶ್ವಾಸವಿರಿಸಿ ಅವಿರೋಧವಾಗಿ ಆಯ್ಕೆ ಮಾಡಿ ಸೇವಾ ಅವಕಾಶವನ್ನು ಮಾಡಿಕೊಟ್ಟಿದ್ದಾರೆ ಅವರ ವಿಶ್ವಾಸಕ್ಕೆ ಧಕ್ಕೆ ಬಾರದ ಹಾಗೆ ನೋಡಿಕೊಂಡು ಅವರ ಸಮಸ್ಯೆಗಳ ಪರಿಹಾರಕ್ಕೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ ಎಂದರು.

ಶಿಕ್ಷಕ ಸುರೇಶ ವಾಲಿಕಾರ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಶಿಕ್ಷಕರಾದ ಡಿ ಎನ್ ಚಿಕ್ಕಮಠ ಜೆ. ಬಿ.ಕುಲಕರ್ಣಿ, ಕೆ.ಪಿ. ಬಿರಾದಾರ, ಬಾಲಾಜಿ ವಿಜಾಪುರ, ಎನ್‌. ಬಿ.ಮಂಟಗಿ, ಶಂಕರಗೌಡ ಬಿರಾದಾರ, ಎಸ್ ಎಂ ಬೈಚಬಾಳ, ಜಿ ಆರ್ ಸೋನಾರ, ಸಂಜು ಹಜೇರಿ, ಡಿಜೆ ಬಾಗೆವಾಡಿ, ಆರ್ ಎಲ್ ಕುಲಕರ್ಣಿ,ಎಸ್‌.ಎಂ.ಬೈಚಬಾಳ, ಹಣಮಂತ ಮಾದರ, ಎಂ.ಜಿ.ಕುನ್ನೂರ, ರಾಮನಗೌಡ ಬಿರಾದಾರ, ಶಿವನಗೌಡ ಅಸ್ಕಿ, ಬಿ.ಸಿ.ಹುಲ್ಲೂರ, ಎಸ್ ಎನ್ ಪಾಟೀಲ, ಕೆ.ಎನ್‌.ಜಮಾದಾರ, ಎ.ಐ. ಪತ್ತಾರ, ಸಂತೋಷ್ ನಾವಿ,ರಾಜು ಹಿರೇಮಠ, ಶಿಕ್ಷಕೀಯರಾದ ಜಿ.ಟಿ.ಬಿರಾದಾರ, ಎಲ್‌.ಎ.ಬಿಜಾಪುರ, ಎಸ್ ಹೆಚ್ ಗಾಳಪ್ಪಗೋಳ, ಬಿ.ಬಿ.ಕುಂಟೋಜಿ, ಎಸ್‌.ಟಿ. ತಮ್ಮಣ್ಣವರ, ಆರ್ ಸಿ ಇಂಗಳೆ, ಎಸ್ ಎಸ್ ಪಾಟೀಲ, ಎಂ ಎಸ್ ಹೊಸಗೌಡ್ರ ಎ.ಜಿ.ಕುಚನೂರ ಮತ್ತಿತರರು ಇದ್ದರು.